MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಶ್ರೀ ಗಂಧದಗುಡಿ: ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆದ ಮುತ್ತು! ಅಣ್ಣ-ತಂಗಿ ಸಂಬಂಧಕ್ಕೆ ಸಿಕ್ಕ ಹೊಸ ತಿರುವು!

ಶ್ರೀ ಗಂಧದಗುಡಿ: ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆದ ಮುತ್ತು! ಅಣ್ಣ-ತಂಗಿ ಸಂಬಂಧಕ್ಕೆ ಸಿಕ್ಕ ಹೊಸ ತಿರುವು!

ಚಂದನಾ, ಮುತ್ತುನನ್ನು ಅಣ್ಣ ಎಂದು ಕರೆಯುವುದರಿಂದ ಹರಿಗೆ ಕಸಿವಿಸಿಯಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಹೋದ ಮುತ್ತು, ಕೊನೆಗೆ ತನ್ನ ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆಯಲು ನಿರ್ಧರಿಸುತ್ತಾನೆ. ಈ ಅನಿರೀಕ್ಷಿತ ನಿರ್ಧಾರದಿಂದ ಚಂದನಾಳ ಮನಸ್ಸಿಗೆ ಏನಾಯ್ತು ನೀವೇ ನೋಡಿ.

2 Min read
Author : Sathish Kumar KH
Published : May 06 2026, 03:12 PM IST
Share this Photo Gallery
  • FB
  • TW
  • Linkdin
  • Whatsapp
16
ಚಂದನಾಗೆ ಕಸಿವಿಸಿ
Image Credit : Colors Kannada

ಚಂದನಾಗೆ ಕಸಿವಿಸಿ

ಪರಿಸ್ಥಿತಿಯ ಕೈಗೊಂಬೆಯಾಗಿ ಹರಿಯ ಕೈಯಿಂದ ಪೊಲೀಸ್ ಠಾಣೆಯಲ್ಲಿ ಚಂದನಾ ತಾಳಿ ಕಟ್ಟಿಸಿಕೊಂಡಿದ್ದಾಳೆ.  ಇದೀಗ ಅಪ್ಪನ ಮನೆಯಲ್ಲಿ ಒಲ್ಲದ ಮದುವೆ ಮುರಿದುಕೊಂಡು ಹರಿಯ ಮನೆಗೆ ಬಂದಿದ್ದಾಳೆ. ಆದರೆ, 5 ಜನ ಗಂಡಸರು ಇರುವ ಶ್ರೀಗಂಧದ ಗುಡಿ ಮನೆಯಲ್ಲಿ ದೊಡ್ಡವನಾದ ಮುತ್ತುನನ್ನು ಅಣ್ಣ ಎಂದು ಕರೆಯುತ್ತಾಳೆ. ಆದರೆ, ಇದೀಗ ಚಂದನಾ, ಮುತ್ತುನನ್ನು ಅಣ್ಣ ಎಂದು ಕರೆಯುತ್ತಿರುವುದಕ್ಕೆ ಹರಿಗೆ ತುಂಬಾ ಕಸಿವಿಸಿಯಾಗಿದೆ.

26
ಮುತ್ತು ಮುಂದೆ ಹರಿ ಆಕ್ರೋಶ
Image Credit : Colors Kannada

ಮುತ್ತು ಮುಂದೆ ಹರಿ ಆಕ್ರೋಶ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಮತ್ತು ಹರಿಯ ಲವ್ ಸ್ಟೋರಿ ಇದೀಗ ಬ್ರೇಕಪ್ ಆಗುವ ಹಂತಕ್ಕೆ ತಲುಪಿದೆ.

ಚಂದನಾ ಮುತ್ತಿಗೆ ಅಣ್ಣ ಎಂದು ಕರೆಯುತ್ತಿರುವುದಕ್ಕೆ ನಾನು ಗಂಡ ಎಂಬ ಭಾವನೆ ಬರುತ್ತಿಲ್ಲ ಎಂದು ಹರಿ ಸಿಟ್ಟು ಹೊರಹಾಕಿದ್ದಾನೆ. ಇನ್ನುಮುಂದೆ ಚಂದನಾ ನಿನ್ನನ್ನ ಅಣ್ಣ ಎಂದು ಕರೆಯಬಾರದು ಹಾಗೆ ಮಾಡು ಎಂದು ಮುತ್ತುಗೆ ಹೇಳುತ್ತಾನೆ.

Related Articles

Related image1
‘ಶ್ರೀ ಗಂಧದ ಗುಡಿ’ ಮುತ್ತು ಬಾಳಿಗೆ ನಾಯಕಿಯಾಗಿ ಎಂಟ್ರಿಕೊಟ್ಟ 'Miss Uttar Kannada' ದೃಷ್ಟಿ ನಾಯಕ್
Related image2
Shri Gandhada Gudi serial: ಇನ್‌ಸ್ಪೆಕ್ಟರ್‌ ಕಾಳೆಯಿಂದ ಚಂದನಾ, ಹರಿಶ್ಚಂದ್ರ ಬದುಕೇ ಬದಲಾಯ್ತು!
36
ಅಣ್ಣ ಎನ್ನಬೇಡ ಎಂದಿದ್ದಕ್ಕೆ ಅಳು
Image Credit : Colors Kannada

ಅಣ್ಣ ಎನ್ನಬೇಡ ಎಂದಿದ್ದಕ್ಕೆ ಅಳು

ತಮ್ಮನ ಸಂಸಾರ ಸರಿ ಮಾಡುವುದಕ್ಕೆ ಮುತ್ತು ಸೀದಾ ಚಂದನಾಗೆ ಹೋಗಿ ಅಣ್ಣ ಎಂದು ಕರೆಯಬೇಡ ಎನ್ನುತ್ತಾನೆ. ಆಗ ಚಂದನಾ ಗಳಗಳನೇ ಅಳುತ್ತಾಳೆ. ಇದರಿಂದ ಹರಿಯ ಪ್ಲ್ಯಾನ್ ಉಲ್ಟಾ ಆಗುತ್ತದೆ. ಹೀಗಾಗಿ, ಮುತ್ತು ಬೇರೆಯದೇಒಂದು ಉಪಾಯ ಮಾಡಿದ್ದಾನೆ.

46
ತಮ್ಮನನ್ನೇ ಭಾಮೈದ ಎಂದ ಹರಿ:
Image Credit : Colors Kannada

ತಮ್ಮನನ್ನೇ ಭಾಮೈದ ಎಂದ ಹರಿ:

ಮುತ್ತುಗೆ ಚಂದನಾನ ತಂಗಿ ಅಲ್ಲ ಅನ್ನೋದಕ್ಕಿಂತ ಹರಿನ ತಮ್ಮ ಅಲ್ಲ ಅನ್ನೋದೇ ಹೆಚ್ಚು ಸುಲಭ! ಹೌದು, ಈ ಮಾತು ಸ್ವತಃ ಚಂದನಾ-ಹರಿ ಹಾಗೂ ಮುತ್ತು ನಡುವೆ ಅನ್ವಯವಾಗುತ್ತಿದೆ. ಇಲ್ಲಿಚಂದನಾಗೆ ಮುತ್ತು ಅಣ್ಣ ಎನ್ನಬೇಡ ಎಂದಿದ್ದಕ್ಕೆ ದೊಡ್ಡ ರಾದ್ದಾಂತವೇ ನಡೆಯುತು.

ಹಾಗಾಗಿ, ಚಂದನಾಳ ಮುಂದೆ ನಿಂತು ನೀನು ನನ್ನೊಂದಿಗೆ ರಕ್ತ ಹಂಚಿಕೊಂಡು ಹುಟ್ಟದಿದ್ದರೂ ಸ್ವಂತ ತಂಗಿಗಿಂತಲೂ ಹೆಚ್ಚು. ಹೀಗಾಗಿ, ನೀನು ನನಗೆ ಅಣ್ಣ ಎನ್ನುವುದನ್ನ ನಾನು ಬೇಡ ಅನ್ನೋದಿಲ್ಲ. ಆದರೆ, ನಾನೇ ಹರಿಯನ್ನ ಭಾಮೈದ ಎಂದು ಕರೆಯುತ್ತೇನೆ ಎಂದು ಹೇಳುತ್ತಾನೆ.

56
ಒಟ್ಟಿಗೆ ಬಾಳಬೇಕು
Image Credit : Colors Kannada

ಒಟ್ಟಿಗೆ ಬಾಳಬೇಕು

ಇದೀಗ ಹರಿ ತನ್ನ ಒಡಹುಟ್ಟಿದ ಸ್ವಂತ ತಮ್ಮನನ್ನೇ ಭಾಮೈದ ಎಂದು ಕರೆಯುತ್ತಾನೆ. ಇದರಿಂದ ಚಂದನಾಳ ಮನಸ್ಸಿಗೆ ಕಸಿವಿಸಿ ಆಗುತ್ತದೆ. ಮಾತನ್ನು ಮುಂದವರೆಸಿದ ಮುತ್ತು ನೀನು ಮತ್ತು ಹರಿ ಗಂಡ-ಹೆಂಡತಿಯಾಗಿ ನೂರು ಕಾಲ ಸಂತೋಷದಿಂದ ಒಟ್ಟಿಗೆ ಬಾಳಬೇಕು.

66
ತಂಗಿ ಮತ್ತು ಭಾಮೈದ ಚೆನ್ನಾಗಿ ಬಾಳಬೇಕು
Image Credit : Colors Kannada

ತಂಗಿ ಮತ್ತು ಭಾಮೈದ ಚೆನ್ನಾಗಿ ಬಾಳಬೇಕು

ನಿಮ್ಮ ಮದುವೆ ನಡೆಯಬೇಕು ಎಂದು ದೇವರ ಇಚ್ಛೆಯೇ ಆಗಿರುತ್ತದೆ.ನೀನು ನನಗೆ ತಂಗಿ ಆದಮೇಲೆ ಹರಿ ನನಗೆ ಭಾಮೈದ ಆಗುತ್ತಾನೆ. ಅವನನ್ನು ಇನ್ನುಮುಂದೆ ಭಾಮೈದ ಎನ್ನುತ್ತೇನೆ. ಇವಾಗೆಲ್ಲಾ ಕ್ಲಿಯರ್ ಆಯ್ತು ಅಲ್ವಾ? ನನ್ನ ತಂಗಿ ಮತ್ತು ಭಾಮೈದ ಚೆನ್ನಾಗಿ ಬಾಳಬೇಕು ಅಂತಾ ಅನ್ನೋದು ಅಣ್ಣನ ಆಸೆ ಅಲ್ವಾ? ನನ್ನ ಮಾತು ನಡೆಸಿಕೊಡ್ತೀಯ ಅಲ್ವಾ ಎಂದು ಹೇಳುತ್ತಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕಲರ್ಸ್ ಕನ್ನಡ
ಟಿವಿ ಶೋ
ಸೀರಿಯಲ್ ಶೂಟಿಂಗ್

Latest Videos
Recommended Stories
Recommended image1
Bigg Boss ರಕ್ಷಿತಾ ಶೆಟ್ಟಿ ಮಾತಿಗೆ ವರ್ತೂರು ಸಂತೋಷ್​ ಸಿಕ್ಕಾಪಟ್ಟೆ ಅಸಮಾಧಾನ: 2 ಲಕ್ಷದ ಕಥೆ ಏನಾಯ್ತು
Recommended image2
Amruthadhaare: ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು: ಸೀರಿಯಲ್​ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ
Recommended image3
ಪತ್ನಿ ವಜ್ರದೋಲೆ ಕಳೆದಾಗ ಹುಡುಕಿ ಕೊಟ್ಟಿದ್ದ ಕೊರಗಜ್ಜ: ರೋಚಕ ಘಟನೆ ನೆನೆದ ವಿಜಯ ರಾಘವೇಂದ್ರ
Related Stories
Recommended image1
‘ಶ್ರೀ ಗಂಧದ ಗುಡಿ’ ಮುತ್ತು ಬಾಳಿಗೆ ನಾಯಕಿಯಾಗಿ ಎಂಟ್ರಿಕೊಟ್ಟ 'Miss Uttar Kannada' ದೃಷ್ಟಿ ನಾಯಕ್
Recommended image2
Shri Gandhada Gudi serial: ಇನ್‌ಸ್ಪೆಕ್ಟರ್‌ ಕಾಳೆಯಿಂದ ಚಂದನಾ, ಹರಿಶ್ಚಂದ್ರ ಬದುಕೇ ಬದಲಾಯ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved