- Home
- Entertainment
- TV Talk
- Shravani Subramanya: ಇಡೀ ರಾಜ್ಯವೇ ಬೆಚ್ಚಿಬೀಳೋ ಬ್ರೇಕಿಂಗ್ ನ್ಯೂಸ್- ರಾಜಕಾರಣಿ ಮಗನಿಂದ ಆಕೆಗೆ...
Shravani Subramanya: ಇಡೀ ರಾಜ್ಯವೇ ಬೆಚ್ಚಿಬೀಳೋ ಬ್ರೇಕಿಂಗ್ ನ್ಯೂಸ್- ರಾಜಕಾರಣಿ ಮಗನಿಂದ ಆಕೆಗೆ...
'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ, ರಾಜಕಾರಣಿ ಪುತ್ರ ಮದನ್‌ನಿಂದ ಮೋಸ ಹೋದ ಕೆಲಸದಾಕೆ ಸಾವಿತ್ರಿಗೆ ಶ್ರಾವಣಿ ನ್ಯಾಯ ಒದಗಿಸಿದ್ದಾಳೆ. ಮದನ್‌ನ ಕುತಂತ್ರವನ್ನು ರೆಕಾರ್ಡ್ ಮಾಡಿ, ಅದನ್ನು ಬಳಸಿ ಸಾವಿತ್ರಿಯೊಂದಿಗೆ ಅವನ ಮದುವೆ ಮಾಡಿಸುವಲ್ಲಿ ಶ್ರಾವಣಿ ಯಶಸ್ವಿಯಾಗುತ್ತಾಳೆ.

ರಾಜ್ಯವೇ ಬೆಚ್ಚಿಬೀಳುವ ಸುದ್ದಿ
ಇಡೀ ರಾಜ್ಯವೇ ಬೆಚ್ಚಿಬೀಳುವ ಸುದ್ದಿ ಇದು. ರಾಜಕಾರಣಿಯ ಮನೆಯಲ್ಲಿ ಇಂಥ ಮೋಸವಾದ್ರೆ ರಾಜ್ಯದ ಹೆಣ್ಣುಮಕ್ಕಳ ಗತಿಯೇನು? ಪ್ರತಿಷ್ಠಿತ ಮನೆಯಿಂದ ಹೆಣ್ಣುಮಗಳಿಗೆ ಮೋಸ... ಎನ್ನುವ ಬ್ರೇಕಿಂಗ್ ನ್ಯೂಸ್ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ನಲ್ಲಿ ತೋರಿಸಿದ್ದು, ಇದೀಗ ವಿಲನ್ಗಳು ಗಡಗಡ ಎನ್ನುತ್ತಿದ್ದಾರೆ.
ಬ್ರೇಕಿಂಗ್ ಸುದ್ದಿ
ಹೌದು. ಈ ಬ್ರೇಕಿಂಗ್ ಸುದ್ದಿ ಟಿವಿಗೆ ಕೊಟ್ಟಿರುವುದು, ಶ್ರಾವಣಿ! ಅಷ್ಟಕ್ಕೂ ವಿಜಯಾಂಬಿಕಾ ಪುತ್ರ ಮದನ್, ಮನೆಯ ಕೆಲಸದಾಕೆ ಸಾವಿತ್ರಿಯನ್ನು ಗರ್ಭಿಣಿ ಮಾಡಿ ಈಗ ಶ್ರೀಮಂತರ ಮನೆಯ ಮಗಳನ್ನು ಮದುವೆಯಾಗಲು ಹೊರಟಿದ್ದಾನೆ. ಸಾವಿತ್ರಿ ಸಾಯಲು ರೆಡಿಯಾದಾಗ ಶ್ರಾವಣಿ ಅದನ್ನು ತಡೆದಿದ್ದಾಳೆ.
ಮದ್ಯ ಸೇವನೆ
ಕೊನೆಗೆ ಮದನ್ಗೆ ಪಾಯಸದಲ್ಲಿ ಮದ್ಯವನ್ನು ಬೆರೆಸಿ ತಿನ್ನಿಸುವಲ್ಲಿ ಶ್ರಾವಣಿ ಮತ್ತು ಸುಬ್ರಹ್ಮಣ್ಯ ಸಕ್ಸಸ್ ಆಗಿದ್ದು, ತನ್ನ ಎಲ್ಲಾ ಆಟಗಳನ್ನು ಆತ ಕುಡಿದ ಅಮಲಿನಲ್ಲಿ ಬಾಯಿ ಬಿಟ್ಟಿದ್ದಾನೆ. ಅದನ್ನು ಶ್ರಾವಣಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.
ವಿಜಯಾಂಬಿಕಾಗೆ ಸಂಕಷ್ಟ
ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಮದನ್ ಮತ್ತು ವಿಜಯಾಂಬಿಕಾಗೆ ಈಗ ಸಂಕಷ್ಟ ಎದುರಾಗಿದೆ. ಆದರೂ ಸಾವಿತ್ರಿಯ ಜೊತೆ ಮದುವೆಗೆ ಒಪ್ಪದಿದ್ದಾಗ ಈ ವಿಷಯವನ್ನು ಟಿವಿಗೆ ನೀಡಿದ್ದಾಳೆ ಶ್ರಾವಣಿ. ಆದರೆ ಯಾರ ಮನೆಯ ವಿಷಯ ಎನ್ನುವುದನ್ನು ಬಾಯಿ ಬಿಡಲಿಲ್ಲ.
ನಡುಗಿದ ವಿಲನ್ಸ್
ಈ ಬ್ರೇಕಿಂಗ್ ಸುದ್ದಿ ಬರುತ್ತಲೇ ವಿಜಯಾಂಬಿಕಾ ನಡುಗಿ ಹೋಗಿದ್ದಾಳೆ. ಇದೇನಾದ್ರೂ ಅಣ್ಣನಿಗೆ ತಿಳಿದರೆ ಅಷ್ಟೇ ಕಥೆ ಎನ್ನುವುದು ಆಕೆಗೆ ಗೊತ್ತಿದೆ. ಮದನ್ ಮಾತ್ರ ತಾನು ಸಾವಿತ್ರಿಗೆ ತಾಳಿ ಕಟ್ಟುವುದಿಲ್ಲ ಎಂದು ಹಟ ಮಾಡಿದ್ದಾನೆ.
ತಾಳಿ ಕಟ್ಟಿಸಿದ ವಿಜಯಾಂಬಿಕಾ
ಫೋನ್ನಲ್ಲಿ ಶ್ರಾವಣಿ, ವಿಜಯಾಂಬಿಕಾಗೆ ತಾಳಿ ಕಟ್ಟಲು ಮಗನಿಗೆ ಹೇಳ್ತಿಯೋ ಅಥವಾ ಸಂಪೂರ್ಣ ಸ್ಟೋರಿಯನ್ನು ಟಿವಿಗೆ ಹೇಳಲೋ ಎಂದು ಬೆದರಿಸಿದಾಗ ತಾಳಿ ಕಟ್ಟುವಂತೆ ಮದನ್ಗೆ ವಿಜಯಾಂಬಿಕಾ ಹೇಳಿದ್ದಾಳೆ.
ಮದನ್ ಮತ್ತು ಸಾವಿತ್ರಿಯ ಮದುವೆ
ಅಲ್ಲಿಗೆ ಮದನ್ ಮತ್ತು ಸಾವಿತ್ರಿಯ ಮದುವೆಯಾಗುವುದು ಗ್ಯಾರೆಂಟಿ ಆಗಿದೆ. ಆದರೆ ಹೀಗೆ ಒತ್ತಾಯದಿಂದ ಮಾಡಿದ ಮದುವೆಯಿಂದ ಸಾವಿತ್ರಿಯ ಮುಂದಿನ ಸ್ಥಿತಿ ಏನೂ ಗೊತ್ತಿಲ್ಲ. ಆದರೆ ಶ್ರಾವಣಿ ಇರುವವರೆಗೆ ಅವಳಿಗೆ ತೊಂದರೆ ಇಲ್ಲ ಎನ್ನುವುದಂತೂ ದಿಟ.
ಸಾವಿತ್ರಿಗೆ ನ್ಯಾಯ
ಒಟ್ಟಿನಲ್ಲಿ ಈಗ ಶ್ರಾವಣಿ-ಸುಬ್ರಹ್ಮಣ್ಯ ಅವರಿಂದ ಸಾವಿತ್ರಿಗೆ ನ್ಯಾಯ ಸಿಕ್ಕಿದೆ. ಮುಂದೇನು ಎನ್ನೋದು ನೋಡಬೇಕಿದೆ ಅಷ್ಟೇ.