- Home
- Entertainment
- TV Talk
- ಲಕ್ಷ್ಮೀ ಬಾರಮ್ಮ ಮುಗಿಯುತ್ತಿದ್ದಂತೆ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ತಿದ್ದಾರೆ ಶಮಂತ್ ಗೌಡ
ಲಕ್ಷ್ಮೀ ಬಾರಮ್ಮ ಮುಗಿಯುತ್ತಿದ್ದಂತೆ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ತಿದ್ದಾರೆ ಶಮಂತ್ ಗೌಡ
ಬಿಗ್ ಬಾಸ್, ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ನಟ ಶಮಂತ್ ಬ್ರೋ ಗೌಡ ಇದೀಗ ತೆಲುಗು ಕಿರುತೆರೆಗೆ ಹಾರೋದಕ್ಕೆ ರೆಡಿಯಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡಿದ ಸೀರಿಯಲ್ ಲಕ್ಷ್ಮೀ ಬಾರಮ್ಮ (Lakshmi Baramma). ವಿಭಿನ್ನ ಕಥೆಯ ಜೊತೆಗೆ, ಹಲವು ತಿರುವುಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಸೀರಿಯಲ್ ಯಶಸ್ವಿಯಾಗಿತ್ತು. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ಗಮನ ಸೆಳೆದಿದ್ದವು.
ನಾಯಕನ ಪಾತ್ರದಲ್ಲಿ ಮಿಂಚಿದ್ದು, ಶಮಂತ್ ಬ್ರೋ ಗೌಡ (Shamanth Bro Gowda). ಸಿಂಗರ್ ವೈಷ್ಣವ್ ಕಾವೇರಿ ಕಷ್ಯಪ್ ಆಗಿ. ಅಮ್ಮ ಹಾಕಿದ ಗೆರೆಯನ್ನು ದಾಟದ, ಕೊನೆಗೆ ಅಮ್ಮನಿಂದಲೇ ತನ್ನ ಜೀವನದಲ್ಲಿ ಪ್ರೀತಿಯನ್ನು ಕಳೆದುಕೊಂಡು ಒದ್ದಾಡುವ ಮಗನಾಗಿ ಶಮಂತ್ ಉತ್ತಮವಾಗಿ ನಟಿಸಿದ್ದರು.
ಯೂಟ್ಯೂಬರ್ (Youtuber) ಆಗಿ ಗುರುತಿಸಿಕೊಂಡಿದ್ದ ಶಮಂತ್ ಬ್ರೋ ಗೌಡ, ಕನ್ನಡಿಗರಿಗೆ ಪರಿಚಿತರಾಗಿದ್ದು, ಬಿಗ್ ಬಾಸ್ ಸೀಸನ್ 8ರ ಮೂಲಕ. ಬಿಗ್ ಬಾಸ್ ನಲ್ಲಿ ತನ್ನ ಹಾಡು, ಸ್ಪರ್ಧೆಯ ಮೂಲಕ ಜನಮನ ಗೆದ್ದು, ಲಕ್ಷ್ಮೀ ಬಾರಮ್ಮ ಮೂಲಕ ಜನಪ್ರಿಯತೆ ಪಡೆದಿದ್ದರು.
ಇದೀಗ ಕಳೆದ ವಾರವೇ ಲಕ್ಷ್ಮೀ ಬಾರಮ್ಮ ಅಂತ್ಯ ಕಂಡಿದೆ. ತನ್ನ ತಪ್ಪು ಒಪ್ಪಿಕೊಳ್ಳದ ಕಾವೇರಿ, ಅಹಂಕಾರದಲ್ಲೇ ಬೆಟ್ಟದಿಂದ ಬಿದ್ದು ಸಾವನ್ನಪ್ಪುತ್ತಾಳೆ. ಕೊನೆಗೆ ಲಕ್ಷ್ಮೀ ಗರ್ಭಿಣಿಯಾಗುವ ಮೂಲಕ, ಎಲ್ಲರೂ ಸಂಭ್ರಮದಿಂದ ಸೀಮಂತ ಮಾಡುವ ಮೂಲಕ ಸೀರಿಯಲ್ ಕೊನೆಗೊಂಡಿತ್ತು.
ಇದರ ಮಧ್ಯೆ ಶಮಂತ್ ಗೌಡ ಪ್ರೀತಿಸಿದ ಹುಡುಗಿ ಮೇಘನಾ ಜೊತೆ ನಿಶ್ಚಿತಾರ್ಥವನ್ನು ಸಹ ಮಾಡಿಕೊಂಡಿದ್ದರು. ಶೀಘ್ರದಲ್ಲಿ ಮದುವೆಯಾಗುವ ಸೂಚನೆ ಕೂಡ ಕೊಟ್ಟಿದ್ದರು. ಹಾಗಾಗಿ ಎಲ್ಲರೂ ಸೀರಿಯಲ್ ಮುಗಿದ ತಕ್ಷಣ ಬ್ರೋ ಗೌಡ ಮದುವೆಯಾಗುತ್ತಾರೆ ಅಂದುಕೊಂಡಿದ್ದರು.
ಆದರೆ ಇದೀಗ ಲಕ್ಷ್ಮೀ ಬಾರಮ್ಮ ಮುಗಿಯುತ್ತಿದ್ದಂತೆ, ಶಮಂತ್ ಗೌಡ ತೆಲುಗು ಕಿರುತೆರೆಗೆ (telugu serial) ಹಾರಿದ್ದಾರೆ. ತೆಲುಗಿನಲ್ಲಿ ಹೊಸದಾಗಿ ಆರಂಭವಾಗಲಿರುವ ಧಾರಾವಾಹಿಯಲ್ಲಿ ಶಮಂತ್ ನಟಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಸೀರಿಯಲ್, ಯಾವ ಪಾತ್ರ ಅನ್ನೋದು ಮಾತ್ರ ಇನ್ನೂ ತಿಳಿದು ಬಂದಿಲ್ಲ.
ಈಗಾಗಲೇ ಕನ್ನಡದ ಸಾಕಷ್ಟು ಕಲಾವಿದರು ತೆಲುಗು ಕಿರುತೆರೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆಯಾಗಲಿದ್ದಾರೆ ಶಮಂತ್ ಗೌಡ. ಈಗಾಗಲೇ ತೆಲುಗು ಸೀರಿಯಲ್ ಶೂಟಿಂಗ್ ಆರಂಭವಾಗಿದ್ದು, ಶಮಂತ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ.