- Home
- Entertainment
- TV Talk
- ಹೊಸ ವರ್ಷಕ್ಕೆ ವಧುವಿನ ಲುಕ್‌ನಲ್ಲಿ ಕಂಗೊಳಿಸಿದ ವೈಷ್ಣವಿ ಗೌಡ: Saree Purchasing Details ಕೊಡಿ ಎಂದ ಫ್ಯಾನ್!
ಹೊಸ ವರ್ಷಕ್ಕೆ ವಧುವಿನ ಲುಕ್‌ನಲ್ಲಿ ಕಂಗೊಳಿಸಿದ ವೈಷ್ಣವಿ ಗೌಡ: Saree Purchasing Details ಕೊಡಿ ಎಂದ ಫ್ಯಾನ್!
‘ಸೀತಾರಾಮ’ ಸೀರಿಯಲ್ ಸೀತಾ ಆಗಿ ಮನಗೆಲ್ಲುತ್ತಿರೋ ವೈಷ್ಣವಿ ಗೌಡ ಅವರು ಹೊಸ ವರ್ಷಕ್ಕೆ ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಸೀತಾ ನಯಾ ಅವತಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ. ಮಾಡರ್ನ್, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ವಧುವಿನ ಲುಕ್‌ನಲ್ಲಿರೋ ಫೋಟೋಸ್ ಶೇರ್ ಮಾಡಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ವೈಷ್ಣವಿ ಗೌಡ ಥೇಟ್ ಮದುಮಗಳಂತೆ ರೆಡಿ ಆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಲದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಫೋಟೋ ನೋಡಿದ ನೆಟ್ಟಿಗರು ವೈಷ್ಣವಿ ಗೌಡ ಮದುವೆ ಫಿಕ್ಸ್ ಆಯ್ತಾ ಎಂದು ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೇ ವೈಷು ಬ್ಯೂಟಿ ನಿಮ್ಮ ನಿಜವಾದ ಮದುವೆ ಯಾವಾಗ, Saree Purchasing Details ಕೊಡಿ ಎಂದು ಕಾಮೆಂಟ್ ಮಾಡಿದ್ದು, ನಟಿಯ ಚೆಂದದ ಫೋಟೋಗೆ ಲೈಕ್ಗಳ ಸುರಿಮಳೆಯಾಗಿದೆ.
ಸೀತಾ ರಾಮ ನಟಿ ವೈಷ್ಣವಿ ಗೌಡ ಸದ್ಯ ಸೀತಾರಾಮ ಸೀರಿಯಲ್ ಮೂಲಕ ಪ್ರೇಕ್ಷಕರ ಮನಸು ಕದ್ದಿದ್ದಾರೆ. ಮುದ್ದು ಪುಟಾಣಿ ಸಿಹಿ ಅಮ್ಮನಾಗಿ ಕಾಣಿಸಿಕೊಂಡಿರುವ ವೈಷ್ಣವಿ ಪಾತ್ರಕ್ಕೆ ಭಾರೀ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.
ವೈಷ್ಣವಿ ಅವರಿಗೆ 1 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಇದ್ದಾರೆ. ವೈಷ್ಣವಿ ಆಗಾಗ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಟ್ರೆಂಡಿಂಗ್ ಮ್ಯೂಸಿಕ್‌ಗೆ ಮಾಡೋ ರೀಲ್ಸ್‌ಗಳು ಸಹ ವೈರಲ್ ಆಗುತ್ತವೆ.
ಸೀತಾ ರಾಮ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಆರಂಭವಾದ ಸೀತಾ ರಾಮ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ ಅವರು ಸೀತೆಯಾಗಿ ನಟಿಸುತ್ತಿದ್ದಾರೆ.
ಸೀತಾ ರಾಮ ಸೀರಿಯಲ್ ಮರಾಠಿ ಧಾರಾವಾಹಿ ತುಜೀ ರೇಶಿಮ್‌ಗತ್‌ನ ರಿಮೇಕ್. ಕನ್ನಡದ ಸೀತಾರಾಮ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮತ್ತು ರಿತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.