- Home
- Entertainment
- TV Talk
- ಚಂದನ್ ಶೆಟ್ಟಿ, ʼಸೀತಾ ವಲ್ಲಭʼ ನಟಿ ಸುಪ್ರೀತಾ ಸತ್ಯನಾರಾಯಣ್ ನಿಶ್ಚಿತಾರ್ಥದ ಸುಂದರ ಫೋಟೋಗಳಿವು!
ಚಂದನ್ ಶೆಟ್ಟಿ, ʼಸೀತಾ ವಲ್ಲಭʼ ನಟಿ ಸುಪ್ರೀತಾ ಸತ್ಯನಾರಾಯಣ್ ನಿಶ್ಚಿತಾರ್ಥದ ಸುಂದರ ಫೋಟೋಗಳಿವು!
ʼಸೀತಾ ವಲ್ಲಭʼ ಧಾರಾವಾಹಿಯ ಹೀರೋಯಿನ್ ಸುಪ್ರೀತಾ ಸತ್ಯನಾರಾಯಣ್ ಅವರು ಸಾಫ್ಟ್‌ವೇರ್ ಉದ್ಯೋಗಿ ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸುಪ್ರೀತಾ ಸತ್ಯನಾರಾಯಣ್ ಅವರು ಒಂದು ತಿಂಗಳ ಹಿಂದೆ, ಅಂದ್ರೆ ಕಳೆದ ಮಾರ್ಚ್‌ನಲ್ಲಿಯೇ ಎಂಗೇಜ್ ಆಗಿದ್ದರು. ಈಗ ಫೋಟೋ ಹಂಚಿಕೊಂಡು, ವಿಷಯವನ್ನು ಅಧಿಕೃತ ಮಾಡಿದ್ದಾರೆ.
ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಚಂದನ್ ಶೆಟ್ಟಿ ಎನ್ನುವವರ ಜೊತೆ ಎಂಗೇಜ್ ಆಗಿದ್ದಾರೆ.
ಕನ್ನಡ ನಟಿ ಸುಪ್ರೀತಾ ಮದುವೆ ಆಗಲಿರೋ ಚಂದನ್ ಶೆಟ್ಟಿ ಅವರು ಸಾಫ್ಟ್‌ವೇರ್ ಉದ್ಯೋಗಿ ಕೂಡ ಹೌದು ಎನ್ನಲಾಗಿದೆ. ಒಟ್ಟಿನಲ್ಲಿ ಇವರು ಮಲ್ಟಿ ಟಾಲೆಂಟೆಡ್ ಎನ್ನಬಹುದು.
ಸುಪ್ರೀತಾ ಹಾಗೂ ಚಂದನ್ ಶೆಟ್ಟಿ ಅವರು ಪ್ರೀತಿಸಿ ಮದುವೆಯಾಗುತ್ತಿದ್ದಾರಾ? ಅಥವಾ ಮನೆಯಲ್ಲಿ ನೋಡಿದ ಸಂಬಂಧವೋ ಎನ್ನುವ ಬಗ್ಗೆ ಇನ್ನೂ ಮಾಹಿತಿ ಇಲ್ಲ.
ಮೈಸೂರಿನ ಹುಡುಗಿ, ಕನ್ನಡ ನಟಿ ಸುಪ್ರೀತಾ ಸತ್ಯನಾರಾಯಣ್ ಅವರ ಮದುವೆ ಯಾವಾಗ? ಎಲ್ಲಿ ನಡೆಯತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಎಂಗೇಜ್‌ಮೆಂಟ್, ಮದುವೆ ಬಗ್ಗೆ ಸುಪ್ರೀತಾ ಯಾವುದೇ ವಿಷಯವನ್ನು ಹಂಚಿಕೊಂಡಿಲ್ಲ. ಗುಟ್ಟಾಗಿ ಎಂಗೇಜ್ ಆಗಿರೋ ಸುಪ್ರೀತಾ ಮುಂದಿನ ದಿನಗಳಲ್ಲಿ ವಿಷಯವನ್ನು ಶೇರ್ ಮಾಡಬಹುದು.