ಸಿಂಪಲ್ ಕಾಟನ್ ಡ್ರೆಸ್ ಫೋಟೋ ಹಾಕ್ಕೊಂಡು ಹಳೆ ನೆನಪು ಮೆಲಕು ಹಾಕಿದ ವೈಷ್ಣವಿ
ಸೀತಾ ರಾಮ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸದಾಗಿ ಫೋಟೋ ಶೇರ್ ಮಾಡಿಕೊಂಡಿದ್ದು, ಆ ಮೂಲಕ ಟೀಚರ್ಸ್ ಡೇಗೆ ವಿಶ್ ಮಾಡಿ, ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ (Sita Rama Serial) ನಲ್ಲಿ ಮುದ್ದು ಸಿಹಿಯ ಸೀತಮ್ಮನಾಗಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಮತ್ತೊಮ್ಮೆ ಗೆಲ್ಲುವಲ್ಲಿ ಯಶಸ್ವಿಯಾಗಿರುವ ನಟಿ ವೈಷ್ಣವಿ ಗೌಡ.
ವೈಷ್ಣವಿ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿದ್ದು, ಪ್ರತಿದಿನ ಹೊಸ ಹೊಸ ಫೋಟೋ, ರೀಲ್ಸ್, ವೀಡೀಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ (Instagram Account) ಶೇರ್ ಮಾಡುತ್ತಾ, ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇದೀಗ ನಟಿ ಒಂದಷ್ಟು ಫೋಟೋಗಳನ್ನು ಮತ್ತೆ ಶೇರ್ ಮಾಡಿದ್ದಾರೆ.
ಶಿಕ್ಷಕರ ದಿನಾಚರಣೆಯ (Teachers' Day) ಹಿನ್ನೆಲೆಯಲ್ಲಿ ನಟಿ ವೈಷ್ಣವಿ ಗೌಡ (Vaishnavi Gowda) ಸಿಂಪಲ್ ಕಾಟನ್ ಡ್ರೆಸ್ ಫೋಟೋ ಹಾಕ್ಕೊಂಡು ಹಳೆ ನೆನಪು ಮೆಲಕು ಹಾಕಿದ್ದಾರೆ. ಸಿಂಪಲ್ ಸುಂದರಿ ವೈಷ್ಣವಿ ಸಿಂಪಲ್ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಕಾಮೆಂಟ್ ಮೂಲಕ ಪ್ರೀತಿ ತೋರಿಸಿದ್ದಾರೆ.
ಜೀವನವನ್ನು ಒಮ್ಮೆ ಹಿಂದೆ ತಿರುಗಿ ನೋಡಿದರೆ ನನಗೆ ಸಾಕಷ್ಟು ಶಾಂತಿಯನ್ನು ನೀಡುತ್ತದೆ ಮತ್ತು ಇಂದು ನಾನು ಯಾರಿಗಿದ್ದೇನೋ, ಅದಕ್ಕೆ ಕಾರಣರಾಗಿರುವ ಎಲ್ಲಾ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತದೆ! (Reflecting back on life just gives me a lotta peace and gratitude to all the teachers made me who I am ! ) ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಸೀತಾ ರಾಮ ಸೀರಿಯಲ್ ಬಗ್ಗೆ ಹೇಳೋದಾದ್ರೆ, ಅಗ್ನಿ ಸಾಕ್ಷಿ ಸೀರಿಯಲ್ ನಂತರ ಸೀರಿಯಲ್ ನಿಂದ ದೂರವೇ ಇದ್ದ ನಟಿ ವೈಷ್ಣವಿಗೆ ಈ ಸೀರಿಯಲ್ ಸಹ ಬಹು ದೊಡ್ಡ ಹಿಟ್ ಕೊಡಲಿದೆ ಎಂದರೆ ತಪ್ಪಾಗಲ್ಲ. ಇಲ್ಲಿವರೆಗೆ ಸನ್ನಿಧಿ ಎಂಬ ಹೆಸರಿನಲ್ಲೇ ಗುರುತಿಸಿಕೊಂಡಿದ್ದ ನಟಿ ಇದೀಗ ಸೀತಮ್ಮ ಆಗಿ ಜನರ ಮನೆಮಾತಾಗಿದ್ದಾರೆ.
ವಿಭಿನ್ನ ಕಥಾ ಹಂದರ ಹೊಂದಿರುವ ಸೀತಾ ರಾಮ ಸೀರಿಯಲ್ (Serial) ಅದ್ಭುತವಾಗಿ ಮೂಡಿ ಬರುತ್ತಿದ್ದು, ಸದ್ಯ ಸೀತ, ರಾಮ ಮತ್ತು ಸಿಹಿಯ ಕಾಂಬಿನೇಶನ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಸಿಂಗಲ್ ಮದರ್ ಆಗಿ ಇದ್ದುಕೊಂಡು, ಸಿಹಿಯನ್ನು ಕಾಯುವ ಮಿಡಲ್ ಕ್ಲಾಸ್ ತಾಯಿ ಪಾತ್ರದಲ್ಲಿ ವೈಷ್ಣವಿ ನಟಿಸುತ್ತಿದ್ದಾರೆ.
ಕಥೆ ಇನ್ನಷ್ಟೇ ಪೂರ್ತಿಯಾಗಿ ಅನಾವರಣಗೊಳ್ಳಬೇಕಿದೆ. ಸೀತಳ ಗಂಡ ಯಾರು? ಅವನು ಯಾಕೆ ಬಿಟ್ಟು ಹೋದ? ನಿಜವಾಗಿಯೂ ಸಿಹಿ ಸೀತಮ್ಮನ ಮಗಳೇನಾ? ರಾಮ್ ಕೇವಲ ಕೋ ವರ್ಕರ್ ಅಲ್ಲ, ಆಫೀಸ್ ಎಂಡಿ ಅನ್ನೋದೆಲ್ಲಾ ಸೀತಗೆ ಯಾವಾಗ ತಿಳಿಯುತ್ತೆ, ಕಾದು ನೋಡಬೇಕು.