MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Yash Toxic Movie Live Updates
Toxic Movie Review
Karnataka Cabinet Reshuffle
KPSC Exam Scam
Karnataka BJP Padayatra
RSS vs Priyank Kharge
Onion Price Hike
FSSAI New Guidelines
Ajit Doval China Visit
Operation Sindoor 2025
  • Home
  • Entertainment
  • TV Talk
  • ಎರಡೂವರೆ ತಿಂಗಳುಗಳ ಬಳಿಕ ಆರತಕ್ಷತೆ ಮಾಡ್ಕೊಂಡ Sa Re Ga Ma Pa ಪೃಥ್ವಿ ಭಟ್‌, ಅಭಿಷೇಕ್;‌ ಯಾರು ಯಾರು ಬಂದಿದ್ರು?

ಎರಡೂವರೆ ತಿಂಗಳುಗಳ ಬಳಿಕ ಆರತಕ್ಷತೆ ಮಾಡ್ಕೊಂಡ Sa Re Ga Ma Pa ಪೃಥ್ವಿ ಭಟ್‌, ಅಭಿಷೇಕ್;‌ ಯಾರು ಯಾರು ಬಂದಿದ್ರು?

ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್‌ ಅವರು ಕೆಲ ಸಿನಿಮಾಗಳಿಗೆ ಹಾಡು ಕೂಡ ಹಾಡಿದ್ದಾರೆ. ಈಗ ಅವರು ಆರತಕ್ಷತೆ ಮಾಡಿಕೊಂಡಿದ್ದಾರೆ. 

2 Min read
Author : Padmashree Bhat
| Updated : May 19 2025, 01:41 PM IST
Share this Photo Gallery
  • FB
  • TW
  • Linkdin
  • Whatsapp
111

ಕಳೆದ ಮಾರ್ಚ್‌ 27ರಂದು ದೇವಸ್ಥಾನವೊಂದರಲ್ಲಿ ಪೃಥ್ವಿ ಭಟ್‌ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ನಾನ್‌ ಫಿಕ್ಷನ್‌ ವಿಭಾಗದಲ್ಲಿ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಆಗಿದ್ದ ಅಭಿಷೇಕ್‌ ಅವರು ಸರಳವಾಗಿ ಮದುವೆಯಾಗಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211

ಈ ಮದುವೆಗೆ ಪೃಥ್ವಿ ಭಟ್‌ ತಂದೆ ಅವರ ವಿರೋಧ ಇತ್ತು. ಮನೆಯವರಿಗೆ ತಿಳಿಸದೆ ಪೃಥ್ವಿ ಭಟ್‌ ಮದುವೆಯಾಗಿದ್ದರು. ಮದುವೆಯಾದ ಬಳಿಕ ಅವರು ತಂದೆಗೆ ಈ ವಿಷಯವನ್ನು ತಿಳಿಸಿದ್ದರು. 

Related Articles

Related image1
ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!
Related image2
ಗಾಯಕಿ ಪೃಥ್ವಿ ಭಟ್ ವಿವಾಹ ವಿವಾದ, ತಂದೆಯ ಆರೋಪಕ್ಕೆ ಮಗಳಿಂದ ಆಡಿಯೋ ಕ್ಲಾರಿಟಿ
311

ಪೃಥ್ವಿ ಭಟ್‌ ಕಾಸರಗೋಡಿನವರು. ಅಭಿಷೇಕ್‌ ಅವರ ಜಾತಿ ಬೇರೆ ಎಂದು ಅವರ ತಂದೆ ವಿರೋಧ ಮಾಡಿದ್ದರು ಎನ್ನಲಾಗಿದೆ. ಮಗಳು ನನ್ನ ಮೇಲೆ ಆಣೆ ಮಾಡಿಯೂ ಕೂಡ ಓಡಿ ಹೋಗಿ ಮದುವೆ ಆಗಿದ್ದಾಳೆ ಎಂದು ಅವರ ತಂದೆ ಆರೋಪ ಮಾಡಿದ್ದರು. 

411

ಪೃಥ್ವಿ ಭಟ್‌ ಅವರಿಗೆ ವಶೀಕರಣ ಮಾಡಿ ಮದುವೆ ಮಾಡಲಾಗಿದೆ ಎಂದು ಅವರ ತಂದೆ ಆರೋಪ ಮಾಡಿದ್ದರು. ಸಂಗೀತ ಪಾಠ ಹೇಳಿಕೊಡುವ ನರಹರಿ ದೀಕ್ಷಿತ್‌ ಇದಕ್ಕೆಲ್ಲ ಕಾರಣ ಎಂದು ಅವರು ಆರೋಪ ಮಾಡಿದ್ದರು. 

511

ಆಮೇಲೆ ನರಹರಿ ದೀಕ್ಷಿತ್‌ ಅವರು ಇದಕ್ಕೆಲ್ಲ ಪ್ರತಿಕ್ರಿಯಿಸಿ, "ಎರಡೂವರೆ ವರ್ಷದಿಂದ ಅಭಿಷೇಕ್‌, ಪೃಥ್ವಿಯನ್ನು ಪ್ರೀತಿ ಮಾಡುತ್ತಿದ್ದ. ಇದು ನಮಗೆ ಗೊತ್ತಾದಾಗ ನಾನೇ ಪೃಥ್ವಿ ಮನೆಗೆ ಹೋಗಿ ತಂದೆ ಬಳಿ ಮಾತನಾಡಿದ್ದೇನೆ. ಇನ್ನೊಂದು ಹುಡುಗನನ್ನು ನೋಡಿ ಪೃಥ್ವಿ ನಿಶ್ಚಿತಾರ್ಥ ಮಾಡಲು ರೆಡಿಯಾದಾಗ ಪೃಥ್ವಿ ಈ ರೀತಿ ಮಾಡಿದ್ದಾಳೆ. ಪೃಥ್ವಿ ಮದುವೆ ಆಗುವ ದಿನವೇ ಅವಳು ಫೋನ್‌ ಮಾಡಿ ಅರ್ಜೆಂಟ್‌ ಇಲ್ಲಿಗೆ ಬನ್ನಿ ಸರ್ ಅಂತ ಹೇಳಿದಳು. ನಾನು ಹೋದಮೇಲೆ ಮದುವೆ ಆಗಿತ್ತು, ಅಕ್ಷತೆ ಕಾಳು ಹಾಕಿ ಬಂದೆ" ಎಂದು ಹೇಳಿದ್ದರು. 

611

ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರ ಆರತಕ್ಷತೆಗೆ ರಿಯಾಲಿಟಿ ಶೋಗಳ ಸ್ಪರ್ಧಿಗಳು, ತೀರ್ಪುಗಾರರು, ತಂತ್ರಜ್ಞರು ಭಾಗವಹಿಸಿದ್ದರು. 

711

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ವಿಜೇತ ಹನುಮಂತ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಹಾಡು ಕೂಡ ಹಾಡಿದ್ದಾರೆ. 

811

ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರ ಮದುವೆ ಆರತಕ್ಷತೆಯಲ್ಲಿ ಗಾಯಕ ವಿಜಯ್‌ ಪ್ರಕಾಶ್‌ ಅವರು ಪತ್ನಿ ಮಹತಿ, ಮಗಳ ಜೊತೆಗೆ ಭಾಗಿಯಾಗಿದ್ದಾರೆ. 

911

ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರು ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಡ್ಯಾನ್ಸ್‌, ಸಂಗೀತ ಎಂದು ತುಂಬ ಗ್ರ್ಯಾಂಡ್‌ ಆಗಿ ಆರತಕ್ಷತೆ ನಡೆದಿದೆ. 

1011

ಮದುವೆಯಾದಬಳಿಕ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದ ಪೃಥ್ವಿ ಭಟ್‌ ಅವರು ಕೆಲ ಕಾರ್ಯಕ್ರಮಗಳಿಗೆ ಹಾಡಿದ್ದರು. ಇನ್ನು ಅನೇಕ ಗಾಯಕರು ಈ ಆರತಕ್ಷತೆಗೆ ಬಂದು ನವಜೋಡಿಗೆ ಶುಭ ಹಾರೈಸಿದ್ದರು. 

1111

ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರು ಡ್ರೀಮಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಒಂದು ಖಾಸಗಿ ವಾಹಿನಿಯೇ ಈ ಆರತಕ್ಷತೆಯಲ್ಲಿ ಭಾಗಿಯಾದಂತೆ ಕಾಣಿಸಿತ್ತು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಜೀ ಕನ್ನಡ
ಬೆಂಗಳೂರು
ಸಂಬಂಧಗಳು

Latest Videos
Recommended Stories
Recommended image1
Toxic: ರಾಕಿ ಭಾಯ್‌ನ ಈ ಲುಕ್‌ ಹಿಂದಿರುವವರು ಇವರೆ! ‘ಕೆಜಿಎಫ್’ನಿಂದ ‘ಟಾಕ್ಸಿಕ್’ವರೆಗೆ ಇವರದ್ದೇ ಕೈಚಳಕ!
Recommended image2
ದರ್ಶನ್‌ಗೆ ಮದುವೆಯ ಆಹ್ವಾನ ಪತ್ರಿಕೆ ನೀಡದೇ ಇರೋದಕ್ಕೆ ಕಾರಣ ತಿಳಿಸಿದ ನಟ ಚಿಕ್ಕಣ್ಣ!
Recommended image3
ಮನೆ ಕೆಲ್ಸವೆಲ್ಲಾ ನಾನೇ ಮಾಡೋದೆಂದ ಅಮಿತಾಭ್, ಪತ್ನಿ ಜಯಾಗೆ ಈ ಪರಿ ಹೆದರ್ತಾರಾ? KBCಯಲ್ಲಿ ಗುಟ್ಟು ರಟ್ಟು
Related Stories
Recommended image1
ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!
Recommended image2
ಗಾಯಕಿ ಪೃಥ್ವಿ ಭಟ್ ವಿವಾಹ ವಿವಾದ, ತಂದೆಯ ಆರೋಪಕ್ಕೆ ಮಗಳಿಂದ ಆಡಿಯೋ ಕ್ಲಾರಿಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved