MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬಿಗ್‌ಬಾಸ್‌ನಿಂದ ಸಂಗೀತಾ ಭಟ್ ಹೊರಬರುತ್ತಿದ್ದಂತೆ ಈ ಸೀರಿಯಲ್‌ಗೆ ಖಳನಾಯಕನಾಗಿ ಎಂಟ್ರಿ ಕೊಟ್ಟ ಪತಿ ಸುದರ್ಶನ್‌!

ಬಿಗ್‌ಬಾಸ್‌ನಿಂದ ಸಂಗೀತಾ ಭಟ್ ಹೊರಬರುತ್ತಿದ್ದಂತೆ ಈ ಸೀರಿಯಲ್‌ಗೆ ಖಳನಾಯಕನಾಗಿ ಎಂಟ್ರಿ ಕೊಟ್ಟ ಪತಿ ಸುದರ್ಶನ್‌!

Sudarshan Rangaprasad new serial: ಅತ್ತ ಬಿಗ್ ಬಾಸ್ ಶೋನಿಂದ ನಟಿ ಸಂಗೀತಾ ಭಟ್ ಹೊರಬರುತ್ತಿದ್ದಂತೆ, ಇತ್ತ ಪತಿ ಸುದರ್ಶನ್ ರಂಗಪ್ರಸಾದ್ ಜನಪ್ರಿಯ ವಾಹಿನಿಯ ಧಾರಾವಾಹಿಯೊಂದರಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

2 Min read
Author : Ashwini HR
Published : Oct 13 2026, 12:33 PM IST
Share this Photo Gallery
  • FB
  • TW
  • Linkdin
  • Whatsapp
15
ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಸುದರ್ಶನ್
Image Credit : Instagram

ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಸುದರ್ಶನ್

ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಸುದರ್ಶನ್
ಬಿಗ್ ಬಾಸ್ ಕನ್ನಡ ಶೋನಿಂದ ನಟಿ ಸಂಗೀತಾ ಭಟ್ ಹೊರಬಂದ ಬೆನ್ನಲ್ಲೇ, ಅವರ ಪತಿ, ನಟ ಸುದರ್ಶನ್ ರಂಗಪ್ರಸಾದ್ ಹೊಸ ಧಾರಾವಾಹಿಯೊಂದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್‌ನ ‘ತಾಂಡವ್’ ಪಾತ್ರದ ಮೂಲಕ ಮನೆಮಾತಾಗಿದ್ದ ಸುದರ್ಶನ್, ಇದೀಗ ಜನಪ್ರಿಯ ವಾಹಿನಿಯ ಧಾರಾವಾಹಿಯೊಂದರಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಈಗ ವಿಲನ್ ಆಗಿ ಎಂಟ್ರಿ
Image Credit : instagram

ಈಗ ವಿಲನ್ ಆಗಿ ಎಂಟ್ರಿ

ಈಗ ವಿಲನ್ ಆಗಿ ಎಂಟ್ರಿ
ಹೌದು. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕಥಾನಾಯಕ ‘ತಾಂಡವ್’ ಪಾತ್ರದ ಮೂಲಕ ಮನೆಮಾತಾಗಿದ್ದ ಸುದರ್ಶನ್ ರಂಗಪ್ರಸಾದ್, ಇದೀಗ ಪ್ರೇಕ್ಷಕರ ಮುಂದೆ ಮತ್ತೊಂದು ಹೊಸ ಅವತಾರದಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಸನ್‌ ಉದಯ ವಾಹಿನಿಯ ಜನಪ್ರಿಯ ಧಾರಾವಾಹಿ ‘ರಥಸಪ್ತಮಿ’ಯಲ್ಲಿ ಸುದರ್ಶನ್ ಅವರು ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೌಟುಂಬಿಕ ಕಥೆಯ ನಾಯಕನಾಗಿ ಮೆಚ್ಚುಗೆ ಗಳಿಸಿದ್ದ ಅವರು, ಈಗ ವಿಲನ್ ಆಗಿ ಹೇಗೆ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

Related Articles

Related image1
ಅಪ್ಪ ತೀರಿಕೊಂಡ ಕೇವಲ 15 ದಿನಕ್ಕೆ Bigg Boss ಮನೆಗೆ ಎಂಟ್ರಿ ಕೊಟ್ಟಿದ್ದೇಕೆ ನಟಿ ಜಯಶ್ರೀ ರಾಜ್?
Related image2
ನಟಿ ಸತ್ಯಭಾಮ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿರುವ ಮತ್ತೋರ್ವ ಹಿರಿಯ ನಟಿ ಮತ್ತೆ ಕಿರುತೆರೆಗೆ ಎಂಟ್ರಿ
35
ಅಭಿಮಾನಿಗಳಿಗೆ ತೀವ್ರ ಬೇಸರ
Image Credit : instagram

ಅಭಿಮಾನಿಗಳಿಗೆ ತೀವ್ರ ಬೇಸರ

ಅಭಿಮಾನಿಗಳಿಗೆ ತೀವ್ರ ಬೇಸರ
ಸುದರ್ಶನ್ ಅವರಿಗೆ ಹೊಸ ಪ್ರಾಜೆಕ್ಟ್ ಸಿಕ್ಕ ಸಂಭ್ರಮ ಒಂದೆಡೆಯಾದರೆ, ಅವರ ಪತ್ನಿ ಸಂಗೀತಾ ಭಟ್ ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್‌ನಿಂದ ಹೊರಬರಬಂದರು. ವಾರದ ಆರಂಭದಲ್ಲಿ ಟಾಸ್ಕ್ ವೇಳೆ ಎದೆಬಡಿತ ಹೆಚ್ಚಾಗಿ ತೀವ್ರ ಅಸ್ವಸ್ಥಗೊಂಡಿದ್ದ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಆದರೆ, ಭಾನುವಾರದ ಸಂಚಿಕೆಯಲ್ಲಿ "ಆಟಕ್ಕಿಂತ ಆರೋಗ್ಯವೇ ಮುಖ್ಯ" ಎಂದು ಹೇಳಿದ ಕಿಚ್ಚ ಸುದೀಪ್, ಪ್ಯಾನಿಕ್ ಅಟ್ಯಾಕ್‌ನಿಂದ ಬಳಲುತ್ತಿದ್ದ ಸಂಗೀತಾ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟರು. ಸಂಗೀತಾ ಅವರ ಈ ಹಠಾತ್ ನಿರ್ಗಮನ ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.

45
ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭ
Image Credit : sangeetha bhat instagram

ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭ

ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭ
ಸುದರ್ಶನ್ ಮತ್ತು ಸಂಗೀತಾ ಅವರದ್ದು 9 ವರ್ಷಗಳ ಸುಂದರ ಪ್ರೇಮ ವಿವಾಹ. ಇಬ್ಬರೂ ಒಬ್ಬರಿಗೊಬ್ಬರು ಸದಾ ಬೆಂಬಲವಾಗಿ ನಿಲ್ಲುವ ಈ ಜೋಡಿ, ಇತ್ತೀಚೆಗಷ್ಟೇ ತಮ್ಮ ಕನಸಿನ ಹೊಸ ಮನೆ ಖರೀದಿಸಿ ‘ಸುಖಾಸ’ ಎಂದು ಹೆಸರಿಟ್ಟಿದ್ದರು. ಇದೀಗ ಸಂಗೀತಾ ಬಿಗ್ ಬಾಸ್‌ನಿಂದ ಹೊರಬಂದ ಹೊತ್ತಲ್ಲೇ, ಸುದರ್ಶನ್ ಅವರಿಗೆ ಹೊಸ ಸೀರಿಯಲ್ ಆಫರ್ ಸಿಕ್ಕಿದೆ. ಪತ್ನಿಯ ಬೆಂಬಲದೊಂದಿಗೆ ಸುದರ್ಶನ್ ಮತ್ತೆ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

55
ದೊಡ್ಮನೆಯ ಆಟಕ್ಕೆ ಹೊಸ ತಿರುವು
Image Credit : instagram

ದೊಡ್ಮನೆಯ ಆಟಕ್ಕೆ ಹೊಸ ತಿರುವು

ದೊಡ್ಮನೆಯ ಆಟಕ್ಕೆ ಹೊಸ ತಿರುವು
ಇನ್ನೊಂದೆಡೆ, ಸಂಗೀತಾ ಅವರ ನಿರ್ಗಮನದ ಬೆನ್ನಲ್ಲೇ ‘ಅಗ್ನಿಪರೀಕ್ಷೆ’ ಖ್ಯಾತಿಯ ಕುಮಾರಿ ಮತ್ತು ಲಕ್ಷ್ಮೀ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ದೊಡ್ಮನೆಯ ಆಟಕ್ಕೆ ಹೊಸ ತಿರುವು ಸಿಕ್ಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
ಸಂಗೀತಾ ಭಟ್‌ಗೆ ಅಸಲಿಗೆ ಏನಾಗಿತ್ತು? ಬಿಗ್ ಬಾಸ್‌ನಿಂದ ಅರ್ಧಕ್ಕೆ ಹೊರಬಂದಿದ್ದೇಕೆ? ಕಾರಣ ರಿವೀಲ್ ಮಾಡಿದ ಸ್ಪರ್ಧಿ
Recommended image2
ಕನ್ನಡದ ಮತ್ತೊಬ್ಬ ನಟಿಗೆ ಡಿವೋರ್ಸ್; ಗಂಡನಲ್ಲ, ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ಐಶ್ವರ್ಯಾ ಪಿಸ್ಸೆ!
Recommended image3
ಬಿಗ್ ಬಾಸ್ ಕುಮಾರಿಗೆ ₹5 ಲಕ್ಷದಲ್ಲಿ ಒಂದು ರೂ. ಸಿಕ್ಕಿಲ್ಲ; ಹಳೆ ಬಟ್ಟೆ ಹಾಕಿದ್ದಕ್ಕೆ ಸ್ಪಷ್ಟನೆ ಕೊಟ್ಟ ಜಯಪ್ರಕಾಶ್!
Related Stories
Recommended image1
ಅಪ್ಪ ತೀರಿಕೊಂಡ ಕೇವಲ 15 ದಿನಕ್ಕೆ Bigg Boss ಮನೆಗೆ ಎಂಟ್ರಿ ಕೊಟ್ಟಿದ್ದೇಕೆ ನಟಿ ಜಯಶ್ರೀ ರಾಜ್?
Recommended image2
ನಟಿ ಸತ್ಯಭಾಮ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿರುವ ಮತ್ತೋರ್ವ ಹಿರಿಯ ನಟಿ ಮತ್ತೆ ಕಿರುತೆರೆಗೆ ಎಂಟ್ರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved