- Home
- Entertainment
- TV Talk
- ಆಸ್ಟ್ರೇಲಿಯಾ ಬೀಚ್‌ನಲ್ಲಿ ಅಪ್ಪು ಜೊತೆಗೆ ಕಾಣಿಸಿಕೊಂಡ ಆಂಕರ್ ಅನುಶ್ರೀ: ಕುಡ್ಲ ಬೆಡಗಿ ನಗು ಕಂಡ ಫ್ಯಾನ್ಸ್!
ಆಸ್ಟ್ರೇಲಿಯಾ ಬೀಚ್‌ನಲ್ಲಿ ಅಪ್ಪು ಜೊತೆಗೆ ಕಾಣಿಸಿಕೊಂಡ ಆಂಕರ್ ಅನುಶ್ರೀ: ಕುಡ್ಲ ಬೆಡಗಿ ನಗು ಕಂಡ ಫ್ಯಾನ್ಸ್!
ಕನ್ನಡ ಕಿರುತೆರೆಯಲ್ಲಿ ಅತಿ ಸುಂದರವಾಗಿ ನಿರೂಪಣೆ ಮಾಡಿ, ಬೆಸ್ಟ್ ಆ್ಯಂಕರ್ ಪ್ರಶಸ್ತಿಯನ್ನೂ ಪಡೆದ ನಟಿ ಆ್ಯಂಕರ್ ಅನುಶ್ರೀ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಆಸ್ಟ್ರೇಲಿಯಾದ ಬೀಚ್‌ನಲ್ಲಿ ಸುತ್ತಾಡುತ್ತಾ ಕನ್ನಡ ನಾಡಿನ ನಗು ಮುಖದ ಪರಮಾತ್ಮ 'ಅಪ್ಪು' (ಪುನೀತ್ ರಾಜ್ ಕುಮಾರ್) ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಸ್ಕೈ ಪಾಯಿಂಟ್, ಬೀಚ್‌ಗಳು ಹಾಗೂ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ಪೋಸ್ ಕೊಟ್ಟಿದ್ದಾರೆ.

ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತಿ ಸುಂದರವಾಗಿ ನಿರೂಪಣೆ ಮಾಡಿ, ಬೆಸ್ಟ್ ಆ್ಯಂಕರ್ ಪ್ರಶಸ್ತಿಯನ್ನೂ ಪಡೆದ ನಟಿ ಆ್ಯಂಕರ್ ಅನುಶ್ರೀ ಈಗ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ.
ಬ್ರಿಸ್ಬೇನ್‌ನ ಉತ್ತರದ ಸನ್‌ಶೈನ್ ಕೋಸ್ಟ್ ತೀರದಲ್ಲಿ ಸಂಚಾರ ಮಾಡುತ್ತಾ ಅಲ್ಲಿಯೂ ಕರುನಾಡಿದ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಬೀಚ್‌ನ ತೋರದಲ್ಲಿ ಅಪ್ಪು ಎಂದು ಬರೆದು ಪ್ರೀತಿಯ ಚಿಹ್ನೆಯನ್ನು ತೋರಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಅನುಶ್ರೀ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬೀಚ್, ಪ್ರಾಣಿ ಸಂಗ್ರಹಾಲಯ ಹಾಗೂ ಸ್ಕೈ ಪಾಯಿಂಟ್‌ಗಳಿಗೆ ವಿಸಿಟ್ ಮಾಡಿದ್ದಾರೆ.
ಮೊದಲ ಬಾರಿಗೆ ಸ್ಕೈ ಪಾಯಿಂಟ್ ಮುಂದೆ ಪೋಸ್ ಕೊಟ್ಟಿದ್ದ ಅನುಶ್ರೀ ಡಾ. ರಾಜ್ ಕುಮಾರ್ ಅವರು ಜೋಗ ಜಲಪಾತದ ಕುರಿತು ಹೇಳಿದ ಸಾಲು 'ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ' ಎಂದು ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಮತ್ತೊಂದು ಪ್ರದೇಶ ಪಿಯರ್‌ಸೆಡೇಲ್‌ನಲ್ಲಿರುವ ಮೂನ್‌ಲೈಟ್ ಅಭಯಾರಣ್ಯ ವನ್ಯಜೀವಿ ಸಂರಕ್ಷಣಾ ಪಾರ್ಕ್‌ಗೆ (Moonlit Sanctuary Wildlife Conservation Park) ಭೇಟಿ ನೀಡಿ ಪೋಸ್ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ಈ ಪ್ರಾಣಿ ನೋಡಿ ನಂಗೆ ನೆನಪಾದ ಹಾಡು. ಏಳಯ್ಯ ಎವೆರೆಸ್ಟು ... ಎಷ್ಟು ಮಾಡ್ತೀಯ ರೆಸ್ಟು ! ಇದು ಸಕ್ಕತ್ ಮುದ್ದು, ಆದ್ರೆ ಅಷ್ಟೇ ಸೋಂಬೇರಿ ಅಂತೆ ! ಇದರ ಹೆಸರು ಗೊತ್ತ ? ಎಂದು ಅನುಶ್ರೀ ಕೇಳಿದ್ದಾಳೆ.
ವಿಶ್ವದಲ್ಲಿ ಅತಿಹೆಚ್ಚು ನಿದ್ರೆ ಮಾಡುವ ಪ್ರಾಣಿಗಳಲ್ಲಿ ಒಂದಾದ ಕೋಯ್ಲಾ ಕರಡಿಯ ಜೊತೆಗೆ ಪೋಸ್ ಕೊಟ್ಟಿದ್ದಾರೆ. ಮೌಂಟ್ ಎವರೆಸ್ಟ್‌ನಂತೆ ಮಲಗಬೇಡ ಎದ್ದೇಳು ಎಂದು ಕರಡಿಗೆ ಕೇಳಿದ್ದಾಳೆ.
ಅನುಶ್ರೀ ಅವರ ಹಲವು ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್ ಬಾಕ್ಸ್‌ಗಳ ತುಂಬಾ ಹಾರ್ಟ್ ಇಮೋಜಿ ತುಂಬಿಸಿದ್ದಾರೆ. ಜೊತೆಗೆ, ಕನ್ನಡಿಗನಾಗಿ ಹುಟ್ಟಿದ ಮೇಲೆ ಕುಡ್ಲ ಬೆಡಗಿಯ ನಗು ಕಂಡೆವು ಎಂದಿದ್ದಾರೆ.
ಹಲವು ದಿನಗಳ ಪ್ರವಾಸವನ್ನು ಕೈಗೊಂಡ ಅನುಶ್ರೀ ಎಕ್ಕೆಡೆ ಭಾರೀ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ಅಥವಾ ಮತ್ಯಾವುದೇ ತುಂಡುಡುಗೆ ತೊಟ್ಟು ಪ್ರದರ್ಶನ ನೀಡಿಲ್ಲ.
ಇನ್ನು ಆಸ್ಟ್ರೇಲಿಯಾದ ಪ್ರಮುಖ ನಗರವಾದ ಬ್ರಿಸ್ಬೇನ್‌ನ ಉತ್ತರದ ಸನ್‌ಶೈನ್ ಕೋಸ್ಟ್‌ನಲ್ಲಿ ಕಾಲ ಕಳೆದ ಅನುಶ್ರೀ ಅಲ್ಲಿ ಸೂರ್ಯನ ಬೆಳಕಿಗೆ ಮೈಯೊಡ್ಡಿದ್ದಾರೆ. ಬೀಚ್‌ನಲ್ಲಿ ಎಂಜಾಯ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.