Bigg Boss: ಈ ಕಂಡೀಷನ್‌ಗೆ ಒಪ್ಪಿದ್ದರೆ ಸೀಸನ್ 16 ಹೋಸ್ಟ್ ಮಾಡುತ್ತಾರಂತೆ ಸಲ್ಮಾನ್!
ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ 15 (Big boss) ರ ಗ್ರ್ಯಾಂಡ್ ಫಿನಾಲೆ ಮುಗಿದಿದೆ. 15 ನೇ ಸೀಸನ್ ನಂತರ, ಅಭಿಮಾನಿಗಳು ಅದರ ಮುಂದಿನ ಅಂದರೆ 16 ನೇ ಸೀಸನ್‌ಗಾಗಿ ಈಗಾಗಲೇ ಕಾಯಲು ಪ್ರಾರಂಭಿಸಿದ್ದಾರೆ. ಈ ಷರತ್ತಿನ ಮೇಲೆ ತಾನು ಬಿಗ್ ಬಾಸ್ 16 ಅನ್ನು ಹೋಸ್ಟ್ ಮಾಡುತ್ತೇನೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಏನದು ಸಲ್ಮಾನ್ ಇಟ್ಟಿರುವ ಕಂಡೀಷನ್ ನೋಡಿ.
Big Boss 15 Grand Finale 3
ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 15 ರ ಗ್ರ್ಯಾಂಡ್ ಫಿನಾಲೆ ಮುಗಿದು ಅದರ ವಿಜೇತರನ್ನು ಸಹ ಬಹಿರಂಗಪಡಿಸಲಾಗಿದೆ. ತೇಜಸ್ವಿ ಪ್ರಕಾಶ್ ಈ ಬಾರಿಯ ಸೀಸನ್ ಗೆದ್ದಿದ್ದಾರೆ. ವಿಜೇತರ ಟ್ರೋಫಿಯೊಂದಿಗೆ 40 ಲಕ್ಷ ರೂಪಾಯಿ ಬಹುಮಾನವನ್ನೂ ಪಡೆದುಕೊಂಡಿದ್ದಾರೆ.
ಫಿನಾಲೆ ಸಖತ್ ಗ್ರ್ಯಾಂಡ್ ಆಗಿತ್ತು. ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಿಗ್‌ಬಾಸ್ 15 ನೇ ಸೀಸನ್ ನಂತರ, ಅಭಿಮಾನಿಗಳು ಅದರ ಮುಂದಿನ ಅಂದರೆ 16 ನೇ ಸೀಸನ್‌ಗಾಗಿ ಈಗಾಗಲೇ ಕಾಯಲು ಪ್ರಾರಂಭಿಸಿದ್ದಾರೆ.
ಇಷ್ಟು ವರ್ಷ ಶೋ ಹೋಸ್ಟ್ ಮಾಡುತ್ತಿದ್ದ ಸಲ್ಮಾನ್ ಮುಂದಿನ ಸೀಸನ್ ಹೋಸ್ಟ್ ಮಾಡುತ್ತಾರೋ ಇಲ್ಲವೋ ಅಂತ ಗ್ರ್ಯಾಂಡ್ ಫಿನಾಲೆಯಲ್ಲಿ ಉತ್ತರ ನೀಡಿದ್ದಾರೆ. ಇದರೊಂದಿಗೆ ನಿರ್ಮಾಪಕರಿಗೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.
ಟ್ರೂತ್ ಅಥವಾ ಡೇರ್ ಆಟದಲ್ಲಿ, ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ನ ಮುಂದಿನ ಸೀಸನ್ ಅನ್ನು ಹೋಸ್ಟ್ ಮಾಡುತ್ತೀರಾ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಲ್ಮಾನ್, ಸಂಭಾವನೆ ಹೆಚ್ಚಾದರೆ ಮಾತ್ರ ಮುಂದಿನ ಸೀಸನ್ ಹೋಸ್ಟ್ ಮಾಡುತ್ತೇನೆ, ಇಲ್ಲದಿದ್ದರೆ ಶೋ ಹೋಸ್ಟ್ ಮಾಡುವುದಿಲ್ಲ ತಮಾಷೆಯಾಗಿ ಹೇಳಿದರು
ಸಲ್ಮಾನ್ ಖಾನ್ ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿದ್ದಾರೆ. ವರದಿಗಳ ಪ್ರಕಾರ ಸಲ್ಮಾನ್ ಖಾನ್ ಶೀಘ್ರದಲ್ಲೇ ತಮ್ಮ ಮುಂದಿನ ಚಿತ್ರಕ್ಕಾಗಿ ಚಿತ್ರೀಕರಣ ಮಾಡಲಿದ್ದಾರೆ. ಮನೀಶ್ ಶರ್ಮಾ ನಿರ್ದೇಶಿಸುತ್ತಿರುವ ಅವರ ಟೈಗರ್ 3 ಚಿತ್ರದ ಶೂಟಿಂಗ್ ದೆಹಲಿಯಲ್ಲಿ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಸಲ್ಮಾನ್‌ಗೆ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ.
ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ವಿಳಂಬದಿಂದಾಗಿ ಟೈಗರ್ 3, 2023 ರಲ್ಲಿ ಬಿಡುಗಡೆಯಾಗಲಿದೆ. ಯಶ್ ರಾಜ್ ಬ್ಯಾನರ್ ಟೈಗರ್ 3 ಅನ್ನು ಅತಿ ದೊಡ್ಡ ಮಟ್ಟದಲ್ಲಿ ಚಿತ್ರೀಕರಿಸಲು ಯೋಜಿಸುತ್ತಿದೆ, ಅದರ ಶೂಟಿಂಗ್ ಕೂಡ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಾದ ನಂತರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವೂ 2-3 ತಿಂಗಳು ತೆಗೆದುಕೊಳ್ಳಲಿದೆ.
ಸಲ್ಮಾನ್ ಖಾನ್ ಮುಂಬರುವ ದಿನಗಳಲ್ಲಿ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇತ್ತೀಚೆಗೆ ಅವರು ತಮ್ಮ ಮುಂಬರುವ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದಾರೆ ಮತ್ತು ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನದ ಸಮಯದಲ್ಲಿ, ಸಲ್ಮಾನ್ ತಮ್ಮ ನೋ ಎಂಟ್ರಿ ಚಿತ್ರದ ಸೀಕ್ವೆಲ್ ಅನ್ನು ಸಹ ಖಚಿತಪಡಿಸಿ, ಟೈಗರ್ 3 ಚಿತ್ರೀಕರಣ ಮುಗಿದ ನಂತರ ನೋ ಎಂಟ್ರಿ 2 ಚಿತ್ರೀಕರಣ ಮಾಡುವುದಾಗಿ ಹೇಳಿದ್ದರು.
ಈ ಚಿತ್ರದಲ್ಲಿ ಡಬಲ್ ಡೋಸ್ ಕಾಮಿಡಿ ಕಾಣಿಸಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ಅನಿಲ್ ಕಪೂರ್ ಮತ್ತು ಫರ್ದೀನ್ ಖಾನ್ ನಟಿಸಲಿದ್ದಾರೆ. ಚಿತ್ರದಲ್ಲಿ ಮೂವರೂ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಈ ಕಾರಣಕ್ಕಾಗಿ ಚಿತ್ರದಲ್ಲಿ 9 ನಾಯಕಿಯರು ಕೂಡ ಇರಲಿದ್ದಾರೆ. ಮೊದಲ ಚಿತ್ರದ ಅಂತ್ಯದಿಂದಲೇ ಚಿತ್ರದ ಸ್ಟೋರಿ ಲೈನ್ ಶುರುವಾಗಲಿದೆ. ಈ ಚಿತ್ರ 2023ರಲ್ಲಿ ಬಿಡುಗಡೆಯಾಗಬಹುದು.