ಬಹುನಿರೀಕ್ಷಿತ ಸಿನಿಮಾ ಗೆಹರಿಯಾ ರಿಲೀಸ್‌ಗೆ ರೆಡಿಯಾಗುತ್ತಿರುವಾಗ ನಟಿ ದೀಪಿಕಾ ಪಡುಕೋಣೆ ಸೇರಿ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇದೀಗ ನಟಿ ಬಿಗ್‌ಬಾಸ್ ವೇದಿಕೆಯಲ್ಲೂ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.

ಬಾಲಿವುಡ್‌ನ (Bollywood)ಬಹುನಿರೀಕ್ಷಿತ ಸಿನಿಮಾ ಗೆಹರಿಯಾ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ದೀಪಿಕಾ ಇಂಥಹ ಪಾತ್ರ ಮಾಡುತ್ತಿರುವುದೇ ಮೊದಲು ಎಂದ ಮೇಲಂತೂ ಏನಪ್ಪಾ ಇಷ್ಟೊಂದು ಸ್ಪೆಷಲ್ ಎಂದು ಜನರು ಕುತೂಹಲದಲ್ಲಿದ್ದಾರೆ. ಸಿನಿಮಾದ ಕೆಲವೊಂದು ಸ್ಟಿಲ್ಸ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಹಳಷ್ಟು ಬೋಲ್ಡ್ ಅವತಾರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು ಇದೀಗ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಬಾಲಿವುಡ್‌ ಬ್ಯೂಟೀಸ್ ಅನನ್ಯಾ ಪಾಂಡೆ ಹಾಗೂ ದೀಪಿಕಾ ಪಡುಕೋಣೆ(Deepika Padukone) ಜೊತೆ ಜೊತೆಯಾಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಇದರ ಭಾಗವಾಗಿ ದೀಪಿಕಾ ಪಡುಕೋಣೆ ಬಿಗ್‌ಬಾಸ್ ಸೀಸನ್ 15ರಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ತ್ರಿಬಲ್ ಆರ್ ಸಿನಿಮಾ ತಂಡದಿಂದ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಎಸ್‌ಎಸ್ ರಾಜಮೌಳಿ, ಆಲಿಯಾ ಭಟ್ ಪ್ರಚಾರ ಮಾಡಿ ಹೋಗಿದ್ದಾರೆ. ಈಗ ಗೆಹರಿಯಾ ಸರದಿ.

ಬಿಗ್ ಬಾಸ್ 15 ರ(Bigg boss 15) ಗ್ರ್ಯಾಂಡ್ ಫಿನಾಲೆಯು ಸ್ಟಾರ್-ಸ್ಟಡ್ಡ್ ಈವೆಂಟ್ ಆಗಿದೆ. ನಟಿ ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ಗೆಹರಿಯಾ ಫೆಬ್ರವರಿ 11 ರಂದು ರಿಲೀಸ್ ಆಗಲಿದೆ. ರಿಯಾಲಿಟಿ ಶೋ ಜನವರಿ 29 ಮತ್ತು 30 ರಂದು ಮುಕ್ತಾಯಗೊಳ್ಳುತ್ತಿದ್ದಂತೆ ಅಂತಿಮ ಸಂಚಿಕೆಯಲ್ಲಿ ನಿರೂಪಕ ಸಲ್ಮಾನ್ ಖಾನ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ದೀಪಿಕಾ. ಸುಮಾರು ನಾಲ್ಕು ತಿಂಗಳ ಸುದೀರ್ಘ ಪ್ರಯಾಣವನ್ನು ಮುಕ್ತಾಯಗೊಳಿಸಲಿದ್ದಾರೆ ಮನೆಯವರು.

ಸೆಕ್ಸೀ ದೀಪಿಕಾ ಇಷ್ಟ ಎಂದ ರಣವೀರ್, ಮೈ ಬೇಬಿಗರ್ಲ್ ಎಂದ ನಟ

ದೀಪಿಕಾ ಸಲ್ಮಾನ್ ಜೊತೆ ಸೇರಿ ಗೆಹ್ರಾಯನ್(Gehraiyaan) ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ದೀಪಿಕಾಳನ್ನು 'ದೀಪಿಕಾ ರಣವೀರ್ ಪಡುಕೋಣೆ ಸಿಂಗ್' ಎಂದು ಚುಡಾಯಿಸಿದ್ದಾರೆ. ಇದರಿಂದ ಆಶ್ಚರ್ಯಗೊಂಡ ನಟಿ ಸಲ್ಮಾನ್ ತನ್ನ ಹೆಸರಿನ ಕಮೆಂಟ್‌ ಕೇಳಿ ತಮಾಷೆಯಾಗಿ ನೋಡುತ್ತಾರೆ. ಬಿಗ್ ಬಾಸ್ 15 ರ ಫೈನಲ್‌ನಲ್ಲಿ ಅವರು ಕಳೆದ ಮೋಜಿನ ಸಮಯವನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.

View post on Instagram

ಕಲರ್ಸ್ ಟಿವಿ ಇನ್‌ಸ್ಟಾಗ್ರಾಮ್ ಪೇಜ್ ಕಾರ್ಯಕ್ರಮದ ಅಂತಿಮ ಭಾಗದ ವಿಡಿಯೋ ಕ್ಲಿಪಗ ಹಂಚಿಕೊಂಡಿದೆ. Instagram ನಲ್ಲಿ ವಿಡಿಯೋ ಶೇರ್ ಮಾಡಿ,ಈ ವಾರಾಂತ್ಯ ವಿಶೇಷವಾಗಲಿದೆ. ಈ ವಾರ ಸಲ್ಮಾನ್ ಖಾನ್ ಜೊತೆ ಬರುತ್ತಿದ್ದಾರೆ ದೀಪಿಕಾ. ಈ ವಾರಾಂತ್ಯದಲ್ಲಿ #BB15GrandFinale, 29ನೇ ಮತ್ತು 30ನೇ ತಾರೀಖಿನಂದು ಮಿಸ್ ಮಾಡಿಕೊಳ್ಳಬೇಡಿ ಜನವರಿ, ಶನಿ-ಭಾನು ರಾತ್ರಿ 8:00 ಗಂಟೆಗೆ ಎಂದು ಬರೆಯಲಾಗಿದೆ.

ಇದಕ್ಕೂ ಮೊದಲು, ಬಿಗ್ ಬಾಸ್ 15 ರ ಪ್ರಾರಂಭದ ಸಮಯದಲ್ಲಿ, ರಣವೀರ್ ಸಿಂಗ್ ಸಲ್ಮಾನ್ ಖಾನ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು, ಏಕೆಂದರೆ '83 ನಟ ಬಿಗ್ ಪಿಕ್ಚರ್‌ನೊಂದಿಗೆ ಹೋಸ್ಟ್ ಆಗಿ ಟಿವಿಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದರು. ಈ ವಾರದ ಆರಂಭದಲ್ಲಿ ದೇವೋಲೀನಾ ಭಟ್ಟಾಚಾರ್ಜಿ ಮತ್ತು ಅಭಿಜಿತ್ ಬಿಚುಕ್ಲೆ ಅವರ ಎಲಿಮಿನೇಷನ್ ನಂತರ ಬಿಗ್ ಬಾಸ್ 15 ತನ್ನ ಟಾಪ್ 6 ಸ್ಪರ್ಧಿಗಳನ್ನು ಪಡೆದುಕೊಂಡಿದೆ.

ಗೆಹರಿಯಾ ಹೊಸ ಪೋಸ್ಟರ್ ಶೇರ್ ಮಾಡಿದ ನಟಿ

ಗೆಹ್ರಾಯಾನ್‌ನ ಚಿತ್ರತಂಡ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಶಕುನ್ ಬಾತ್ರಾ ಅವರ ನೇತೃತ್ವದಲ್ಲಿ, ಗೆಹ್ರೈಯಾನ್‌ನಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಖಂಡಿತವಾಗಿಯೂ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಲರ್‌ನಲ್ಲಿ ವಿಭಿನ್ನ ರೂಪಗಳಲ್ಲಿ ಆಧುನಿಕ-ದಿನದ ಸಂಬಂಧಗಳ ಸುತ್ತ ಇರುವ ಕಥೆಯಂತಿದೆ. ಜನರು ಹಾದುಹೋಗುವ ಅನೇಕ ಸಂಕೀರ್ಣ ಭಾವನೆಗಳನ್ನು ಸ್ಪರ್ಶಿಸುತ್ತದೆ ಇದು ಮುಟ್ಟುತ್ತದೆ. ಪ್ರೇಮದಿಂದ ಹಿಡಿದು ಅಕ್ರ, ಸಂಬಂಧ ಸನ್ನಿವೇಶಗಳು ಮತ್ತು ಭಾವನೆಗಳ ಹರಿವು ಟ್ರೇಲರ್‌ನಲ್ಲಿ ಉತ್ತಮವಾಗಿ ಸೆರೆಹಿಡಿಯಲ್ಪಟ್ಟಿದೆ.