- Home
- Entertainment
- TV Talk
- Ranjani Raghavan: ಕೂಲ್ ವೆದರ್’ನಲ್ಲಿ ಬಾಯ್ ಫ್ರೆಂಡ್ ಜೊತೆ ನಟಿ ರಂಜನಿ ರಾಘವನ್ ಜಾಲಿ ಟ್ರಿಪ್
Ranjani Raghavan: ಕೂಲ್ ವೆದರ್’ನಲ್ಲಿ ಬಾಯ್ ಫ್ರೆಂಡ್ ಜೊತೆ ನಟಿ ರಂಜನಿ ರಾಘವನ್ ಜಾಲಿ ಟ್ರಿಪ್
ಕನ್ನಡ ಕಿರುತೆರೆಯ ನಟಿ ರಂಜನಿ ರಾಘವನ್, ತಮ್ಮ ನಿರ್ದೇಶನಕ್ಕೆ ಕೊಂಚ ಬ್ರೇಕ್ ಕೊಟ್ಟು ತಮ್ಮ ಬಾಯ್ ಫ್ರೆಂಡ್ ಜೊತೆ ಈ ಕೂಲ್ ವೆದರ್’ನಲ್ಲಿ ಜಾಲಿ ರೈಡ್ ಮಾಡ್ತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಂಜನಿ ರಾಘವನ್ (Ranjani Raghavan). ಪುಟ್ಟ ಗೌರಿಯ ಮದುವೆ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರೂ ಸಹ ಇವರಿಗೆ ಜನಪ್ರಿಯತೆ ಕೊಟ್ಟದ್ದು ಕನ್ನಡತಿ ಧಾರಾವಾಹಿ.
ಕನ್ನಡತಿ ಧಾರಾವಾಹಿಯಲ್ಲಿ (Kannadati Serial) ಭುವಿ ಟೀಚರ್ ಆಗಿ ರಂಜನಿ ರಾಘವನ್ ನಟಿಸಿದ್ದರು. ಇಂದಿಗೂ ಕೂಡ ಜನರು ರಂಜನಿ ಎನ್ನುವ ಹೆಸರಿಗಿಂತ ಹೆಚ್ಚಾಗಿ ಭುವಿ ಅಂತಾನೆ ಕರೆಯೋದು. ಅಷ್ಟೊಂದು ಮೆಚ್ಚುಗೆ ಪಡೆದ ಪಾತ್ರ ಇದಾಗಿತ್ತು. ಆ ಸೀರಿಯಲ್ ಬಳಿಕ ರಂಜನಿ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.
ಹೌದು, ರಂಜನಿ ರಾಘವನ್ ಇದೇ ಮೊದಲ ಬಾರಿ ನಿರ್ದೇಶನಕ್ಕೆ ಇಳಿದಿದ್ದು, ಡಿ ಢಿ ಡಿಕ್ಕಿ (Di Di Dikki) ಎನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ ಶೂಟಿಂಗ್ ಆರಂಭಿಸಿರುವ ನಟಿ, ಇದಿಗ ಶೂಟಿಂಗ್ ನಿಂದ ಕೊಂಚ ಬ್ರೇಕ್ ಪಡೆದು ತಮ್ಮ ಬಾಯ್ ಫ್ರೆಂಡ್ (Boyfriend) ಜೊತೆ, ಮಳೆಗಾಲದ ಈ ತಂಪಾದ ವೆದರ್ ನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ. ತಮ್ಮ ಟ್ರಿಪ್ ನ ಸುಂದರವಾದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ತಮ್ಮ ಒಂದಿಷ್ಟು ಫೋಟೊ, ಬಾಯ್ ಫ್ರೆಂಡ್ ಕೈ ಹಿಡಿದಿರುವ ಫೋಟೊ, ಗೆಳೆಯನ ಜೊತೆಗೆ ಬೋಟ್ ರೈಡ್ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ರಂಜನಿ ಲೈಫು.. ರೀಸೆಂಟ್ಲಿ.. ಎಂದು ಕ್ಯಾಪ್ಶನ್ ಕೊಟ್ಟು ಹ್ಯಾಶ್ ಟ್ಯಾಗ್ ಹಾಕಿ, ಲೈಫ್ ಪಾರ್ಟ್ನರ್ (life partner), ನನ್ ಹುಡುಗ ಎಂದು ಬರೆದುಕೊಂಡಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೇ ರಂಜನಿ ರಾಘವನ್, ತಾವು ಮದುವೆಯಾಗುತ್ತಿರುವ ಹುಡುಗ ಎಂದು ಸಾಗರ್ ಭಾರಧ್ವಜ್ ಅವರ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಮಾಡಿ, ಪರಿಚಯ ಮಾಡಿಸಿದ್ದರು. ಸಾಗರ್ ಅವರು ಅಥ್ಲೇಟ್ ಅನ್ನೋದು ಮಾತ್ರ ಗೊತ್ತು, ಹಾಗೂ ರಂಜನಿಯವರ ಕಾಲೇಜ್ ಗೆಳೆಯ ಕೂಡ ಹೌದು.
ಇತ್ತೀಚೆಗೆ ನಟಿಯ ಸಹೋದರಿಯ ವಿವಾಹ ಕೂಡ ಅದ್ಧೂರಿಯಾಗಿ ನಡೆದಿತ್ತು. ರಂಜನಿ ಮಾತ್ರ ಸದ್ಯ ಕರಿಯರ್ ಕಡೆಗೆ ಫೋಕಸ್ ಮಾಡ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ಡಿ ಢಿ ಡಿಕ್ಕಿ ಸಿನಿಮಾಗೆ ಕಥೆ ಬರೆದಿರೋದು ಸಹ ರಂಜನಿ ರಾಘವನ್ ಅವರೇ.
ಇನ್ನು ರಂಜನಿ ಬರಹಗಾರ್ತಿ ಕೂಡ ಹೌದು, ರಂಜನಿ ಬರೆದಿರುವ ಎರಡು ಪುಸ್ತಕಗಳು ಈಗಾಗಲೇ ಬಿಡುಗಡೆಯಾಗಿ ಸಾಹಿತ್ಯ ಪ್ರಿಯರ ಮನಸ್ಸು ಗೆದ್ದಿದೆ. ಕಥೆ ಡಬ್ಬಿ ಎನ್ನುವ ಕಥೆಗಳ ಸಂಗ್ರಹ ಹಾಗೂ ಸ್ವೈಪ್ ರೈಟ್ ಎನ್ನುವ ಕಾದಂಬರಿಯನ್ನು ರಂಜನಿ ಬರೆದಿದ್ದಾರೆ.