Asianet Suvarna News Asianet Suvarna News

Ranjani Raghavan: ಕರಡಿ ಜೊತೆ ಕನ್ನಡತಿ! ರಂಜನಿ ರಾಘವನ್ ಎಲ್ಲಿದ್ದಾರೆ ನೋಡಿ..

ಒಂದು ಕಡೆ ಕನ್ನಡತಿ ಸೀರಿಯಲ್‌ ವೈಂಡ್‌ಅಪ್‌ ಆಗ್ತಿದೆ. ಇನ್ನೊಂದೆಡೆ ಈ ಸೀರಿಯಲ್‌ನ ನಾಯಕಿ ಭುವಿ ಅರ್ಥಾತ್‌ ರಂಜನಿ ರಾಘವನ್ ಕರಡಿಗಳ ಜೊತೆ ಕಾಣಿಸಿಕೊಂಡಿದ್ದಾರೆ. ಅಬಬ್ಬಾ, ಏನ್ ಕಥೆ ಇವ್ರದ್ದು?

Actor sRanjani Raghavan visited Bannerughatta Bear rescue centre
Author
First Published Jan 23, 2023, 5:31 PM IST

ರಂಜನಿ ರಾಘವನ್ ಕನ್ನಡತಿ ಸೀರಿಯಲ್‌ ಮೂಲಕ ಮನೆ ಮಾತಾದ ನಟಿ. ಇದಕ್ಕೂ ಮುನ್ನ 'ಪುಟ್ಟಗೌರಿ ಮದುವೆ' ಸೀರಿಯಲ್‌ನಲ್ಲಿ ನಾಯಕಿಯಾಗಿ ಮಿಂಚಿದವರು. ಅನೇಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅನೇಕ ಬ್ಯೂಟಿ ಪೇಟೆಂಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಟಿಯರು ಸಿನಿಮಾ, ಸೀರಿಯಲ್‌ ಆ ಥಳಕು ಬಳಕಿನ ಲೋಕದಲ್ಲಿ ಕಳೆದು ಹೋಗ್ತಾ ಇದ್ರೆ ಈ ಹುಡುಗಿ ಮಾತ್ರ ತನ್ನ ವಿಭಿನ್ನ ಟೇಸ್ಟ್‌ ಮೂಲಕವೂ ಪ್ರಸಿದ್ಧಿಗೆ ಬಂದವರು. ಅಂದಹಾಗೆ ಅವರೀಗ ಕರಡಿಗಳ ಜೊತೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ ಫಸ್ಟ್ ವೀಕ್‌ನಲ್ಲಿ ಕನ್ನಡತಿ ಸೀರಿಯಲ್ ವೈಂಡ್‌ಅಪ್ ಆಗುತ್ತೆ. ಆಮೇಲೆ ರಂಜನಿ ಯಾವ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ ಅನ್ನೊ ಗೊಂದಲದಲ್ಲಿದ್ದವರಿಗೆ ಕರಡಿಗಳ ಜೊತೆಗೆ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ ಈ ಕನ್ನಡತಿ.

ಇದೇನು, ಕನ್ನಡತಿಗೂ ಕರಡಿಗೂ ಏನ್‌ ಸಂಬಂಧ? ಎಲ್ಲೋ ಅಕ್ಷರ ತಪ್ಪಿರಬಹುದಾ ಅಂತೆಲ್ಲ ತಲೆ ಕೆಡಿಸ್ಕೋಬೇಡಿ. ಇಲ್ಲಿ ಯಾವ್ದೂ ತಪ್ಪಿಲ್ಲ. ಎಲ್ಲವೂ ಸರಿಯಾಗಿಯೇ ಇದೆ. ಕನ್ನಡತಿ ನಿಜವಾಗಲೂ ಕರಡಿಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲೂ ಅಪ್‌ಲೋಡ್‌ ಮಾಡಿದ್ದಾರೆ. ಸೀರಿಯಲ್ ಮುಗೀತು ಅಂತ ಕಾಡು ಪಾಲಾದ್ರಾ, ಅದೂ ಕರಡಿಗಳ ಜೊತೆ ಅವರಿಗೇನ್ ಕೆಲಸ ಅನ್ನೋ ಪ್ರಶ್ನೆಗಳೆಲ್ಲ ತಲೆಗೆ ಬರಬಹುದು, ಆದರೆ ಕನ್ನಡತಿ ಕರಡಿ ಜೊತೆ ಕಾಣಿಸಿಕೊಂಡಿರೋನೋ ನಿಜ. ಆದರೆ ಅದರ ಹಿಂದೆ ಒಂದು ಕಥೆ ಇದೆ. ಹೀಗೆ ಕರಡಿಗಳ ಜೊತೆ ಕಾಣಿಸಿಕೊಂಡು ತಾನೊಬ್ಬ ವೈಲ್ಡ್‌ ಲೈಫ್‌ ಲವರ್ ಅನ್ನೋದನ್ನು ರಂಜನಿ ತೋರಿಸಿಕೊಟ್ಟಿದ್ದಾರೆ. ಆದರೆ ಇಲ್ಲೊಂದು ಸಾಮಾಜಿಕ ಕಾಳಜಿಯೂ ಇದೆ. ಕನ್ನಡತಿಯ ಈ ವಿಭಿನ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಿಶ್ಚಿತಾರ್ಥ ಮಾಡಿಕೊಂಡ 'ಪಾರು' ನಟ ಶರತ್; ಹುಡುಗಿ ಯಾರು ನೋಡಿ

ಬನ್ನೇರುಘಟ್ಟಕ್ಕೆ ನೀವು ಹೋದ್ರೆ ಝೂಗೆ ವಿಸಿಟ್ ಮಾಡಿ ಬರ್ತೀರಿ. ಅದು ಬಿಟ್ಟರೆ ಚಿಟ್ಟೆ ಪಾರ್ಕ್, ಸಫಾರಿ ಇತ್ಯಾದಿಗಳು. ಆದರೆ ರಂಜನಿ ರಾಘವನ್ ಇಲ್ಲಿರೋ ಕರಡಿ ರಕ್ಷಣಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದಾರೆ. 'ಬನ್ನೇರುಘಟ್ಟ ಬೇರ್‌ ರೆಸ್ಕ್ಯೂ ಸೆಂಟರ್‌' ಗೆ ವಿಸಿಟ್ ಮಾಡಿ ಅಲ್ಲಿನ ಕಥೆ ಹೇಳಿದ್ದಾರೆ. ಅದನ್ನು ಅವರು ಬರೆದುಕೊಂಡಿದ್ದು ಹೀಗೆ - 'ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ. ಹುಲಿ ಸಿಂಹ ಆನೆಗಳಂತೆ ಕಾಡಿನಲ್ಲಿರಬೇಕಾದ ಇವುಗಳನ್ನ ಕರಡಿ ಕುಣಿತ ಸಂಪ್ರದಾಯದ ಕಾರಣ ಮೂಗುದಾರ ಹಾಕಿ ಬಳಸಿಕೊಂಡ ಉದಾಹರಣೆಗಳೆಷ್ಟೋ. ಅಂತಹ 63 ಕರಡಿಗಳನ್ನು @wildlifesos ಪಾರು ಮಾಡಿ ವೃದ್ಧಾಶ್ರಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಅವುಗಳ ಆಹಾರ, ಆರೋಗ್ಯ, ದೈಹಿಕ-ಮಾನಸಿಕ ಚಟುವಟಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. 

ಜಗತ್ತಿನ shortest ಕರಡಿ Odam ನ 13th rescue anniversary ಯಲ್ಲಿ ನಾವೂ ಭಾಗಿಯಾಗಿ ಅದಕ್ಕೆ peanut butter ಮತ್ತು ಖರ್ಜೂರ ಕೊಟ್ವಿ. Rescue ಮುನ್ನ ಅದರ ಮಾಲೀಕರು tea ಮತ್ತು Parle G biscuits ಮಾತ್ರ ಆಹಾರವಾಗಿ ಕೊಟ್ಟಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿದೆ! ಕೊಟ್ಟಿದ್ದನ್ನ Odam ಚಪ್ಪರಿಸಿಕೊಂಡು ತಿಂದಾಗ ನಮಗೂ ಬಾಯಲ್ಲಿ ನೀರೂರಿತು. ಸಾಧ್ಯವಾದರೆ ನೀವೂ ಅಲ್ಲಿಗೆ ಭೇಟಿ ನೀಡಿ.' ಹೀಗೆಂದು ರಂಜನಿ ಬರೆದುಕೊಂಡಿದ್ದಾರೆ.

 

ಇದಕ್ಕೆ ಸಾವಿರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. 'ಒಳ್ಳೆಯ ಕೆಲಸ ಮಾಡ್ತಿದ್ದೀರಿ' ಅಂತ ಮೆಚ್ಚುಗೆ ಸೂಚಿಸಿದ್ದಾರೆ.

ರಂಜನಿ ಸಿನಿಮಾಗಳ ಜೊತೆಗೆ ಸಾಹಿತಿಯಾಗಿಯೂ ಗುರುತಿಸಿಕೊಂಡವರು. ಅವರ 'ಕತೆ ಡಬ್ಬಿ' ಮತ್ತು 'ಸ್ವೈಪ್‌ ರೈಟ್‌' ಸಣ್ಣಕಥೆಗಳ ಸಂಗ್ರಹ ಅತೀ ಹೆಚ್ಚು ಮಾರಾಟವಾಗಿ ಜನ ಮೆಚ್ಚುಗೆ ಪಡೆದಿವೆ.

Follow Us:
Download App:
  • android
  • ios