BBK9 ಕೊನೆ ವಾರದ ಕಳಪೆ ಹೊತ್ತ ರಾಕೇಶ್ ಅಡಿಗ; ಬದಲಾವಣೆ ಕಂಡ ವೀಕ್ಷಕರು ಶಾಕ್
ಬಿಗ್ ಬಾಸ್ ಕೊನೆವಾರದಲ್ಲಿ ಕಳಪೆ ಪಟ್ಟ ಹೊತ್ತ ರಾಕೇಶ್ ಅಡಿಗ. ಫುಲ್ ಖುಷ್ ಆದ ರೂಪೇಶ್ ಶೆಟ್ಟಿ ಆಂಡ್ ಗ್ಯಾಂಗ್?

ಬಿಗ್ ಬಾಸ್ ಸೀಸನ್ 9 ಕೇವಲ ವಾರವಷ್ಟೆ ಉಳಿದಿದೆ. ಈ ವೀಕೆಂಡ್ ಸುದೀಪ್ ಜೊತೆ ಮಾತುಕತೆ ನಡೆದ ನಂತರ ಒಂದು ವಾರ ಮತ್ತೊಂದು ವೀಕೆಂಡ್ ಫಿನಾಲೆ ಮುಟ್ಟುತ್ತದೆ.
ಪ್ರತಿವಾರದೂ ಆರ್ಯವರ್ಧನ್, ಪ್ರಶಾಂತ್ ಸಂಬರಗಿ, ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್‌ಗೆ ಕಳಪೆ ಕೊಡುತ್ತಿದ್ದರು ಆದರೆ ಈ ವಾರ ರಾಕೇಶ್ ಅಡಿಗೆ ಕಳಪೆ ಪಟ್ಟ ಪಡೆದಿದ್ದಾರೆ.
ಈ ವಾರ ಟಾಸ್ಕ್‌ಗಳನ್ನು ಚೆನ್ನಾಗಿ ಆಡಿಲ್ಲ ಬಲು ಬೇಗ ಬಿಟ್ಟು ಕೊಡುತ್ತಿದ್ದರು ಪ್ರಯತ್ನವೇ ಮಾಡುತ್ತಿರಲಿಲ್ಲ ಎನ್ನುವ ಕಾರಣ ರಾಕೇಶ್‌ಗೆ ಕಳಪೆ ಕೊಟ್ಟಿದ್ದಾರೆ.
ಇಷ್ಟು ದಿನ ಸೇಫ್ ಅಗಿದ್ದ ರಾಕೇಶ್ ಕಳಪೆ ಪಡೆದುಕೊಂಡಿರುವುದು ಕೆಲವರಿಗೆ ಖುಷಿ ಕೊಟ್ಟಿದೆ ಇನ್ನೂ ಕೆಲವರಿಗೆ ಬೇಸರ ತಂದಿದೆ. ಅದರೆ ಬದಲಾವಣೆ ಕಂಡು ಖುಷಿ ಪಟ್ಟಿದ್ದಾರೆ.
ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ 50 ದಿನಗಳ ಕಾಲ ಉಳಿದುಕೊಂಡು ಅತಿ ಹೆಚ್ಚು ವೋಟ್ ಪಡೆದು ರಾಕೇಶ್ ಅಡಿಗ ಟಿವಿ ಸೀಸನ್ 9ಕ್ಕೆ ಪ್ರವೇಶ ಪಡೆದುಕೊಂಡವರು.
ವಾರವಾರವೂ ಹಾಡು ಬರೆದುಕೊಂಡು ಎಂಜಾಯ್ ಮಾಡುವ ರಾಕೇಶ್ ಸದಾ ಕೂಲ್ ವ್ಯಕ್ತಿ. ಅದರಲ್ಲೂ ಹೆಣ್ಣು ಮಕ್ಕಳ ಗ್ಯಾಂಗ್ ಸೇರಿದ ಮೇಲೆ ತುಂಟರಾದ್ದರು.
ರಾಕೇಶ್ ಅಡಿಗ ಮತ್ತು ಕಾವ್ಯಾಶ್ರೀ ತುಂಬಾನೇ ಕ್ಲೋಸ್ ಆಗಿದ್ದರು, ಕಾವ್ಯಾ ಹೊರ ಬರುತ್ತಿದ್ದಂತೆ ಅಮೂಲ್ಯ ಗೌಡ ಜೊತೆ ಕ್ಲೋಸ್ ಆಗಿ ಮಮ್ಮಿ-ಪಾಪ ರೀತಿ ಮಾತನಾಡುತ್ತಾರೆ.
ಪದೇ ಪದೇ ಕಳಪೆ ಪಡೆಯುವವರು ಈ ವಾರ ಕಳಪೆ ಪಡೆದಿಲ್ಲ ಈ ಮೂಲಕ ಕೊನೆ ವಾರವಾದ್ದರೂ ಬದಲಾವಣೆಯನ್ನು ನೋಡಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.