ಗುಡ್ ನ್ಯೂಸ್ ರಿವೀಲ್ ಆದ ಬೆನ್ನಲೆ ಸಾಯಿ ಬಾಬ ಪೂಜೆ ಮಾಡಿಸಿದ ಕಾವ್ಯಾ ಗೌಡ; ರೆಡಿಯಾಗಿದ್ದ ರೀತಿ ನೋಡಿ...
ಮನೆಯಲ್ಲಿ ವಿಶೇಷವಾಗಿ ಸಾಯಿ ಬಾಬ ಪೂಜೆ ಮತ್ತು ಭಜನೆ ಮಾಡಿಸಿದ ಕಾವ್ಯಾ ಗೌಡ. ಸಹೋದರಿಯರ ಫೋಟೋ ವೈರಲ್...
ಕನ್ನಡ ಕಿರುತೆರೆಯ ರಾಧಾ ಮಿಸ್ ಎಂದೇ ಜನಪ್ರಿಯತೆ ಪಡೆದಿರುವ ಕಾವ್ಯಾ ಗೌಡ ಮನೆಯಲ್ಲಿ ಸಾಯಿ ಬಾಬ ವಿಶೇಷ ಪೂಜೆ ಮಾಡಿಸಿದ್ದಾರೆ.
ಎರಡನೇ ವಿವಾಹ ವಾರ್ಷಿಕೋತ್ಸದಂದ ಕಾವ್ಯಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಪೋಸ್ಟ್ ಹಾಕಿದ್ದರು. ವಿದೇಶದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಇದರ ಬೆನ್ನಲೇ ಮನೆಯಲ್ಲಿ ಸಾಯಿ ಬಾಬ ಪೂಜೆ ಮತ್ತು ಭಜನೆ ಹಮ್ಮಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಅಕ್ಕ ಭವ್ಯಾ ಗೌಡ ಜೊತೆ ಕಾವ್ಯಾ ಗೌಡ ಪೋಸ್ ಕೊಟ್ಟಿದ್ದಾರೆ. ಅಕ್ಕ ನನ್ನ ಬೆಸ್ಟ್ ಫ್ರೆಂಡ್. ಅದ್ಯಾವ ಜನ್ಮದಲ್ಲಿ ಮಾಡಿರುವ ಪುಣ್ಯವೋ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಅಕ್ಕ ಒಳ್ಳೆಯ ವ್ಯಕ್ತಿ, ಪ್ರೀತಿ ಕೊಡುತ್ತಾಳೆ, ಗಟ್ಟಿಗಿತ್ತಿ ಮತ್ತು ಕ್ಷಮಿಸುವ ಜೀವಿ. ಅಕ್ಕ ಇಲ್ಲದೆ ನನ್ನ ಜೀವನ ಹೇಗೆ ಅನ್ನೋದು ಕಲ್ಪನೆ ಕೂಡ ಮಾಡಿಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ.
ನೇರಳ ಮತ್ತು ಕೆಂಪು ಬಣ್ಣದ ರೇಶ್ಮೆ ಸೀರೆಯಲ್ಲಿ ಕಾವ್ಯಾ ಗೌಡ ಮಿಂಚಿದರೆ, ಹಳದಿ ಮತ್ತು ನೇರಳ ಬಣ್ಣದ ರೇಶ್ಮೆ ಸೀರೆಯಲ್ಲಿ ಭವ್ಯಾ ಕಾಣಿಸಿಕೊಂಡಿದ್ದಾರೆ.