ಅಕ್ಕ- ತಂಗಿ ಇಬ್ರೂ ಪ್ರೆಗ್ನೆಂಟ್; ಕಾವ್ಯಾ ಗೌಡ ಮನೆಯಲ್ಲಿ ಡಬಲ್ ಸಂಭ್ರಮ
ಡಬಲ್ ಸಿಹಿ ಸುದ್ದಿ ಕೊಟ್ಟ ಕಾವ್ಯಾ ಗೌಡ ಫ್ಯಾಮಿಲಿ. ಬೇಬಿ ಬಂಪ್ ಜೊತೆ ಫೋಟೋಶೂಟ್ ವೈರಲ್....

ಕನ್ನಡ ಕಿರುತೆರೆಯಲ್ಲಿ ರಾಧಾ ಮಿಸ್ ಎಂದೇ ಖ್ಯಾತಿ ಪಡೆದಿರುವ ನಟಿ ಕಾವ್ಯಾ ಗೌಡ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ವಿವಾಹ ವಾರ್ಷಿಕೋತ್ಸವದಂದು ಗುಡ್ ನ್ಯೂಸ್ ರಿವೀಲ್ ಮಾಡಿದ ಕಾವ್ಯಾ ಗೌಡ ಅವರ ಸೀಮಂತ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ.
ಬಾಲ್ಯದಿಂದಲೂ ಹೆಣ್ಣು ಮಕ್ಕಳು ಅಂದ್ರೆ ತುಂಬಾನೇ ಇಷ್ಟ ಹೀಗಾಗಿ ಹೆಣ್ಣು ಮಗು ಹುಟ್ಟಬೇಕು. ನನ್ನ ಮಿನಿ ವರ್ಶನ್ ಎಂದು ಕಾವ್ಯಾ ಗೌಡ ಹೇಳಿದ್ದಾರೆ.
ಕಾವ್ಯಾ ಗೌಡ ಸೀಮಂತದ ಮತ್ತೊಂದು ಹೈಲೈಟ್ ಏನೆಂದರೆ ಅವರ ಅಕ್ಕ ಭವ್ಯಾ ಗೌಡ ಕೂಡ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು.
ಹೌದು! ಅಕ್ಕ ಭವ್ಯಾ ಗೌಡ (Bhavya Gowda) ಮತ್ತು ತಂಗಿ ಕಾವ್ಯಾ ಗೌಡ (Kavya Gowda) ಒಬ್ಬರನ್ನೊಬ್ಬರ ಬೇಬಿ ಬಂಪ್ ಹಿಡಿದು ಫೋಟೋಶೂಟ್ ಮಾಡಿಸಿದ್ದಾರೆ.
ನಮ್ಮ ಕುಟುಂಬ ಬೆಳೆಯುತ್ತಿದೆ. ನಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದೀವಿ ಎಂದು ಭವ್ಯಾ ಗೌಡ ಪೋಸ್ಟ್ ಹಾಕಿದ್ದರು. ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
ಯಾರ ಮಗು ಯಾವ ತಿಂಗಳಲ್ಲಿ ಹುಟ್ಟಲಿದೆ ಎಂದು ಎಲ್ಲಿಯೂ ರಿವೀಲ್ ಮಾಡಿಲ್ಲ. ಆದರೆ ಒಂದೇ ಮನೆಯಲ್ಲಿ ಇಬ್ಬರಿಗೆ ಬಾಣಂತನ ಮಾಡಬೇಕಿದೆ ಅನ್ನೋ ನೆಟ್ಟಿಗರ ಯೋಚನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.