- Home
- Entertainment
- TV Talk
- ಆನಿವರ್ಸರಿ ಸಂಭ್ರಮದಲ್ಲಿ Puttakkana Makkalu ವಿಲನ್ ರಾಜಿ: ಗಂಡನಿಗೆ ಬರೆದ್ರು ಪ್ರೇಮ ಪತ್ರ
ಆನಿವರ್ಸರಿ ಸಂಭ್ರಮದಲ್ಲಿ Puttakkana Makkalu ವಿಲನ್ ರಾಜಿ: ಗಂಡನಿಗೆ ಬರೆದ್ರು ಪ್ರೇಮ ಪತ್ರ
Puttakkana Makkalu: ಧಾರಾವಾಹಿಯಲ್ಲಿ ರಾಜಿ ಪಾತ್ರವನ್ನು ಮಾಡುತ್ತಿರುವ ಕಿರುತೆರೆ ನಟಿ ಸ್ವಾತಿ ಎಚ್ ವಿ ಅವರು ಇಂದು ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ, ಮದುವೆ ಫೋಟೊಗಳನ್ನು ಶೇರ್ ಮಾಡಿ, ಗಂಡನಿಗೆ ಪ್ರೇಮ ಪತ್ರವನ್ನೇ ಬರೆದಿದ್ದಾರೆ ನಟಿ.

ಪುಟ್ಟಕ್ಕನ ಮಕ್ಕಳು ನಟಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಸವತಿ ಹಾಗೂ ವಿಲನ್ ರಾಜಿ ಪಾತ್ರದಲ್ಲಿ ಮನರಂಜನೆ ನೀಡುತ್ತಿರುವ ನಟಿ ಸ್ವಾತಿ ಎಚ್ ವಿ ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡು ಗಂಡನಿಗೆ ವಿಶ್ ಮಾಡಿದ್ದಾರೆ.
ನಟಿ ಸ್ವಾತಿ ಎಚ್ ವಿ ವೆಡ್ಡಿಂಗ್ ಆನಿವರ್ಸರಿ
ಕಳೆದ ಹಲವು ವರ್ಷಗಳಿಂದ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಅದರಲ್ಲೂ ವಿಲನ್ ಹಾಗೂ ತನ್ನ ವಯಸ್ಸಿಗಿಂತಲೂ ದೊಡ್ಡವರ ಪಾತ್ರದಲ್ಲಿ ನಟಿಸಿರುವ ಸ್ವಾತಿ ಇಂದು ತಮ್ಮ ಮೂರನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಡನಿಗೆ ಮುದ್ದಾದ ಪ್ರೇಮ ಪತ್ರ ಬರೆದು, ವಿಶಸ್ ತಿಳಿಸಿದ್ದಾರೆ ಸ್ವಾತಿ.
3ನೇ ವಾರ್ಷಿಕೋತ್ಸವದ ಶುಭಾಶಯಗಳು ಕಂದ
ನಿಮ್ಮೊಂದಿಗೆ ಕಳೆದ ಮೂರು ವರ್ಷಗಳು ಜೀವಮಾನವಿಡೀ ಸಂತೋಷ, ವರ್ಮ್ತ್ ಮತ್ತು ಶಾಂತಿಯಿಂದ ತುಂಬಿದ್ದವು. ನೀವು ನನ್ನ ಸೇಫ್ ಪ್ಲೇಸ್, ನನ್ನ ಸಂಗಾತಿ, ನನ್ನ ಆತ್ಮೀಯ ಸ್ನೇಹಿತ ಮತ್ತು ನನ್ನ ಜೀವನದ ಅತ್ಯಂತ ದೊಡ್ಡ ಆಶೀರ್ವಾದ. ನಾನು ಪದಗಳಲ್ಲಿ ಹೇಳಲಾಗದಷ್ಟು ಜಾಸ್ತು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮೊಂದಿಗೆ ಪ್ರತಿದಿನವೂ ಇರಲು, ನಿಮ್ಮ ಪಕ್ಕದಲ್ಲಿ ನಡೆಯಲು ನಾನು ಎಷ್ಟೊಂದು ಅದೃಷ್ಟಶಾಲಿ ಎಂದು ನಟಿ ಬರೆದುಕೊಂಡಿದ್ದಾರೆ.
ಥ್ಯಾಂಕ್ಯೂ ಹೇಳಿದ ಸ್ವಾತಿ
ನೀವು ನನ್ನನ್ನು ಪ್ರೀತಿಸುವ ರೀತಿ ನನಗಿಷ್ಟ, ಮೃದುವಾಗಿ, ಕೊನೆಯಿರದಷ್ಟು ಮತ್ತು ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಾನು ನಿಮ್ಮೊಂದಿಗೆ ಯಾವಾಗಲೂ ಇರುತ್ತೇನೆ, ನಿಮ್ಮೊಂದಿಗೆ ಬೆಳೆಯುತ್ತೇನೆ ಮತ್ತು ಜೀವನ ಪೂರ್ತಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಐ ಲವ್ ಯೂ ಫಾರೆವರ್ ಕಂದ ಎಂದು ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ ಸ್ವಾತಿ.
ನಾಗಾರ್ಜುನ್ ಜೊತೆ ಮದುವೆ
ನಟಿ ಸ್ವಾತಿ ಅವರು 2022ರ ನವಂಬರ್ 25ರಂದು ಮೈಸೂರಿನಲ್ಲಿ ನಾಗಾರ್ಜುನ ರವಿ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರದು ಲವ್ ಮ್ಯಾರೇಜ್ ಎನ್ನಲಾಗುತ್ತಿದೆ. ಇದೀಗ ದಾಂಪತ್ಯ ಜೀವನದ ಮೂರು ವರ್ಷಗಳನ್ನು ಸಂತೋಷವಾಗಿ ಕಳೆದಿರುವ ಈ ಜೋಡಿ ನಾಲ್ಕನೇ ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಕಿರುತೆರೆಯಲ್ಲಿ ಸ್ವಾತಿ
ಸ್ವಾತಿ ಎಚ್ ವಿ ಮಾಡೆಲ್ ಆಗಿದ್ದು ಕನ್ನಡ ಕಿರುತೆರೆಯ ಹಲವು ಸೀರಿಯಲ್ ಗಳಲ್ಲಿ ವಿಲನ್ ಪಾತ್ರಗಳಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿದ್ದಾರೆ. ಶುಭ ವಿವಾಹ', 'ಪುಟ್ಟಗೌರಿ ಮದುವೆ', 'ಗಂಗಾ', 'ರಂಗನಾಯಕಿ', 'ಸರ್ವಮಂಗಳ ಮಾಗಲ್ಯೇ', 'ನಾಗಕನ್ನಿಕೆ''ಗಟ್ಟಿಮೇಳ', 'ಬೆಟ್ಟದ ಹೂ', 'ಕನ್ಯಾ ಕುಮಾರಿ' ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು.ಇದೀಗ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ರಾಜಿ ಪಾತ್ರದಲ್ಲಿ ಮನರಂಜಿಸುತ್ತಿದ್ದಾರೆ.
ಸ್ವಾತಿ ನಟಿಸಿದ ಸಿನಿಮಾಗಳು
ಡಿಪ್ಲೋಮಾ ಜ್ಯುವೆಲರಿ ಡಿಸೈನ್ ಮಾಡುತ್ತ, ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿಗೆ ಅಕಾಸ್ಮಾತ್ ಆಗಿ ಮಾಡೆಲಿಂಗ್ ಆಫರ್ ಬಂತು. ಮಿಸ್ ಕರ್ನಾಟಕ 2009 ವಿಜೇತೆಯಾಗಿರುವ ಸ್ವಾತಿ ಎಚ್ ವಿ ಅವರು ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 'ದಂಡುಪಾಳ್ಯ', 'ಬಿಡಲಾರೆ ನಿನ್ನ', 'ವಾರಸ್ದಾರ', 'ಉಡ', 'ಹುಂಜ', 'ವಿಘ್ನೇಶ್ವರ' ಇವರು ನಟಿಸಿದಾ ಚಿತ್ರಗಳು. ಕಿರುತೆರೆ, ಹಿರಿತೆರೆಯಲ್ಲಿ ಸೈ ಎನಿಸಿಕೊಂಡಿರುವ ಸ್ವಾತಿ ರಾಜಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರಾ? ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

