- Home
- Entertainment
- TV Talk
- Puttakkana Makkalu: ಕೊನೆಯಾಯ್ತು ಬಂಗಾರಮ್ಮ ಪಾತ್ರ; ಪುಟ್ಟಕ್ಕನ ಕಣ್ಣೀರಿಗೆ ಭಾವುಕರಾದ ವೀಕ್ಷಕರು
Puttakkana Makkalu: ಕೊನೆಯಾಯ್ತು ಬಂಗಾರಮ್ಮ ಪಾತ್ರ; ಪುಟ್ಟಕ್ಕನ ಕಣ್ಣೀರಿಗೆ ಭಾವುಕರಾದ ವೀಕ್ಷಕರು
Puttakkana Makkalu: ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಿಂದ ನಟಿ ಮಂಜು ಭಾಷಿಣಿ ನಿರ್ಗಮಿಸಿದ್ದಾರೆ. ಬಿಗ್‌ಬಾಸ್‌ಗಾಗಿ ಅವರು ಧಾರಾವಾಹಿ ತೊರೆದಿದ್ದರಿಂದ, ಕಥೆಯಲ್ಲಿ ಅವರು ನಿರ್ವಹಿಸುತ್ತಿದ್ದ ಬಂಗಾರಮ್ಮ ಪಾತ್ರವನ್ನು ಕೊನೆಗೊಳಿಸಲಾಗಿದೆ.

ಕೊನೆಯಾದ ಬಂಗಾರಮ್ಮ ಪಾತ್ರ
ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಿಂದ ಮಂಜು ಭಾಷಿಣಿ ಹೊರಗೆ ಬಂದಿದ್ದಾರೆ. ಇದೀಗ ಸೀರಿಯಲ್‌ನಲ್ಲಿ ಮಂಜು ಭಾಷಿಣಿ ನಿರ್ವಹಿಸುತ್ತಿದ್ದಂತೆ ಪಾತ್ರವನ್ನೇ ಕೊನೆ ಮಾಡಲಾಗಿದೆ. ಬಿಗ್‌ಬಾಸ್‌ಗಾಗಿ ಮಂಜು ಭಾಷಿಣಿ ಧಾರಾವಾಹಿಯಿಂದ ಹೊರಗೆ ಬಂದಿದ್ದರು. ಸೀರಿಯಲ್‌ನಲ್ಲಿ ತಮ್ಮ ಪಾತ್ರ ಮುಗಿಯುವ ಮೊದಲೇ ಮಂಜು ಭಾಷಿಣಿ ಔಟ್ ಆಗಿದ್ದರು.
ಪುಟ್ಟಕ್ಕನ ಕಣ್ಣೀರು
ಸಹನಾಳನ್ನು ಅಪಹರಣ ಮಾಡಲಾಗಿರುತ್ತದೆ. ಸಹನಾ ರಕ್ಷಣೆಗೆ ಪುಟ್ಟಕ್ಕ ಮತ್ತು ಬಂಗಾರಮ್ಮ ಮುಂದಾಗಿರುತ್ತಾರೆ. ರೌಡಿಗಳ ಸಂಘರ್ಷದ ವೇಳೆ ಬಂಗಾರಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬಂಗಾರಮ್ಮಮ ಪಾತ್ರ ಕೊನೆಯಾಗಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಪುಟ್ಟಕ್ಕನ ಕಣ್ಣೀರಿಗೆ ವೀಕ್ಷಕರು ಸಹ ಭಾವುಕರಾಗಿದ್ದಾರೆ.
ಸಮಯ ಬದಲಾವಣೆ
ಮೂರು ವರ್ಷಗಳಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರಸಾರವಾಗುತ್ತಿದೆ. ಆರಂಭದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿತ್ತು. ಅಲ್ಲಿಯವರೆಗೂ ಟಾಪ್ 1 ಮತ್ತು 2ನೇ ಸ್ಥಾನದಲ್ಲಿರುತ್ತಿದ್ದ ಪುಟ್ಟಕ್ಕನ ಮಕ್ಕಳ ಸೀರಿಯಲ್ ಟಿಆರ್‌ಪಿ ಮೇಲೆ ಬದಲಾದ ಸಮಯ ಪರಿಣಾಮ ಬೀರಿತು. ಸದ್ಯ ಪುಟ್ಟಕ್ಕನ ಮಕ್ಕಳು ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ.
ಈ ಹಿಂದೆಯೂ ಆಗಿತ್ತು ಪಾತ್ರದ ಕೊನೆ
ಈ ಹಿಂದೆ ಸ್ನೇಹಾ ಆಗಿ ನಟಿಸುತ್ತಿದ್ದ ನಟಿ ಸಂಜನಾ ಬುರ್ಲಿ ಸೀರಿಯಲ್‌ನಿಂದ ಹೊರಬರಲು ನಿರ್ಧರಿಸಿದಾಗ ನಿರ್ದೇಶಕರು ಆ ಪಾತ್ರವನ್ನೇ ಕೊನೆ ಮಾಡಿದ್ದರು. ನಂತರ ಹೊಸ ಪಾತ್ರ ಪರಿಚಯ ಮಾಡಿಸಿ ಹಲವು ತಿರುವುಗಳ ಮೂಲಕ ಧಾರಾವಾಹಿ ಮುಂದುವರಿದುಕೊಂಡು ಬಂದಿದೆ.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲೂ Bigg Boss ರಕ್ಷಿತಾ ಶೆಟ್ಟಿ ಹವಾ: ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್!
ಧಾರಾವಾಹಿಯೇ ಕೊನೆ ಮಾಡುವಂತೆ ವೀಕ್ಷಕರ ಮನವಿ
ಸದ್ಯ ಸೀರಿಯಲ್ ಮುಗಿಸುವಂತೆ ವೀಕ್ಷಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಪುಟ್ಟಕ್ಕ ಒಬ್ಬಳು ಉಳಿದು ಎಲ್ಲ ಸಾಯೋವರೆಗೂ ಈ ಧಾರಾವಾಹಿ ನಿಲ್ಲಿಸಲ್ಲ ಅನ್ನಿಸುತ್ತೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ರಬ್ಬರ್ ರೀತಿಯಲ್ಲಿ ಕಥೆಯನ್ನು ಎಳೆಯಬೇಡಿ. ಆದಷ್ಟು ಬೇಗ ಕಥೆಗೆ ಪೂರ್ಣವಿರಾಮ ಇರಿಸಿ ಎಂದಿದ್ದಾರೆ.
ಇದನ್ನೂ ಓದಿ: Bigg Bossನಿಂದ ಮಂಜು ಭಾಷಿಣಿಗೆ ಸಿಕ್ಕ ಸಂಭಾವನೆ ಎಷ್ಟು? ಖರ್ಚಾದದ್ದೆಷ್ಟು? ನಟಿ ರಿವೀಲ್