ರಮೇಶ್ ಅರವಿಂದ್ ನಿರ್ಮಾಣದ ಸೀರಿಯಲ್ ಗೆ ನಾಯಕಿಯಾದ ಪುಣ್ಯವತಿ ನಟಿ!
ಪುಣ್ಯವತಿ ಸೀರಿಯಲ್ ನಲ್ಲಿ ಮುಗ್ಧೆ ಪದ್ಮಿನಿಯಾಗಿ ನಟಿಸಿದ್ದ ನಟಿ ಪ್ರಿಯಾಂಕ ಸೀರಿಯಲ್ ಮುಗಿದ ಸ್ವಲ್ಪ ಸಮಯದಲ್ಲೇ ಹೊಸ ಸೀರಿಯಲ್ ನಲ್ಲಿ ಲೀಡ್ ರೋಲ್ ನಲ್ಲಿ ನಟಿಸಲಿದ್ದಾರೆ. ಯಾವ ಸೀರಿಯಲ್ ನೋಡೋಣ.
ಪುಣ್ಯವತಿ ಸೀರಿಯಲ್ ಮೂಲಕ ಪದ್ಮಿನಿಯಾಗಿ ಮನೆಮಾತಾಗಿದ್ದ ನಟಿ ಪ್ರಿಯಾಂಕ ಇದೀಗ ಹೊಸ ಸೀರಿಯಲ್ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರಲು ತಯಾರಿ ನಡೆಸಿದ್ದಾರೆ. ಅದು ಸಹ ರಮೇಶ್ ಅರವಿಂದ್ ನಿರ್ಮಾಣದ ಸೀರಿಯಲ್ ನಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾಗುವ ಹಿನ್ನೆಲೆಯಲ್ಲಿ ಪುಣ್ಯವತಿ ಸೀರಿಯಲ್ ಬೇಗನೆ ಕೊನೆಗೊಳಿಸಿದ್ದರು. ಸೀರಿಯಲ್ ನಲ್ಲಿ ಪದ್ಮಿನಿಯ ಮುಗ್ಧ ಪಾತ್ರವನ್ನು ಜನರು ಇಷ್ಟಪಟ್ಟಿದ್ದರು. ಮತ್ತೆ ನಟಿಯನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ಕನಸು ನನಸಾಗಿದೆ.
ರಮೇಶ್ ಅರವಿಂದ್ (Ramesh Aravind) ನಿರ್ಮಾಣದ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿರುವ ಸಾಮಾನ್ಯ ಜನರ ಅಸಮಾನ್ಯ ಕಥೆಯಾಗಿರುವ ಆಸೆ ಸೀರಿಯಲ್ ನಲ್ಲಿ ಪದ್ಮಿನಿ ಪಾತ್ರಧಾರಿ ಪ್ರಿಯಾಂಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೀರಿಯಲ್ ನಲ್ಲಿ ಮತ್ತೆ ಪ್ರಿಯಾಂಕರನ್ನು ನೋಡಿ ಜನ ಖುಷಿಯಾಗಿದ್ದಾರೆ.
ಇನ್ನು ಆಸೆ ಸೀರಿಯಲ್ ನಲ್ಲಿ ನಾಯಕನಾಗಿ ನಾಗಿಣಿ ಸೀರಿಯಲ್ ಖ್ಯಾತಿಯ ನಿನಾದ್ ಹರಿತ್ಸಾ (Ninad Haritsa) ನಟಿಸುತ್ತಿದ್ದಾರೆ. ಸೀರಿಯಲ್ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ರಮೇಶ್ ಅರವಿಂದ್ ಸ್ವತಃ ಸೀರಿಯಲ್ ನ ಪಾತ್ರಧಾರಿಗಳ ಬಗ್ಗೆ ಅಚ್ಚುಕಟ್ಟಾಗಿ ಮಾಹಿತಿ ನೀಡಿದ್ದಾರೆ.
ಇದು ಮಿಡಲ್ ಕ್ಲಾಸ್ ಫ್ಯಾಮಿಲಿಯ ಕಥೆ. ಹುಡುಗಿಯದ್ದು ಬಡ ಕುಟುಂಬ, ಹೂಮಾರುತ್ತಾ ಜೀವಿಸುವವರು. ಹುಡುಗ ಕೊಂಚ ಸ್ಥಿತಿವಂತ ಆದರೆ ಕುಡಿದುಕೊಂಡು ಜೀವನ ಹಾಳು ಮಾಡುತ್ತಿರೋದನ್ನು ಕಾಣಬಹುದು. ಇವರಿಬ್ಬರ ಆಸೆ ಬದುಕಿನ ಕಥೆಯೇ ಈ ಸೀರಿಯಲ್ ಜೀವಾಳ ಆಗಿರಬಹುದು.
ಸೀರಿಯಲ್ ನಲ್ಲಿ ಮಂಡ್ಯ ರಮೇಶ, ಛಾಯಾ, ಪ್ರಿಯಾಂಕ, ನಿನಾದ್ ಸೇರಿ ಹಲವು ಹಿರಿ ಕಿರಿಯ ನಟರು ನಟಿಸಿದ್ದಾರೆ. ರಮೇಶ್ ಅವರ ನಿರೂಪಣೆಯಲ್ಲಿ ಮೂಡಿ ಬಂದ ಪ್ರೊಮೋ ಸಿಂಪಲ್ ಆಗಿ ಯಾವುದೇ ಅಬ್ಬರ ಇಲ್ಲದೇ ಚೆನ್ನಾಗಿ ಮೂಡಿ ಬಂದಿದೆ.
ninad seria
ಪದ್ಮಿನಿಯನ್ನು ಮತ್ತೆ ತೆರೆ ಮೇಲೆ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ನಾಗಿಣಿ ೨ ಖ್ಯಾತಿಯ ನಿನಾದ್ ನಾಯಕನಾಗಿ ಅಭಿನಯಿಸುತ್ತಿರೋದಕ್ಕೂ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಶೀಘ್ರವಾಗಿ ಆರಂಭವಾಗಲಿರುವ ಈ ಸುಂದರ ಕಥೆಯನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.