- Home
- Entertainment
- TV Talk
- ಎಲ್ಲಾ ಶಾಸ್ತ್ರ, ಸಂಪ್ರದಾಯ ಗೊತ್ತು ಎನ್ನುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡಬಾರದು ಅನ್ನೋದು ಗೊತ್ತಿಲ್ವಾ?
ಎಲ್ಲಾ ಶಾಸ್ತ್ರ, ಸಂಪ್ರದಾಯ ಗೊತ್ತು ಎನ್ನುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡಬಾರದು ಅನ್ನೋದು ಗೊತ್ತಿಲ್ವಾ?
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸದ್ಯ ಪೂಜಾ ಮದುವೆ ಕಾರ್ಯಕ್ರಮ ಜೋರಾಗಿಯೇ ನಡೆಯುತ್ತಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಷಾಢದಲ್ಲಿ ಮದುವೆ ನಡೆಯುವ ಬಗ್ಗೆ ವ್ಯಂಗ್ಯ ಮಾಡ್ತಿದ್ದಾರೆ ಜನ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಭಾಗ್ಯಲಕ್ಷ್ಮೀ (Bhagyalakshmi serial) ಧಾರಾವಾಹಿಯಲ್ಲಿ ಕಳೆದ ಒಂದು ತಿಂಗಳಿನಿಂದ ಪೂಜಾ ಮದುವೆ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ವೈಷ್ಣವ್ ಮತ್ತು ಲಕ್ಷ್ಮೀ ಕೂಡ ಮದುವೆ ಮನೆಗೆ ಎಂಟ್ರಿ ಕೊಟ್ಟಾಗಿದೆ.
ಹಲವು ತೊಂದರೆಗಳು, ವಿಲನ್ ಗಳ ಮೇಲೆ ವಿಲನ್ ಗಳು ಬಂದು ಪೂಜಾ ಮತ್ತು ಕಿಶನ್ ಮದುವೆಯನ್ನು ನಿಲ್ಲಿಸೋದಕ್ಕೆ ಏನೆಲ್ಲಾ ಸರ್ಕಸ್ ಮಾಡಿದರೂ ಸಹ ಭಾಗ್ಯ ಎಲ್ಲಾ ಸಮಸ್ಯೆಯನ್ನು ಗೆದ್ದು, ಪೂಜಾ ಮದುವೆ ದಿನದವರೆಗು ಯಾವುದೇ ವಿಘ್ನ ಇಲ್ಲದೇ ನಡೆಯುವಂತೆ ಮಾಡಿದ್ದಾರೆ.
ಮದುವೆ ದಿನ ತಾಂಡವ್ ಬಂದು ಮದುವೆ ನಿಲ್ಲಿಸೋದಕ್ಕೆ ಪ್ಲ್ಯಾನ್ ಮಾಡಿ, ಕಿಶನ್ ಮನೆಯವರಿಗೆ ಭಾಗ್ಯನ ಬಗ್ಗೆ ಕೆಟ್ಟದಾಗಿ ಹೇಳಿ, ಪೂಜಾ ಕೂಡ ಅಷ್ಟೇ ಕೆಟ್ಟವಳು ಎಂದು ಹೇಳುತ್ತಾನೆ. ಆದರೆ ಅಲ್ಲೂ ಸಹ ತಾಂಡವ್ ಸೋಲುತ್ತಾನೆ.
ಒಟ್ಟಲ್ಲಿ ಎಲ್ಲಾ ತೊಂದರೆಗಳು ನಿವಾರಣೆಯಾಗಿ ಇನ್ನೇನು ಪೂಜಾ ಹಸೆಮಣೆಯಲ್ಲಿ ಕೂರಬೇಕು ಎನ್ನುವಾಗ ಅಲ್ಲಿಗೆ ಬರುವ ಭಾಗ್ಯ, ಈ ಮದುವೆ ನಡೆಯಬಾರದು, ಪೂಜಾ ಕಿಶನ್ ಮದುವೆಯಾಗಲೇ ಬಾರದು ಎನ್ನುತ್ತಾಳೆ. ಆ ಮೂಲಕ ಸೀರಿಯಲ್ ಗೆ ಮಹಾ ತಿರುವು ಸಿಗುತ್ತದೆ.
ಒಂದು ಕಡೆ ಕಿಶನ್ ಭಾಗ್ಯಳಿಗೆ ಪ್ರಾಮಿಸ್ ಮಾಡುತ್ತಾನೆ, ಏನೇ ಕಷ್ಟ ಆದರೂ ಸಹ ಪುಜಾ ಕೈ ಬಿಡೋದಿಲ್ಲ ನಾನು ಎಂದು, ಮತ್ತೊಂದು ಕಡೆ ಲಕ್ಷ್ಮೀ ಕೂಡ ಅಕ್ಕನನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಭಾಗ್ಯ ಯಾರ ಮಾತನ್ನೂ ಕೂಡ ಕೇಳುವಂತೆ ಕಾಣಿಸುತ್ತಿಲ್ಲ.
ಇದೆಲ್ಲದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಬೇರೆಯದ್ದೇ ಕಥೆ ನಡೆಯುತ್ತಿದೆ. ಈವಾಗ ಆಷಾಢ ಮಾಸ ನಡೆಯುತ್ತಿದೆ. ಆಷಾಢದಲ್ಲಿ ಸಾಮಾನ್ಯವಾಗಿ ಯಾವುದೇ ಮದುವೆ ಸಮಾರಂಭಗಳು ನಡೆಯೋದಿಲ್ಲ. ಆದರೆ ಪೂಜಾ ಮದುವೆ ಹೇಗೆ ನಡೆಯುತ್ತಿದೆ ಎಂದು ಕೇಳುತ್ತಿದ್ದಾರೆ.
ಅಲ್ಲ ಈ ಕುಸುಮಾ ಅತ್ತೆಗೆ ಎಲ್ಲಾ ಶಾಸ್ತ್ರ ಸಂಪ್ರದಾಯಗಳು ಗೊತ್ತಿದೆ, ಅದನ್ನೇ ಅವರು ಯಾವಾಗಲೂ ಹೇಳುತ್ತಲೇ ಇರುತ್ತಾರೆ. ಆದರೆ ಆಷಾಢ ಮಾಸದಲ್ಲಿ ಮದುವೆ ಮಾಡಬಾರದು ಅನ್ನೋದು ಮಾತ್ರ ಕುಸುಮತ್ತೆಗೆ ಗೊತ್ತೇ ಆಗಲ್ವ ಎಂದು ಕೇಳಿದ್ದಾರೆ.
ಇದಕ್ಕೆ ಕಾಮೆಂಟ್ ಗಳು ಕೂಡ ಬಂದಿದ್ದು, ಮದುವೆ ಆಷಾಡದಲ್ಲಿ ಶುರು ಆದರೂ ತಾಳಿ ಕಟ್ಟೋದು ಶ್ರಾವಣದಲ್ಲೇ ಎಂದು ಒಬ್ಬರು ಹೇಳಿದ್ರೆ, ಮತ್ತೊಬ್ಬರು ಅಯ್ಯೋ ಶ್ರಾವಣ ಬಂದ್ರು ಇನ್ನು ಮದ್ವೇ ಮಾಡಿರಲ್ಲ ಸುಮ್ನೆ ಇರಿ ಇನ್ನು 2 ತಿಂಗಳೂ ಬೇಕು ಅವ್ರು ಮದ್ವೆಗೆ ಅಂದಿದ್ದಾರೆ. ಇನ್ನೂ ಒಬ್ಬರು ಈ ಆಷಾಢ ಹೋಗಿ ಶ್ರಾವಣ ಬಂದ್ರೆ ನಮ್ಮ ಕಿಶನ್ ಪೂಜಾಗೆ ತಾಳಿ ಕಟ್ತಾನೆ ಅಂತ ಸಿದ್ಧಿ ಬುದ್ಧಿ ಜೋಯಿಸ್ರು ಹೇಳಿದ್ದಾರೆ ಎಂದಿದ್ದಾರೆ.