- Home
- Entertainment
- TV Talk
- Niveditha Gowda: ಕೆಟ್ಟ ಕಾಮೆಂಟ್ ಮಾಡೋರೇ ನೋಡಿ ನಮ್ ಹುಡ್ಗಿ ಸೀತೆಯಷ್ಟೇ ಪವಿತ್ರೆ ಅನ್ನೋದ ನಿವೇದಿತಾ ಫ್ಯಾನ್ಸ್
Niveditha Gowda: ಕೆಟ್ಟ ಕಾಮೆಂಟ್ ಮಾಡೋರೇ ನೋಡಿ ನಮ್ ಹುಡ್ಗಿ ಸೀತೆಯಷ್ಟೇ ಪವಿತ್ರೆ ಅನ್ನೋದ ನಿವೇದಿತಾ ಫ್ಯಾನ್ಸ್
ನೀವೇದಿತಾ ಗೌಡ ಮತ್ತೊಂದು ಬಾರಿ ಟ್ರೆಡಿಶನಲ್ ಲಂಗ -ದಾವಣಿ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಈಕೆಯನ್ನು ನೋಡಿ ಅಭಿಮಾನಿಗಳಂತೂ ಫುಲ್ ಖುಷಿ.

ತಮ್ಮ ರೀಲ್ಸ್ ಮೂಲಕ ಹಾಗೂ ಕನ್ನಡ ಕಿರುತೆರೆ ಮೂಲಕ ಜನಪ್ರಿಯತೆ ಪಡೆದ ಬೆಡಗಿ ನಿವೇದಿತಾ ಗೌಡ (Niveditha Gowda), ಫೇಮಸ್ ಆಗಿದ್ದು, ತಮ್ಮ ಬೋಲ್ಡ್ ಅವತಾರಗಳ ಮೂಲಕ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಿವೇದಿತಾ, ದಿನಕ್ಕೊಂದು ಅವತಾರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಗಳ ಕಾಮೆಂಟ್ ಗಳಿಗೆ ಆಹಾರವಾಗಿದ್ದರು. ಆದರೆ ಇದೀಗ ನಿವೇದಿತಾ ಲುಕ್ ಬದಲಾಗಿದೆ.
ನಿವೇದಿತಾ ಗೌಡ ಕೆಲ ದಿನಗಳ ಹಿಂದೆಯಷ್ಟೇ ಸುಂದರವಾಗಿ ಸೀರೆಯುಟ್ಟು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದರು. ಈ ಫೋಟೊವನ್ನು ನೋಡಿ, ಅಭಿಮಾನಿಗಳು ಖುಷಿಪಟ್ಟಿದ್ದು, ನಮ್ಮ ಹುಡುಗಿಗೆ ಟ್ರೆಡಿಶನಲ್ ಲುಕ್ ನಲ್ಲೂ (Traditional look) ಮಿಂಚೋದಕ್ಕೆ ಬರುತ್ತೆ,ಸೀರೆಯಲ್ಲಿ ದಂತದ ಬೊಂಬೆ ಥರ ಕಾಣಿಸ್ತಿದ್ದಾರೆ ಎಂದು ಹೇಳಿದ್ದರು.
ಇದೀಗ ಮತ್ತೆ ನಿವೇದಿತಾ ಗೌಡ ಟ್ರೆಡಿಶನಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇವರ ಲುಕ್ ನೋಡಿ ಅಭಿಮಾನಿಗಳು ವಾರೆ ವಾ ಅಂತಿದ್ದಾರೆ. ಲಂಗ ದಾವಣಿಯಲ್ಲಿ ಮಾಡರ್ನ್ ಬೆಡಗಿ ನಿವೇದಿತಾ ಗೌಡ ಅಪ್ಸರೆಯಂತೆ ಕಾಣಿಸ್ತಿರೋದಂತೂ ನಿಜಾ. ಇಷ್ಟು ದಿನ ತುಂಡು ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದವರು, ಇದೀಗ ಟ್ರೆಡಿಶನಲ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾ ಅಚ್ಚರಿ ಮೂಡಿಸುತ್ತಿದ್ದಾರೆ.
ನಿವೇದಿತಾ ಗೌಡ ಅಭಿಮಾನಿಗಳಂತೂ ಆಕೆಯ ಟ್ರೆಡಿಶನಲ್ ಲುಕ್ ನಿಂದ ಸಂತಸಗೊಂಡಿದ್ದು, ಅಪ್ಸರೆ, ಕೆಟ್ಟ ಕಾಮೆಂಟ್ಸ್ (bad comments) ಮಾಡೋರೂ ನೋಡಿ ನಮ್ಮ ಹುಡ್ಗಿ ಹೆಂಗೆ? ಒಳ್ಳೇ ಮನಸ್ಸು ಇದೆ, ಸೀತೆ ಅಷ್ಟೇ ಪವಿತ್ರ ನಮ್ಮ ನಿವೇದಿತಾ ಗೌಡ ಎಂದಿದ್ದಾರೆ ಅಷ್ಟೇ ಅಲ್ಲ ಮುದ್ದು ಬಂಗಾರಿ, ಈ ಥರ ಇದ್ರೆ ಯಾರೂ ಕೆಟ್ಟ ಕಾಮೆಂಟ್ ಮಾಡಲ್ಲ ಮೇಡಂ ಅಂತಾನೂ ಹೇಳಿದ್ದಾರೆ.
ಇನ್ನೊಂದಿಷ್ಟು ಜನ ಕಾಮೆಂಟ್ ಮಾಡಿ, ನಿಮ್ಮ ಅಂದಕ್ಕೆ ಈವಾಗ ಒಂದು ಕಳೆ ಬಂತು, ತುಂಬಾನೆ ಕ್ಯೂಟ್ ಆಗಿ ಕಾಣಿಸ್ತಿದ್ದೀರಿ. ನಿಮ್ಮ ಲುಕ್ ಚೆನ್ನಾಗಿದೆ, ಯಾವಾಗ್ಲೂ ಹೀಗೆ ರೆಡಿಯಾಗಿ ಎಂದು ಹೇಳಿದ್ದಾರೆ. ಇಷ್ಟು ದಿನ ಕೆಟ್ಟ ಕಾಮೆಂಟ್ ಗಳಿಂದಲೇ ತುಂಬುತ್ತಿದ್ದ ಕಾಮೆಂಟ್ ಸೆಕ್ಷನ್ ನಲ್ಲಿ ಈ ಬಾರಿ ಪಾಸಿಟಿವಿಟಿ ಎದ್ದು ಕಾಣುತ್ತಿದೆ.
ನಿವೇದಿತಾ ಗೌಡ ಬಗ್ಗೆ ಹೇಳೋದಾದ್ರೆ, ಅವರು ಬಿಗ್ ಬಾಸ್ ನಿಂದ ತಮ್ಮ ಕಿರುತೆರೆ ಜರ್ನಿ ಆರಂಭಿಸಿ ಇಲ್ಲಿವರೆಗೂ ಕಿರುತೆರೆಯಲ್ಲಿಯೇ ಮಿಂಚುತ್ತಿದ್ದಾರೆ. ಚಂದನ್ ಶೆಟ್ಟಿಯನ್ನು ಮದುವೆಯಾಗುವ ಮೂಲಕ ಹಾಗೂ ಡಿವೋರ್ಸ್ ವಿಷಯದ ಮೂಲಕ ಸುದ್ದಿಯಲ್ಲಿದ್ದರು ನಿವೇದಿತಾ. ಇದೀಗ ಚಂದನ್ ಜೊತೆ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ, ಅಲ್ಲದೇ ತೆಲುಗಿನ ಆಲ್ಬಂ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ ನಿವೇದಿತಾ ಗೌಡ.