- Home
- Entertainment
- TV Talk
- Niveditha Gowda: ಅಪರೂಪಕ್ಕೆ ಸೀರೆಯುಟ್ಟ ನಿವೇದಿತಾ ಗೌಡ…ಸೂರ್ಯ ಯಾವ ಕಡೆ ಹುಟ್ಟಿದ್ದು ಕೇಳ್ತಿದ್ದಾರೆ ಫ್ಯಾನ್ಸ್
Niveditha Gowda: ಅಪರೂಪಕ್ಕೆ ಸೀರೆಯುಟ್ಟ ನಿವೇದಿತಾ ಗೌಡ…ಸೂರ್ಯ ಯಾವ ಕಡೆ ಹುಟ್ಟಿದ್ದು ಕೇಳ್ತಿದ್ದಾರೆ ಫ್ಯಾನ್ಸ್
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್ ಮೂಲಕವೇ ಸದ್ದು ಮಾಡುವ ನಿವೇದಿತಾ ಗೌಡ ಅಪರೂಪಕ್ಕೆ ಎನ್ನುವಂತೆ ಮೈ ತುಂಬಾ ಸೀರೆಯುಟ್ಟು ದೇವತೆಯಂತೆ ಮಿಂಚುತ್ತಿದ್ದಾರೆ.

ನಿವೇದಿತಾ ಗೌಡ (Niveditha Gowda) ಸೋಶಿಯಲ್ ಮೀಡಿಯಾ ಸೆನ್ಸೇಶನ್. ಅವರು ಏನ್ ಮಾಡಿದ್ರೂ ಅದು ಸುದ್ದಿಯಾಗುತ್ತಲೇ ಇರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ಬೆಡಗಿ ತಮ್ಮ ರೀಲ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.
ಹೆಚ್ಚಾಗಿ ಮಿನಿ ಡ್ರೆಸ್ ಧರಿಸಿ, ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ನಿವೇದಿತಾ ಗೌಡಗೆ ಕಾಮೆಂಟ್ ಮೂಲಕ ಕಿರಿಕ್ ಮಾಡುವವರೇ ಜಾಸ್ತಿ ಇರುತ್ತಾರೆ. ಆದರೆ ಅದ್ಯಾವುದಕ್ಕೂ ಕ್ಯಾರೆ ಎನ್ನದ ನಿವೇದಿತಾ, ನನ್ನಿಷ್ಟ ನಾನು ಏನ್ ಬೇಕಾದ್ರೂ ಮಾಡ್ತೀನಿ ಎನ್ನುವಂತೆ ರೀಲ್ಸ್ ಹಾಕೋದನ್ನು ಮುಂದುವರೆಸುತ್ತಲೇ ಇರುತ್ತಾರೆ.
ನಿವೇದಿತಾ ಗೌಡ ಸೀರೆಯಲ್ಲಿ ಕಾಣಿಸಿಕೊಳ್ಳೊದೆ ಕಡಿಮೆ. ಸೀರೆ ಉಟ್ಟಿದ್ದರೂ ಸಹ, ಅಲ್ಲೂ ಸಖತ್ ಬೋಲ್ಡ್ ಆಗಿಯೇ ಕಾಣಿಸುತ್ತಾರೆ ಚೆಲುವೆ. ಆದರೆ ಈ ಬಾರಿ ಅಪರೂಪಕ್ಕೆ ಎನ್ನುವಂತೆ ಮೈ ತುಂಬಾ ಸೀರೆಯುಟ್ಟು, ಮುದ್ದು ದೇವತೆಯಂತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ.
ಗೋಲ್ಡನ್ ಹಳದಿ ಬಣ್ಣದ ಸೀರೆ ಅದಕ್ಕೆ ಮ್ಯಾಚಿಂಗ್ ಆಗುವ ಬ್ಲೌಸ್ ಧರಿಸಿರುವ ನಿವೇದಿತಾ ಗೌಡ, ಮುದ್ದಾಗಿ ಜಡೆ ಹಾಕಿ, ದುಂಡು ಮಲ್ಲಿಗೆ ಹೂವು ಮುಡಿದು, ಸಿಂಪಲ್ ಆಗಿ ಕೈ ಬಳೆ, ನೆಕ್ಲೆಸ್, ಮುಂದಾಲೆ, ಇಯರಿಂಗ್ಸ್ ಧರಿಸಿ, ಹೂ ನಗು ಬೀರಿದ್ದು, ವಾರೆ ವಾ ಎನ್ನುವಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆ.
ಆದರೆ ಅಪರೂಪದಲ್ಲಿ ಅಪರೂಪಕ್ಕೆ ಎನ್ನುವಂತೆ, ಇಷ್ಟೊಂದು ಸಿಂಪಲ್ ಆಗಿ, ಸಾಂಪ್ರದಾಯಿಕವಾಗಿ ಕಾಣಿಸಿಕೊಂಡದ್ದನ್ನು ನೋಡಿ ಶಾಕ್ ಆಗಿದ್ದಾರೆ… ಏನಿದು ಫುಲ್ ಡ್ರೆಸ್, ಎಂತ ಮಾರ್ರೆ ಸೂರ್ಯ ಯಾವಕಡೆ ಹುಟ್ಟಿದಾನೆ, ಇದು ಏಐ ಚಿತ್ರಾನ (AI Photo)? ಹೆಣ್ಣಿಗೆ ಯಾವಾಗ್ಲೂ ಸೀರೆ ತುಂಬಾ ಚೆನ್ನಾಗಿ ಕಾಣುತ್ತದೆ ... ಅದನ್ನು ಬಿಟ್ಟು ಚೆಡ್ಡಿ ಮೇಲೆ... ಇದ್ದ ಫೋಟೋ ಬಿಟ್ರೆ ಕೆಟ್ಟದಾಗಿ ಹೇಳೋರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಮತ್ತಷ್ಟು ಅಭಿಮಾನಿಗಳು ನಿವೇದಿತಾ ಅಂದಕ್ಕೆ ಸೋತು ಬಂಗಾರದ ಗೊಂಬೆ (Golden doll), ಅಪ್ಸರೆ, ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಿ, ಇದಪ್ಪಾ ಲಕ್ಷಣ ಅಂದ್ರೆ, ನೋಡಿದ್ರೆ ನೋಡ್ತಾನೆ ಇರಬೇಕು ಅನಿಸತ್ತೆ, ಇವತ್ತು ನಿಮ್ಮ ಹೇಟರ್ಸ್ ಕೂಡ ಬಾಯಿಗೆ ಬೀಗ ಹಾಕಿ ನಿಮ್ಮಂದವನ್ನು ಮನಸಿನಲ್ಲಿಯೇ ಹೋಗಳುತ್ತಿರಬೇಕು ಎಂದು ಸಹ ಹೇಳಿದ್ದಾರೆ.