- Home
- Entertainment
- TV Talk
- Niveditha Gowda : ಬಾತ್'ರೂಮ್ ಫೋಟೊಸ್ ಶೇರ್ ಮಾಡಿ ಟ್ರೋಲಿಗರಿಗೆ ವಾರ್ನಿಂಗ್ ಕೊಟ್ಟ ನಿವೇದಿತಾ ಗೌಡ
Niveditha Gowda : ಬಾತ್'ರೂಮ್ ಫೋಟೊಸ್ ಶೇರ್ ಮಾಡಿ ಟ್ರೋಲಿಗರಿಗೆ ವಾರ್ನಿಂಗ್ ಕೊಟ್ಟ ನಿವೇದಿತಾ ಗೌಡ
ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ನಿವೇದಿತಾ ಗೌಡ ಹೊಸದಾಗಿ ತಮ್ಮ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಟ್ರೋಲಿಗರಿಗೆ ವಾರ್ನ್ ಮಾಡಿದ್ದಾರೆ.

ಬಿಗ್ ಬಾಸ್ ಸೇರಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕವೇ ಖ್ಯಾತಿ ಪಡೆದ ಬೆಡಗಿ ನಿವೇದಿತಾ ಗೌಡ (Niveditha Gowda), ಇದೀಗ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಅದು ಕೂಡ ಬಾತ್ ರೂಮ್ ಸೆಲ್ಫಿಗಳನ್ನು ಶೇರ್ ಮಾಡುವ ಮೂಲಕ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾ, ಹೆಚ್ಚಾಗಿ ತಮ್ಮ ಬಾತ್ ರೂಮಿನಲ್ಲಿಯೇ ಫೋಟೊ ಅಥವಾ ರೀಲ್ಸ್ ಗಳನ್ನು ಮಾಡುತ್ತಾ, ಅದೇ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೆ ನಟಿ ಬಾತ್ ರೂಮ್ ಸೆಲ್ಫಿ (bathroom selfies) ಹಂಚಿಕೊಂಡಿದ್ದಾರೆ.
ಬಾರ್ ರೂಮಿನಲ್ಲಿ ಫೋಕಸ್ ಲೈಟ್ ಚೆನ್ನಾಗಿರೋದರಿಂದ ನಿವೇದಿತಾ ತಮ್ಮ ಹೆಚ್ಚಿನ ಫೋಟೊಗಳನ್ನು ಬಾತ್ ರೂಮಿನಲ್ಲಿ ತೆಗೆದುಕೊಳ್ಳುತ್ತಾರೆ. ಆದರೆ ಆ ವಿಷ್ಯದಿಂದಲೇ ನಿವೇದಿತಾ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿದ್ದರು. ದೊಡ್ಡ ಬಂಗಲೆಯಲ್ಲಿ ವಾಸಿಸುತ್ತಿದ್ದರು ರೀಲ್ಸ್ ಮಾಡೋದಕ್ಕೆ ಮಾತ್ರ ಬಾತ್ ರೂಮ್ ಬೇಕಾ? ಎಂದು ಸಹ ಪ್ರಶ್ನಿಸಿದ್ದರು.
ಈ ಹಿಂದೆ ಜನರು ಹೆಚ್ಚಾಗಿ ಸೆಲೆಬ್ರಿಟಿಗಳು (celebrities) ಬಾತ್ ರೂಮ್ ಸೆಲ್ಫಿಗಳನ್ನು ಶೇರ್ ಮಾಡುವ ಮೂಲಕ ಹೆಚ್ಚು ಲೈಕ್ಸ್ ಪಡೆಯುತ್ತಾರೆ, ಅದಕ್ಕಾಗಿ ನಿವೇದಿತಾ ಕೂಡ ಬಾತ್ ರೂಮ್ ಫೋಟೊಗಳನ್ನು ಶೇರ್ ಮಾಡಿ, ಲೈಕ್ಸ್, ಶೇರ್ ಪಡೆಯುವ ಮೂಲಕ ವೈರಲ್ ಆಗೋಕೆ ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು. ಆದರೆ ಅದ್ಯಾವುದಕ್ಕೂ ನಿವೇದಿತಾ ತಲೆಕೆಡಿಸಿಕೊಂಡಿರಲಿಲ್ಲ.
ಇದೀಗ ಈ ರೀಲ್ಸ್ ಬೆಡಗಿ ತಮ್ಮ ಗೆಳತಿ ಜೊತೆ ಸೇರಿಕೊಂಡು ಮತ್ತೆ ಬಾತ್ ರೂಮ್ ಸೆಲ್ಫಿಗಳನ್ನ ಶೇರ್ ಮಾಡುವ ಮೂಲಕ, ಟ್ರೋಲ್ ಮಾಡುವ ಜನರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಿವೇದಿತಾ ಏನ್ ಹೇಳಿದ್ದಾರೆ ಗೊತ್ತಾ?
ನಿವೇದಿತಾ ಗೌಡ, ಬ್ರೌನ್ ಕಲರ್ ಡ್ರೆಸ್ ಧರಿಸಿದ್ದು, ಆಕೆಯ ಗೆಳತಿ ಬ್ಲ್ಯಾಕ್ ಡ್ರೆಸ್ ಧರಿಸಿ, ಇಬ್ಬರು ಜೊತೆಯಾಗಿ ಮಿರರ್ ಮುಂದೆ ನಿಂತು ಫೋಟೊ ತೆಗೆದಿದ್ದಾರೆ, ಅಲ್ಲದೇ ಗೆಳತಿ ನಿವೇದಿತಾ ಗೌಡರನ್ನು ಹಲವು ಪೋಸ್ ಗಳಲ್ಲಿ ಕ್ಯಾಪ್ಚರ್ ಮಾಡಿದ್ದಾರೆ. ತಮ್ಮ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾ ಖಾತೆ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ನಿವೇದಿತಾ ಟ್ರೋಲಿಗರಿಗೆ ವಾರ್ನ್ ಮಾಡಿದ್ದಾರೆ.
ಹೌದು ತಮ್ಮ ಫೋಟೊಗಳ ಜೊತೆಗೆ ನಿವೇದಿತಾ… ನಾನು ಮತ್ತು ನನ್ನ ಬಾತ್ ರೂಮ್ ಸೆಲ್ಫಿಗಳು ನಮ್ಮ ಕೆಲಸವನ್ನು ನಾವು ಮಾಡ್ತಿದ್ದೀವಿ. ಹಾಗೆಯೇ ನೀವು ಕೂಡ ನಿಮ್ಮ ಕೆಲಸ ನೋಡಿ ಎನ್ನುವಂತೆ ಇಂಗ್ಲಿಷ್ ನಲ್ಲಿ ಬರೆದುಕೊಂಡಿದ್ದಾರೆ ( Me and my bathroom selfies minding our own business.. you should too…)
ಇನ್ನು ಕಾಮೆಂಟ್ ಸೆಕ್ಷನ್ ಪೂರ್ತಿ ಎಂದಿನಂತೆ ಇಷ್ಟಪಡುವವರು ಪ್ರೀತಿ ತೋರಿಸಿದ್ದಾರೆ,ಟ್ರೋಲಿಗರು ಕೆಟ್ಟ ಕೆಟ್ಟ ಕಾಮೆಂಟ್ ಮಾಡುವ ಮೂಲಕ ನಿವೇದಿತಾ ವಿರುದ್ಧ ಕಿಡಿ ಕಾರಿದ್ದಾರೆ. ಯಾರೆ ಏನೇ ಹೇಳಿದ್ರೂ ನಿವೇದಿತಾ ತಮಗೆ ಇಷ್ಟ ಬಂದಂತೆ ಫೋಟೊ ಶೇರ್ ಮಾಡೋದು ಮಾತ್ರ ಬಿಡಲ್ಲ.