- Home
- Entertainment
- TV Talk
- Photos: ʼನಿನ್ನ ಜೊತೆ ನನ್ನ ಕಥೆʼ ಧಾರಾವಾಹಿ ನಟಿ ಮೇಘಶ್ರೀ ಮದುವೆಯಲ್ಲಿ ಕಿರುತೆರೆ ಸೆಲೆಬ್ರಿಟಿಗಳು
Photos: ʼನಿನ್ನ ಜೊತೆ ನನ್ನ ಕಥೆʼ ಧಾರಾವಾಹಿ ನಟಿ ಮೇಘಶ್ರೀ ಮದುವೆಯಲ್ಲಿ ಕಿರುತೆರೆ ಸೆಲೆಬ್ರಿಟಿಗಳು
'ನಿನ್ನ ಜೊತೆ ನನ್ನ ಕಥೆ', ʼನೀನಾದೆ ನಾʼ, ʼಪುಣ್ಯವತಿʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಮೇಘಶ್ರೀ ಅವರು ಮದುವೆಯಾಗಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದ ಮೇಘಶ್ರೀ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಆರತಕ್ಷತೆ, ಮದುವೆ ಫೋಟೋಗಳು ಇಲ್ಲಿವೆ.
15

ಕನ್ನಡ ನಟಿ ಮೇಘಶ್ರೀ ಅವರು ಬೆಂಗಳೂರಿನಲ್ಲಿ ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟಿ ಸುಷ್ಮಾ ನಾಣಯ್ಯ ಅವರು ಭಾಗಿಯಾಗಿದ್ದರು.
25
ಆರತಕ್ಷತೆ ದಿನ ಮೇಘಶ್ರೀ ಅವರು ನೇರಳೆ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಮೇಘಶ್ರೀ ಅವರು ಈ ರೀತಿ ರೆಡಿ ಆಗಬೇಕು ಅಂತ ತುಂಬ ದಿನಗಳಿಂದ ಆಸೆಪಟ್ಟಿದ್ದರು.
35
ಮೇಘಶ್ರೀ ಹಾಗೂ ಪವನ್ ಅವರು ಮದುವೆಯಾಗಿದ್ದಾರೆ. ಈ ಮೂಲಕ ಮೇಘಶ್ರೀ ಅವರು ಕುಂದಾಪುರದ ಸೊಸೆ ಆಗಿದ್ದಾರೆ. ಇನ್ನು ಈ ಆರತಕ್ಷತೆಯಲ್ಲಿ ʼಲಕ್ಷ್ಮೀ ನಿವಾಸʼ ಧಾರಾವಾಹಿ ನಟ ಅಮಿತ್ ರಾವ್ ಭಾಗವಹಿಸಿದ್ದರು.
45
ಈಗಾಗಲೇ ಕೆಲ ಕನ್ನಡ ಸಿನಿಮಾಗಳಲ್ಲಿ ಮೇಘಶ್ರೀ ಅವರು ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದಾರೆ.
55
ಮೇಘಶ್ರೀ ಅವರು ಫೋಟೋಗ್ರಾಫರ್ ಪವನ್ ಅವರನ್ನು ಮದುವೆಯಾಗಿದ್ದಾರೆ. ಇವರ ಮೆಹೆಂದಿಯಲ್ಲಿ ಮೇಘಶ್ರೀ, ಪವನ್ ಕಾಣಿಸಿದ್ದು ಹೀಗೆ...
Latest Videos