- Home
- Entertainment
- TV Talk
- ಬ್ಲೌಸ್ ಲೆಸ್ ಸೀರೆ ನಮ್ಮ ಸಂಸ್ಕೃತಿ, ನೆಗೆಟಿವ್ ಕಮೆಂಟ್ ಮಾಡೋರಿಗೆ ಐಶ್ವರ್ಯ ಸಿಂಧೋಗಿ ತಿರುಗೇಟು
ಬ್ಲೌಸ್ ಲೆಸ್ ಸೀರೆ ನಮ್ಮ ಸಂಸ್ಕೃತಿ, ನೆಗೆಟಿವ್ ಕಮೆಂಟ್ ಮಾಡೋರಿಗೆ ಐಶ್ವರ್ಯ ಸಿಂಧೋಗಿ ತಿರುಗೇಟು
ಮಿಡಿ ಇರ್ಲಿ, ಸೀರೆ ಇರ್ಲಿ, ಸೆಲೆಬ್ರಿಟಿಗಳು ಧರಿಸುವ ಬಟ್ಟೆ ಮೇಲೆ ವೀಕ್ಷಕರ ಕಮೆಂಟ್ ಸಾಮಾನ್ಯ. ಬಿಗ್ ಬಾಸ್ ಮಾಜಿ ಸ್ಪರ್ಧಿ ಐಶ್ವರ್ಯ ಸಿಂಧೋಗಿಗೆ ಕೂಡ ನೆಗೆಟಿವ್ ಕಮೆಂಟ್ ಬರ್ತಾನೆ ಇರುತ್ತೆ. ಅದ್ರ ಬಗ್ಗೆ ನಟಿ ಏನು ಹೇಳಿದ್ದಾರೆ ನೋಡಿ.

ನೆಗೆಟಿವ್ ಕಮೆಂಟ್ ಬಂದ್ರೆ ನೋವು
ಬಿಗ್ ಬಾಸ್ ಮಾಜಿ ಸ್ಪರ್ಧಿ ಐಶ್ವರ್ಯ ಸಿಂಧೋಗಿ ನೆಗೆಟಿವ್ ಕಮೆಂಟ್ ಬಂದಾಗ ತುಂಬಾ ಡಿಸ್ಟರ್ಬ್ ಆಗ್ತಾರೆ. ಇಡೀ ದಿನ ಅದ್ರ ಬಗ್ಗೆ ಆಲೋಚನೆ ಮಾಡ್ತಾರೆ. ರಾತ್ರಿ ಕೂಡ ನಿದ್ರೆ ಬರೋದಿಲ್ಲ. ಊಟ ಮಾಡೋಕೆ ಮನಸಾಗೋದಿಲ್ಲ. ಕಮೆಂಟ್ ಮನಸ್ಸಿಗೆ ನೋವು ನೀಡುತ್ತೆ ಎನ್ನುತ್ತಾರೆ ಐಶ್ವರ್ಯ.

ನಾವೂ ಮನುಷ್ಯರು
ಕಮೆಂಟ್ ಮಾಡೋರಿಗೆ ನಾವು ಗೊಂಬೆಯಂತೆ ಕಾಣಿಸ್ತೇವೆ. ಸಿನಿಮಾ, ಸೀರಿಯಲ್, ಸೋಶಿಯಲ್ ಮೀಡಿಯಾದಲ್ಲಿ ಆಕ್ಟ್ ಮಾಡೋರು ಗೊಂಬೆಯಲ್ಲ. ನಮಗೂ ಭಾವನೆಗಳಿವೆ ಅಂತ ಐಶ್ವರ್ಯ ಸಿಂಧೋಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ನಾವು ಸ್ಟ್ರಾಂಗ್ ಆಗಿದ್ದೇವೆ ಅಂತ ಎದುರಿಗೆ ಕಾಣಿಸಿಕೊಂಡ್ರೂ ಮನಸ್ಸಿನಲ್ಲಿ ಬೇಜಾರಾಗೇ ಆಗುತ್ತೆ ಎನ್ನುತ್ತಾರೆ ಐಶ್ವರ್ಯ ಸಿಂಧೋಗಿ.
ಮನೆ ಮಗಳು ಐಶ್ವರ್ಯ ?
ಬಿಗ್ ಬಾಸ್ ಮಾಜಿ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಮನೆ ಮಗಳು ಎನ್ನುವ ಪಟ್ಟದ ಬಗ್ಗೆಯೂ ಐಶ್ವರ್ಯ ಸಿಂಧೋಗಿ ಮಾತನಾಡಿದ್ದಾರೆ. ನನಗೆ ಮನೆ ಮಗಳು ಎನ್ನುವ ಪಟ್ಟ ನೀಡಿದ್ದಾರೆ. ಮನೆ ಮಗಳು ಇಂಥ ಡ್ರೆಸ್ ಹಾಕ್ತಾರೆ, ಥೈಲ್ಯಾಂಡ್ ಗೆ ಹೋಗ್ತಾರೆ, ದುಡ್ಡು ಎಲ್ಲಿಂದ ಬರುತ್ತೆ ಎನ್ನುವ ಕಮೆಂಟ್ ಗಳನ್ನು ಜನರು ಮಾಡ್ತಾರೆ. ನಾನು ಮನೆಮಗಳಾಗುವ ಮೊದಲು ಅಪ್ಪ ಅಮ್ಮನ ಮಗಳು. ನನಗೆ ಅಪ್ಪ ಅಮ್ಮ ಯಾವಾಗಲೂ ಕಂಡೀಷನ್ ಹಾಕಿಲ್ಲ. ನನ್ನನ್ನು ಸ್ವತಂತ್ರವಾಗಿ ಬೆಳೆಸಿದ್ದಾರೆ. ಅದೇ ಕಾರಣಕ್ಕೆ ನಾನು ಅವರಿಲ್ಲ ಅಂದ್ರೂ ಧೈರ್ಯವಾಗಿ ಬದುಕುತ್ತಿದ್ದೇನೆ ಎಂದು ಐಶ್ವರ್ಯ ಹೇಳಿದ್ದಾರೆ.
ಅತ್ರೆ ಜನರಿಗೆ ಇಷ್ಟವಾಗುತ್ತಾ?
ಮನೆ ಮಗಳು ಅಂತ ಟೈಟಲ್ ಕೊಟ್ಟ ಜನರಿಗೆ ನಾನು ಸ್ಟ್ರಾಂಗ್ ಆಗಿರೋದು ಇಷ್ಟವಿಲ್ಲ. ನಾನು ಅಳ್ತಾ, ಮೂಲೆಯಲ್ಲಿ ಕುಳಿತ್ರೆ ಎಲ್ಲರಿಗೂ ಇಷ್ಟವಾಗುತ್ತಾ ಅಂತ ಐಶ್ವರ್ಯ ಪ್ರಶ್ನೆ ಮಾಡ್ತಿದ್ದಾರೆ. ನಾನು ಸ್ಟ್ರಾಂಗ್ ಆಗಿ, ನನ್ನ ಕಾಲ ಮೇಲೆ ನಿಂತು ದುಡಿದು ತಿನ್ನೋದು ಯಾರಿಗೂ ಇಷ್ಟವಿಲ್ಲ ಎನ್ನುವ ಅಭಿಪ್ರಾಯವನ್ನು ಐಶ್ವರ್ಯ ಹೇಳಿದ್ದಾರೆ.
ಫ್ಯಾಷನ್ ಕಲಿಸಿದ್ದು ಅಮ್ಮ
ಐಶ್ವರ್ಯ ಎಲ್ಲ ರೀತಿಯ ಬಟ್ಟೆ ಧರಿಸ್ತಾರೆ. ಅವರು ಇಂಥ ಬಟ್ಟೆ ಧರಿಸಲು ಅವರ ಅಮ್ಮ ಕಾರಣ. ಅವರ ಅಮ್ಮ ಮಗಳನ್ನು ಫ್ಯಾಷನೆಬಲ್ ಆಗಿ, ಮಾಡರ್ನ್ ಆಗಿ ಬೆಳೆಸಿದ್ದಾರೆ. ನಾನು ಬೆಳೆದಿದ್ದೇ ಹಾಗೆ ಎನ್ನುತ್ತಾರೆ ಐಶ್ವರ್ಯ.
ಮಕ್ಕಳನ್ನು ಸ್ಟ್ರಾಂಗ್ ಆಗಿ ಬೆಳೆಸಿ
ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಸ್ಟ್ರಾಂಗ್ ಆಗಿ ಬೆಳೆಸಿ ಅಂತ ಐಶ್ವರ್ಯ ಸಿಂಧೋಗಿ ಜನರಿಗೆ ಸಲಹೆ ನೀಡಿದ್ದಾರೆ. ಹೆಣ್ಮಕ್ಕಳಿಗೆ ಈ ಬಟ್ಟೆ ಹಾಕ್ಬೇಡ, ಅಲ್ಲಿ ಹೋಗ್ಬೇಡ, ಇಲ್ಲಿ ಹೋಗ್ಬೇಡ ಎನ್ನುವ ಬದಲು ಅವರನ್ನು ಸ್ಟ್ರಾಂಗ್ ಆಗಿ ಬೆಳೆಸಿ ಎಂದಿದ್ದಾರೆ.
ಬ್ಲೌಸ್ ಲೆಸ್ ಸೀರೆ ನಮ್ಮ ಸಂಸ್ಕೃತಿ
ಐಶ್ವರ್ಯ ಸಿಂಧೋಗಿಗೆ ಸೀರೆ ಅಂದ್ರೆ ತುಂಬಾ ಇಷ್ಟ. ಅವರು ಕರ್ನಾಟಕದ ಸೀರೆಗಳನ್ನು ಹೆಚ್ಚು ಇಷ್ಟಪಡ್ತಾರೆ. ಇಳಕಲ್ ಸಾರಿ, ಮೈಸೂರು ಸಿಲ್ಕ್ ಸೀರೆ ಉಡೋದು ಐಶ್ವರ್ಯ ಅವರಿಗೆ ಬಲು ಪ್ರೀತಿ. ಜನರು ಸೀರೆ ಉಟ್ಟರೂ ಕಮೆಂಟ್ ಮಾಡ್ತಾರೆ. ಸ್ಲಿವ್ ಲೆಸ್ ಬ್ಲೌಸ್, ಬ್ಲಾಕ್ ಲೆಸ್ ಬ್ಲೌಸ್ ಧರಿಸಿದ್ದೀರಿ ಅಂತಾರೆ. ಜನರು ನಮ್ಮ ಸಂಸ್ಕೃತಿ ಅರ್ಥ ಮಾಡ್ಕೊಳ್ಬೇಕು. ಬುಡಕಟ್ಟು ಜನಾಂಗದಲ್ಲಿ ಬ್ಲೌಸ್ ಇಲ್ದೆ ಸೀರೆ ಧರಿಸ್ತಾರೆ. ಅದು ಅಸಭ್ಯ ಅಲ್ಲ. ಅದು ಭಾರತದ ಸಂಸ್ಕೃತಿ ಎನ್ನುತ್ತಾರೆ ಐಶ್ವರ್ಯ ಸಿಂಧೋಗಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

