ಹನಿಮೂನ್‌ನಲ್ಲಿ 'ಕಮಲಿ' ಖ್ಯಾತಿಯ ಗೇಬ್ರಿಯೆಲಾ-ಸುಹಾಸ್ ದಂಪತಿ; ಟೈಗರ್ ಜೊತೆ ಫೋಟೋ ವೈರಲ್
ಹೊಸ ಜೀವನ ಪ್ರಾರಂಭಿಸಿರುವ ನಟಿ ಗೇಬ್ರಿಯೆಲಾ ಮತ್ತು ಸುಹಾಸ್ ಜೋಡಿ ಇದೀಗ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.

ಕಮಲಿ ಧಾರಾವಾಹಿ ಖ್ಯಾತಿಯ ಅನಿಕಾ ಪಾತ್ರಧಾರಿ ಗೇಬ್ರಿಯೆಲಾ ಮತ್ತು ಅದೇ ಧಾರಾವಾಹಿಯಲ್ಲಿ ಶಂಬು ಪಾತ್ರ ಮಾಡುತ್ತಿದ್ದ ನಟ ಸುಹಾಸ್ ಇತ್ತೀಚಿಗಷ್ಟೆ ಹಸೆಮಣೆ ಏರಿದ್ದರು.
ಹೊಸ ಜೀವನ ಪ್ರಾರಂಭಿಸಿರುವ ನಟಿ ಗೇಬ್ರಿಯೆಲಾ ಮತ್ತು ಸುಹಾಸ್ ಜೋಡಿ ಇದೀಗ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಗೇಬ್ರಿಯೆಲಾ ಮತ್ತು ಸುಹಾಸ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡಿಕೊಳ್ಳುತ್ತಿದ್ದರು. ಕಮಲಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಇವರ ನಡುವೆ ಪ್ರೀತಿ ಚಿಗುರಿದೆ.
ಮೂರು ವರ್ಷಗಳ ಪ್ರೀತಿಯ ಬಳಿಕ ಗೇಬ್ರಿಯೆಲಾ ಮತ್ತು ಸುಹಾಸ್ ಜೋಡಿ ಕುಟುಂಬಸ್ಥರ ಒಪ್ಪಿಗೆ ಪಡೆದು ಇತ್ತೀಚಿಗಷ್ಟೆ ಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಗೇಬ್ರಿಯೆಲಾ ಮದುವೆಗೆ ಸಂಬಂಧಿಕರು, ಆತ್ಮೀಯರು ಮಾತ್ರ ಹಾಜರಿದ್ದರು. ಬಳಿಕ ಸ್ನೇಹಿತರಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಆಯೋಜಿಸಿತ್ತು.
ಇದೀಗ ಮದುವೆ ಲೈಫ್ ಎಂಜಾಯ್ ಮಾಡುತ್ತಿರುವ ನಟಿ ಗೇಬ್ರಿಯೆಲ್ಲಾ ಮತ್ತು ಸುಹಾಸ್ ಜೋಡಿ ವಿದೇಶದಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಅಂದಹಾಗೆ ಈ ಜೋಡಿ ಥೈಲ್ಯಾಂಡ್‌ಗೆ ಹಾನಿಮೂನ್‌ಗೆ ಹೋಗಿದ್ದಾರೆ. ಅಲ್ಲಿಂದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ನಟಿ ಗೇಬ್ರಿಯೆಲಾ ಮತ್ತು ಸುಹಾಸ್ ದಂಪತಿ ಟೈಗರ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಅದ್ಭುತವಾದ ಅನುಭವ ಎಂದು ಹೇಳಿದ್ದಾರೆ. ಟೈಗರ್ ಬಾಲ ಹಿಡಿದು ಓಡಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಭಯ ಆಗಿಲ್ವಾ ಎಂದು ಕೇಳಿದ್ದಾರೆ.
ಥೈಲ್ಯಾಂಡ್ ಹನಿಮೂನ್ ಎಂಜಾಯ್ ಮಾಡುತ್ತಿರುವ ಗೇಬ್ರಿಯೆಲಾ ಸಾಕಷ್ಟು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಗೇಬ್ರಿಯೆಲಾ ಮತ್ತು ಸುಹಾಸ್ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ.
ಇನ್ನು ಕೆಲಸದ ವಿಚಾರಕ್ಕೆ ಬರುವುದಾದರೆ ಗೇಬ್ರಿಯೆಲಾ ನಟಿಸುತ್ತಿದ್ದ ಕಮಲಿ ಧಾರಾವಾಹಿ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಸದ್ಯ ಪತಿಯ ಜೊತೆ ಹನಿಮೂನ್ ಪ್ರವಾಸದಲ್ಲಿದ್ದಾರೆ. ಇನ್ನು ಸುಹಾಸ್ ಕಮಲಿ ಧಾರಾವಾಹಿ ಮುಗಿದ ಬಳಿಕ ಮರಳಿ ಮನಸಾಗಿದೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.