ಅಪರೂಪಕ್ಕೆ ಸೀರೆ ಹಾಕೊಂಡ್ರೂ ದೇವತೆ ತರ ಕಾಣ್ತೀರಾ ಆದರೆ ಗಂಡ ಎಲ್ಲಿ?; ದೀಪಿಕಾ ದಾಸ್ ಕಾಲೆಳೆದ ನೆಟ್ಟಿಗರು!
ಸೋಷಿಯಲ್ ಮೀಡಿಯಾದಲ್ಲಿ ಸೀರೆ ಫೋಟೋ ಅಪ್ಲೋಡ್ ಮಾಡುತ್ತಿರುವ ದೀಪಿಕಾ ದಾಸ್. ಲುಕ್ ನೋಡಿ ಶಾಕ್ ಆದ್ರೂ ಗಂಡ ಎಲ್ಲಿ ಅನ್ನೋ ಚಿಂತೆ ನೆಟ್ಟಿಗರಿಗೆ......
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಟ್ರ್ಯಾವಲ್, ಹೊಸ ಪ್ರಾಜೆಕ್ಟ್, ಜಾಹೀರಾತು, ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸುಂದರಿ ಸದ್ಯ ನಟನೆಯಿಂದ ಕೊಂಚ ದೂರ ಉಳಿದಿದ್ದಾರೆ.
ಬೆಂಗಳೂರಿನ ಸುಂದರಿ ದೀಪಿಕಾ ದಾಸ್ ಹೆಚ್ಚಾಗಿ ಮಾಡರ್ನ್ ಉಡುಪುಗಳನ್ನು ಧರಿಸುತ್ತಾರೆ ಆದರೆ ಇತ್ತೀಚಿಗೆ ಸೀರೆಯಲ್ಲಿ ಮಿಂಚಿರುವ ಫೋಟೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.
ಇದನ್ನು ನೋಡಿ ಶಾಕ್ ಆದ ನೆಟ್ಟಿಗರು ಮೆಚ್ಚುವೆ ವ್ಯಕ್ತ ಪಡಿಸುತ್ತಿದ್ದಾರೆ ಹಾಗೆ ನಿಮ್ಮ ಗಂಡ ಕಾಣಿಸುತ್ತಿಲ್ಲ ದುಬೈನಲ್ಲಿ ಇದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಸಿದ ದೀಪಿಕಾ ದಾಸ್, ಮತ್ತೆ ಸೀಸನ್ 9ರಲ್ಲಿ ರೀ ಎಂಟ್ರಿ ಕೊಟ್ಟರು. ಅದಾದ ಮೇಲೆ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು.
ದೂಧ್‌ಸಾಗರ್ ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದೀಪಿಕಾ ದಾಸ್ ಈ ಮನಸ್ಸೆ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೂ ಡ್ರೀಮ್ ಗರ್ಲ್ ಪ್ರಾಜೆಕ್ಟ್‌ನಲ್ಲಿ ಮಿಂಚಿದ್ದಾರೆ.