ಪುಟ್ಟ ಮಗಳ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ನೇಹಾ ಗೌಡ- ಸೋನು ಗೌಡ ಮಸ್ತಿ
ಕನ್ನಡ ಕಿರುತೆರೆಯ ಹಿರಿತೆರೆಯ ಅಕ್ಕ ತಂಗಿಯರಾದ ನೇಹಾ ಗೌಡ ಹಾಗೂ ಸೋನು ಗೌಡ ತಮ್ಮ ಫ್ಯಾಮಿಲಿ ಹಾಗೂ ಪುಟ್ಟ ಮಗಳ ಜೊತೆ ಕೂರ್ಗ್ ನಲ್ಲಿ ಪೂಲ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮೋಡಿ ಮಾಡಿದ ಅಕ್ಕ ತಂಗಿ ಎಂದರೆ ಅದು ನೇಹಾ ಗೌಡ ಮತ್ತು ಸೋನು ಗೌಡ (Sonu Gowda and Neha Gowda). ಇದೇ ವರ್ಷದ ಆರಂಭದಲ್ಲಿ ತಾಯಿಯಾಗಿರುವ ನೇಹಾ ಗೌಡ, ಇತ್ತಿಚೆಗಷ್ಟೇ ತಮ್ಮ ಪುಟ್ಟ ಮಗಳಿಗೆ ಶಾರದಾ ಎಂದು ಹೆಸರನ್ನಿಟ್ಟಿದ್ದರು.
ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನೇಹಾ ಹಾಗೂ ಸೋನು ಹೆಚ್ಚಾಗಿ ಫ್ಯಾಮಿಲಿ ಜೊತೆಗಿನ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇದೀಗ ಸ್ಯಾಂಡಲ್ ವುಡ್ ತಾರೆ ಸೋನು ಗೌಡ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಫ್ಯಾಮಿಲಿ ಟ್ರಿಪ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸೋನು ಗೌಡ, ನೇಹಾ ಗೌಡ, ಪತಿ ಚಂದನ್, ಹಾಗೂ ಅವರ ಸಹೋದರ ಹಾಗೂ ಅವರ ಫ್ಯಾಮಿಲಿ ಹಾಗೂ ಮುದ್ದು ಮಗಳು ಶಾರದಾ ಕೂರ್ಗ್ ಗೆ ಟೂರ್ ಹೋಗಿದ್ದಾರೆ.
ಮಡಿಕೇರಿಯ ಜನಪ್ರಿಯ ಅಯಾತನ ರೆಸಾರ್ಟ್ ನಲ್ಲಿ ಫ್ಯಾಮಿಲಿ ಸಮೇತ ಉಳಿದುಕೊಂಡಿರುವ ಸೋನು ಗೌಡ ಅಲ್ಲಿ ಜಲಪಾತ, ಸ್ವಿಮ್ಮಿಂಗ್ ಪೂಲ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಪುಟ್ಟ ಮಗಳ ಜೊತೆ ಮೊದಲ ಬಾರಿಗೆ ಟ್ರಿಪ್ ಮಾಡುತ್ತಿರುವ ನೇಹಾ ಗೌಡ, ಮಗಲನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ಇಳಿಸಿ ಮಸ್ತಿ ಮಾಡುತ್ತಿದ್ದಾರೆ.
ಅಕ್ಕ ಮತ್ತು ತಂಗಿ ಇಬ್ಬರೂ ಸೇರಿ ಪುಟಾಣಿ ಶಾರದಾಳನ್ನು ಟಯರ್ ಸಹಾಯದಿಂದ ಪೂಲ್ ನಲ್ಲಿ (swimming pool) ಬಿಟ್ಟು, ಆಕೆಯ ಜೊತೆ ತಾವೂ ಕೂಡ ಎಂಜಾಯ್ ಮಾಡ್ತಿದ್ದಾರೆ.
ಅಷ್ಟೇ ಅಲ್ಲ ಜಲಪಾತದ (Falls) ಬಳಿಯೂ ಮಗಳನ್ನು ಎತ್ತಿಕೊಂಡು, ಮುತ್ತಾಡಿಕೊಂಡಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ (photos in social media).
ಈ ಸುಂದರವಾದ ಫ್ಯಾಮಿಲಿ ಫೋಟೊ (Family photos) ನೋಡಿ ಆಭಿಮಾನಿಗಳು ಮೆಚ್ಚಿಕೊಂಡಿದ್ದು, ಹಾರ್ಟ್ ಇಮೋಜಿ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಸೋನು ಗೌಡ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಇತ್ತೀಚೆಗೆ ಅವರು ನಟಿಸಿರುವ ಸಿಂದ್ಲಿಂಗು 2 ಸಿನಿಮಾ ರಿಲೀಸ್ ಆಗಿತ್ತು, ಈ ಸಿನಿಮಾದಲ್ಲಿ ಲೂಸ್ ಮಾದ ಯೋಗಿಗೆ ನಾಯಕಿಯಾಗಿದ್ದರು.
ನೇಹಾ ಗೌಡ ಕೊನೆಯದಾಗಿ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ನಟಿಸಿದ್ದರು. ಮತ್ತೆ ಕೆಲವೊಂದು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ನೇಹಾ ಪತಿ ಚಂದನ್ ಅಂತರಪಟ ಧಾರಾವಾಹಿಯಲ್ಲಿ (Antarapata Serial) ನಾಯಕನಾಗಿ ನಟಿಸಿದ್ದರು. ಮುಂದೆ ಯಾವುದಾದರು ಸೀರಿಯಲ್ ನಲ್ಲಿ ನಟಿಸುತ್ತಾರೆಯೇ? ಅಥವಾ ಬ್ಯುಸಿನೆಸ್ ಮುಂದಿವರೆಸುತ್ತಾರ ಅನ್ನೋದು ತಿಳಿದು ಬಂದಿಲ್ಲ.