Sidlingu 2 Movie Review: ಡಬಲ್ ಮೀನಿಂಗ್ ಇಲ್ಲ, ಭಕ್ತಿಯೇ ಎಲ್ಲಾ, ಮಜಾ ಡೈಲಾಗ್‌ಗಳು
ಆರಂಭದಿಂದ ಕೊನೆಯವರೆಗೂ ಕತ್ತಿಗೆ ಬೆಲ್ಟ್ ಹಾಕಿಕೊಂಡು, ಬಾಯಲ್ಲಿ ‘ಸ್ವಾಮಿ ಪಾದಂ ದೈವ ಪಾದಂ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಗುನುಗುನಿಸುವ ಸಿದ್ಲಿಂಗುವಿಗೆ ಇಲ್ಲಿ ನಿರ್ದೇಶಕರ ದಯದಿಂದ ಅಯ್ಯಪ್ಪನ ಕೃಪೆಯಾಗಿದೆ.

ಪ್ರಿಯಾ ಕೆರ್ವಾಶೆ
‘ಸಿದ್ಲಿಂಗು 2’ ಪಕ್ಕಾ ವಿಜಯಪ್ರಸಾದ್ ಸ್ಟೈಲಿನ ಸಿನಿಮಾ. ಆದರೆ ಆರಂಭದಿಂದಲೂ ಇವರ ಸಿಗ್ನೇಚರ್ ಸ್ಟೈಲಿನಂತಿದ್ದ ಡಬ್ಬಲ್ ಮೀನಿಂಗ್ ಜೋಕ್‌ಗಳ ಅಬ್ಬರ ಇದರಲ್ಲಿ ಇಲ್ಲ. ಬದಲಿಗೆ ಭಕ್ತಿಯ ಪುಳಕ ಇದೆ. ಆರಂಭದಿಂದ ಕೊನೆಯವರೆಗೂ ಕತ್ತಿಗೆ ಬೆಲ್ಟ್ ಹಾಕಿಕೊಂಡು, ಬಾಯಲ್ಲಿ ‘ಸ್ವಾಮಿ ಪಾದಂ ದೈವ ಪಾದಂ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಗುನುಗುನಿಸುವ ಸಿದ್ಲಿಂಗುವಿಗೆ ಇಲ್ಲಿ ನಿರ್ದೇಶಕರ ದಯದಿಂದ ಅಯ್ಯಪ್ಪನ ಕೃಪೆಯಾಗಿದೆ.
ಆ ಕೃಪೆ ಸಿದ್ಲಿಂಗುವನ್ನೂ ಸಿನಿಮಾ ನೋಡುವ ಪ್ರೇಕ್ಷಕನನ್ನೂ ಕಾಪಾಡುತ್ತದೆ. ಮಜಾ ಅನಿಸುವುದು ಘಾಟಿ ರಸ್ತೆಗಳಲ್ಲಿ ‘ಮುಂದೆ ತಿರುವು ಇದೆ’ ಅಂತ ಬೋರ್ಡ್ ಇರುವಂತೆ ಸಿನಿಮಾದಲ್ಲೂ ‘ತಿರುವು’ ಅನ್ನುವ ಪ್ಲಕಾರ್ಡ್ ಬರುತ್ತದೆ. ಇಂಟರೆಸ್ಟಿಂಗ್ ಅನಿಸುತ್ತದೆ. ಆದರೆ ಈ ಫೀಲು ತಿರುವಿನ ಸನ್ನಿವೇಶದಲ್ಲೂ ಇರಬೇಕಿತ್ತು ಎಂದು ಅತಿಯಾಸೆ ಪಡುವಂತಿಲ್ಲ. ಹೆಣ್ಣುಮಕ್ಕಳನ್ನು ದೈವತ್ವಕ್ಕೇರಿಸುವ ಪ್ರಯತ್ನ ಸಿನಿಮಾದಲ್ಲಿ ಕೊಂಚ ಅತಿ ಭಾವುಕ ಅನಿಸುತ್ತದೆ.
ಸಿದ್ಲಿಂಗು 2
ತಾರಾಗಣ: ಯೋಗೇಶ್, ಸೋನು ಗೌಡ, ಮಂಜುನಾಥ್ ಹೆಗ್ಡೆ, ಬಿ ಸುರೇಶ್, ಸೀತಾ ಕೋಟೆ
ನಿರ್ದೇಶನ: ವಿಜಯ ಪ್ರಸಾದ್
ರೇಟಿಂಗ್: 3
ಹಾಗೆಂದು ಪಕ್ಕಾ ವಿಜಯಪ್ರಸಾದ್ ಸ್ಟೈಲಿನ ಮಜಾ ಡೈಲಾಗ್‌ಗಳು ಮನರಂಜನೆಯನ್ನಂತೂ ನೀಡುತ್ತವೆ. ಸಿದ್ಲಿಂಗು ಭಾಗ 1ರ ದೃಶ್ಯಗಳು ರೆಫರೆನ್ಸ್‌ನಂತೆ ಅಲ್ಲಲ್ಲಿ ಬರುವಾಗ, ಆ ಭಾಗ ಎಷ್ಟು ಹರಿತವಾಗಿತ್ತಲ್ಲಾ ಅನಿಸುತ್ತದೆ. ಯೋಗಿ ಬಹಳ ಕೂಲ್ ಆಗಿ ಪಾತ್ರ ಹ್ಯಾಂಡಲ್ ಮಾಡುವ ರೀತಿಯೇ ಚಂದ. ಮಂಜುನಾಥ್ ಹೆಗ್ಡೆ ನಟನೆಗೆ ಫುಲ್ ಮಾರ್ಕ್ಸ್. ಅನೂಪ್ ಸೀಳಿನ್ ಸಂಗೀತ ಜೋಶ್ ನೀಡುತ್ತದೆ.