- Home
- Entertainment
- TV Talk
- ರಿಯಲ್ ಆಗಿ, ಜೊತೆಯಾಗಿ ಹೊಸ ಜರ್ನಿ ಆರಂಭಿಸಿದ Neenadhe Naa Serial ದಿಲೀಪ್ ಶೆಟ್ಟಿ, ರಮಿಕಾ ಶಿವು; ವೀಕ್ಷಕರಿಂದ ಶುಭಾಶಯ
ರಿಯಲ್ ಆಗಿ, ಜೊತೆಯಾಗಿ ಹೊಸ ಜರ್ನಿ ಆರಂಭಿಸಿದ Neenadhe Naa Serial ದಿಲೀಪ್ ಶೆಟ್ಟಿ, ರಮಿಕಾ ಶಿವು; ವೀಕ್ಷಕರಿಂದ ಶುಭಾಶಯ
Actor Dileep Shetty And Ramika Shivu: ಈಗಾಗಲೇ ಕನ್ನಡದ ಕಿರುತೆರೆ, ಹಿರಿತೆರೆ ಕಲಾವಿದರು ನಟನೆ ಜೊತೆಗೆ ಬೇರೆ ಬ್ಯುಸಿನೆಸ್‌ನಲ್ಲಿಯೂ ಬ್ಯುಸಿ ಆಗಿದ್ದಾರೆ. ಈಗ ‘ನೀನಾದೆ ನಾ’ ಧಾರಾವಾಹಿ ಖ್ಯಾತಿಯ ಜೋಡಿ ಹೊಸ ಜರ್ನಿ ಆರಂಭಿಸಿದೆ.

ಉತ್ತಮ ಸ್ನೇಹಿತರು
ಹೌದು, ‘ನೀನಾದೆ ನಾ’ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸಿದ್ದ ದಿಲೀಪ್ ಶೆಟ್ಟಿ, ರಮಿಕಾ ಶಿವು ಅವರು ಉತ್ತಮ ಸ್ನೇಹಿತರು. ಈಗ ಇವರಿಬ್ಬರು ಹೊಸ ಜರ್ನಿಗೆ ಕಾಲಿಟ್ಟಿದ್ದಾರೆ.
ಹೊಸ ಜರ್ನಿ ಆರಂಭ
“ಇದು ಆರಂಭಕ್ಕಿಂತ ಎಮೋಶನ್ ಎನ್ನಬಹುದು. ನನ್ನಲ್ಲಿ ನಂಬಿಕೆ ಇಟ್ಟಿರುವ, ಧೈರ್ಯವನ್ನು ನೀಡಿರುವ ಎಲ್ಲರಿಗೂ ಧನ್ಯವಾದಗಳು. ನನ್ನ ಹೊಸ ಜರ್ನಿ ಆರಂಭವಾಗಿದೆ” ಎಂದು ರಮಿಕಾ ಶಿವು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪ್ರೀತಿ ಮಾಡುತ್ತಿದ್ದಾರಾ?
‘ನೀನಾದೆ ನಾ’ ಧಾರಾವಾಹಿಯಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸಿರುವ ದಿಲೀಪ್ ಶೆಟ್ಟಿ, ರಮಿಕಾ ಶಿವು ಅವರು ರಿಯಲ್ ಆಗಿಯೂ ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನೆ ಬಂದಾಗ ಇವರಿಬ್ಬರು ನಿಖರವಾದ ಉತ್ತರವನ್ನು ನೀಡಿರಲಿಲ್ಲ.
ಬ್ಯುಸಿನೆಸ್ ಆರಂಭ
ದಿಲೀಪ್ ಶೆಟ್ಟಿ, ರಮಿಕಾ ಶಿವು ಅವರು ಇಬ್ಬರೂ ಜೊತೆಯಾಗಿ ಸೇರಿ ಹೊಸ ಬ್ಯುಸಿನೆಸ್ ಕೂಡ ಆರಂಭಿಸಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಹೋಟೆಲ್ ಆರಂಭ
ದಿಲೀಪ್ ಶೆಟ್ಟಿ, ರಮಿಕಾ ಶಿವು ಅವರು ದೊಡ್ಮನೆ ಊಟ ಎಂಬ ಹೋಟೆಲ್ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಈ ಹೋಟೆಲ್ ಇದೆ.
ವೀಕ್ಷಕರಿಗೆ ಶುಭಾಶಯ
ರಮಿಕಾ ಶಿವು ಹಾಗೂ ದಿಲೀಪ್ ಶೆಟ್ಟಿ ಅವರ ಹೊಸ ಕೆಲಸಕ್ಕೆ ಅನೇಕರು ಶುಭಾಶಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

