MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕೂಗಾಡಿದ್ದ ಮಾವ ತಣ್ಣಗಾದ, ಕ್ಷಮೆ ಕೇಳಿದ ನಂದನಿಗೆ ಮೀನಾ ಹೇಳಿದ್ದೇನು?

ಕೂಗಾಡಿದ್ದ ಮಾವ ತಣ್ಣಗಾದ, ಕ್ಷಮೆ ಕೇಳಿದ ನಂದನಿಗೆ ಮೀನಾ ಹೇಳಿದ್ದೇನು?

Nandagokula Serial : ಇನ್ನೇನು ನಂದಗೋಕುಲದಲ್ಲಿ ಮಹಾ ಸ್ಫೋಟವಾಗುತ್ತೆ ಅಂದ್ಕೊಂಡು ಖುರ್ಚಿ ತುದಿಗೆ ಬಂದು ಕುಳಿತಿದ್ದವರಿಗೆ ಶಾಕ್ ಆಗಿದೆ. ಕೇಶವ ಅಪ್ಪನ ಬಳಿ ಪಾಲು ಕೇಳ್ತಾನೆ, ಬೇರೆ ಮನೆ ಮಾಡ್ತಾನೆ ಅಂದ್ಕೊಂಡಿದ್ದ ವೀಕ್ಷಕರು ಈಗ ಪ್ರೋಮೋ ನೋಡಿ, ಟ್ವಿಸ್ಟ್ ಇಷ್ಟಪಟ್ಟಿದ್ದಾರೆ. 

2 Min read
Author : Roopa Hegde
Published : Apr 21 2026, 03:33 PM IST
Share this Photo Gallery
  • FB
  • TW
  • Linkdin
  • Whatsapp
15
ನಂದನಿಗೆ ಬುದ್ಧಿ ಬಂತು
Image Credit : Asianet News

ನಂದನಿಗೆ ಬುದ್ಧಿ ಬಂತು

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ನಂದಗೋಕುಲ ಸೀರಿಯಲ್ ನಲ್ಲಿ ಗಲಾಟೆ ಶುರುವಾಗಿತ್ತು. ಹೊಸ ಸೊಸೆ ಪ್ರಿಯಾ ಬರ್ತಿದ್ದಂತೆ ನಂದನ ಮನೆ ವಾತಾವರಣ ಬದಲಾಗಿತ್ತು. ಪ್ರಿಯಾ ಮಾತನ್ನು ಕಣ್ಮುಚ್ಚಿ ನಂಬಿದ್ದ ನಂದನ ಸ್ವಭಾವ ಬದಲಾಗಿತ್ತು. ಹಿತ್ತಾಳೆ ಕಿವಿ ನಂದ, ಮುದ್ದಿನ ಸೊಸೆ ಮೀನಾಳನ್ನು ತಪ್ಪಾಗಿ ತಿಳಿದುಕೊಂಡಿದ್ದ. ಮೀನಾ ಹಾಗೂ ಕಿರಿ ಸೊಸೆ ಅಮೂಲ್ಯಾಗೆ ಬೈದಿದ್ದ. ಆದ್ರೀಗ ನಂದನಲ್ಲಿ ಬದಲಾವಣೆ ಕಾಣ್ತಿದೆ.

25
ಅಂಗಡಿಯಲ್ಲಿ ಕೇಶವನ ಕಿರುಚಾಟ
Image Credit : Asianet News

ಅಂಗಡಿಯಲ್ಲಿ ಕೇಶವನ ಕಿರುಚಾಟ

ಮೀನಾ ಬದಲಾಗಿದ್ದಾಳೆ ಅಂತ ಸಂಪೂರ್ಣವಾಗಿ ನಂಬಿದ್ದ ನಂದ ಅಂಗಡಿಯಲ್ಲೂ ಸೊಸೆ ಬಗ್ಗೆ ಮಾತನಾಡಿದ್ದ. ಆದ್ರೆ ಇದು ಮೀನಾ ಗಂಡ ಕೇಶವನಿಗೆ ಇಷ್ಟವಾಗಿರಲಿಲ್ಲ. ತಾಳ್ಮೆ ಕಳೆದುಕೊಂಡು ಅಪ್ಪನ ಮುಂದೆ ಕೂಗಾಡಿದ್ದ. ಅಲ್ದೆ ಬೇರೆ ಮನೆ ಮಾಡುವ ಆಲೋಚನೆ ಮಾಡಿದ್ದ. ಇದನ್ನು ನೋಡಿದ ವೀಕ್ಷಕರು, ನಂದನಿಗೆ ಬುದ್ಧಿ ಬರುತ್ತೆ, ಆತನ ಮನೆ ಒಡೆದು ಹೋಳಾಗುತ್ತೆ, ಪಾಪ ಏನೂ ಮಾಡದ ಮೀನಾ ಶಿಕ್ಷೆ ಅನುಭವಿಸ್ತಿದ್ದಾಳೆ ಅಂತ ನಂದನಿಗೆ ಹಿಡಿಶಾಪ ಹಾಕಿದ್ದರು.

Related Articles

Related image1
Bigg Bossನಿಂದ ಚೀಪ್​ ಆಗ್ಬಿಟ್ಟೆ, ಕಡಿಮೆ ರೇಟ್​ಗೆ ಕರೀತಾರೆ ಎಂದ Dog Satish, ಗಿಲ್ಲಿ ಸರ ವಾಪಸ್​ಗೆ ಲೇವಡಿ
Related image2
Annayya ಮಹಾತಿರುವು! ಶಿವಣ್ಣದ ಅವತಾರ ಕಂಡು ಬೆಚ್ಚಿ ಬಿದ್ದ ಪಾರು… ಸೀನಾಗೆ ಇನ್ನು ಉಳಿಗಾಲವಿಲ್ಲ!
35
ಮಾವನ ಬೈಗುಳ ಸುಪ್ರಭಾತ
Image Credit : Asianet News

ಮಾವನ ಬೈಗುಳ ಸುಪ್ರಭಾತ

ಇಂದಿನ ಪ್ರೋಮೋದಲ್ಲಿ ನಂದ, ಸೊಸೆ ಮೀನಾ ಹಾಗೂ ಅಮೂಲ್ಯ ಕ್ಷಮೆ ಕೇಳಿದ್ದಾನೆ. ನನ್ನನ್ನು ಕ್ಷಮಿಸಿ, ನಾನು ನಿಮಗೆ ಆ ರೀತಿ ಬೈಬಾರದಿತ್ತು ಎಂದಿದ್ದಾನೆ. ಇದನ್ನು ಕೇಳಿದ ಮೀನಾ ತಮಾಷೆಯಾಗಿ ಉತ್ತರ ನೀಡಿದ್ದಾಳೆ. ನಾನು ಬೈದಿದ್ದು ಬೇಜಾರಾಯ್ತಾ ಅಂತ ಮಾವ ಕೇಳಿದ್ರೆ, ಬಿಡಿ ಮಾವ, ನೀವು ಬಯ್ಯೋದು ದಿನ ಬೆಳಿಗ್ಗೆ ಎದ್ದು ಸುಪ್ರಭಾತ ಕೇಳ್ತಂಗೆ. ಮತ್ತೆ ಸುಪ್ರಭಾತ ಯಾವಾಗ ಕೇಳ್ತೀವೋ ಅಂತ ಯೋಚ್ನೆ ಮಾಡ್ತಾ ಇದ್ವಿ ಅಂತ ಮೀನಾ ಹೇಳಿದ್ದಾಳೆ. ಆಕೆ ಮಾತು ಕೇಳಿ ನಂದ ಮನಸ್ಪೂರ್ವಕವಾಗಿ ನಕ್ಕಿದ್ದಾನೆ.

45
ಮಾವನಿಗೆ ಅಪ್ಪನ ಸ್ಥಾನ
Image Credit : Asianet News

ಮಾವನಿಗೆ ಅಪ್ಪನ ಸ್ಥಾನ

ಇನ್ನು ಅಮೂಲ್ಯ, ಮಾವನಿಗೆ ಅಪ್ಪನ ಸ್ಥಾನ ನೀಡಿದ್ದಾಳೆ. ಮನೆಯಲ್ಲಿ ಅಪ್ಪ ಬೈಯ್ಯೋದು ಸಾಮಾನ್ಯ. ತಪ್ಪು ಮಾಡಿದೋರಿಗೆ ಅಪ್ಪ ಬೈದು ಬುದ್ಧಿ ಹೇಳ್ತಾರೆ. ನೀವೂ ನಮಗೆ ಅಪ್ಪನಂತೆ ಅಂತ ಅಮೂಲ್ಯ ಹೇಳ್ತಿದ್ದಂತೆ ನಂದ ಭಾವುಕನಾಗಿದ್ದಾನೆ.

55
ನಂದನ ಬದಲಾವಣೆ ಮೆಚ್ಚಿನ ವೀಕ್ಷಕರು
Image Credit : Asianet News

ನಂದನ ಬದಲಾವಣೆ ಮೆಚ್ಚಿನ ವೀಕ್ಷಕರು

ನಂದನ ಈ ಬದಲಾವಣೆ ವೀಕ್ಷಕರಿಗೆ ಇಷ್ಟವಾಗಿದೆ. ಹನುಮಂತಣ್ಣನಿಂದ ಎಲ್ಲ ಆಗಿದೆ ಅಂತ ವೀಕ್ಷಕರು ಹೇಳ್ತಿದ್ದಾರೆ. ಹನುಮಂತಣ್ಣ ನಂದನಿಗೆ ಬುದ್ಧಿ ಹೇಳಿದ್ದಾರೆ. ಹನುಮಂತಣ್ಣ ಹೇಳಿದ್ದನ್ನು ನಂದ ಕೇಳ್ತಾರೆ ಕೂಡ. ಮಾವ- ಸೊಸೆಯಂದಿರ ಈ ಸೀನ್ ನೋಡಲು ಖುಷಿಯಾಗ್ತಿದೆ. ನಂದ ಹೀಗೆ ಬದಲಾದ್ರೆ ಒಳ್ಳೆಯದು ಅಂತ ಕಮೆಂಟ್ ಮಾಡಿದ್ದಾರೆ. ಹಾಗೇ ಎಲ್ಲರ ಕಣ್ಣು ಪ್ರಿಯಾ ಮೇಲೆ ಬಿದ್ದಿದೆ. ಈ ಪ್ರಿಯಾಗೆ ಹೊಟ್ಟೆ ಉರಿತಿದೆ. ಯಾವಾಗ ಮತ್ತೆ ಮಾವನ ಮನಸ್ಸು ಬದಲಿಸ್ತಾಳೆ ನೋಡ್ಬೇಕು ಅಂತ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಕಲರ್ಸ್ ಕನ್ನಡ
ನಂದಗೋಕುಲ

Latest Videos
Recommended Stories
Recommended image1
Annayya ಮಹಾತಿರುವು! ಶಿವಣ್ಣದ ಅವತಾರ ಕಂಡು ಬೆಚ್ಚಿ ಬಿದ್ದ ಪಾರು… ಸೀನಾಗೆ ಇನ್ನು ಉಳಿಗಾಲವಿಲ್ಲ!
Recommended image2
Bigg Bossನಿಂದ ಚೀಪ್​ ಆಗ್ಬಿಟ್ಟೆ, ಕಡಿಮೆ ರೇಟ್​ಗೆ ಕರೀತಾರೆ ಎಂದ Dog Satish, ಗಿಲ್ಲಿ ಸರ ವಾಪಸ್​ಗೆ ಲೇವಡಿ
Recommended image3
Bigg Bossಗೆ ರಿಷಾ ಗೌಡ ಹೋಗಿದ್ಯಾಕೆ? ಬಹುದೊಡ್ಡ ಗುಟ್ಟು ಈಗ ರಿವೀಲ್​ ಮಾಡಿದ ನಟಿ
Related Stories
Recommended image1
Bigg Bossನಿಂದ ಚೀಪ್​ ಆಗ್ಬಿಟ್ಟೆ, ಕಡಿಮೆ ರೇಟ್​ಗೆ ಕರೀತಾರೆ ಎಂದ Dog Satish, ಗಿಲ್ಲಿ ಸರ ವಾಪಸ್​ಗೆ ಲೇವಡಿ
Recommended image2
Annayya ಮಹಾತಿರುವು! ಶಿವಣ್ಣದ ಅವತಾರ ಕಂಡು ಬೆಚ್ಚಿ ಬಿದ್ದ ಪಾರು… ಸೀನಾಗೆ ಇನ್ನು ಉಳಿಗಾಲವಿಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved