ಕನ್ನಡಿಗರು ತಲೆದೂಗುತ್ತಿರುವ ‘ತುಳಸಿ’ ಆಲ್ಬಂ ಹಾಡಿನ ಗಾಯಕ ಇವರೇ ನೋಡಿ
ವಯಸ್ಸು 20ರ ಆಸು ಪಾಸು, ಆದರೆ ಇವರು ಹಾಡಲು ಕುಳಿತರೆ, ಮ್ಯೂಸಿಕ್ ಡೈರೆಕ್ಷನ್ ಗೆ ನಿಂತರೆ, ಕಲ್ಲು ಕೂಡ ಇವರ ಗಾನಕ್ಕೆ ಸೋಲಬೇಕು ಅಂತಹ ಅದ್ಭುತ ಪ್ರತಿಭೆ ಸುಮೇಧ್ ಕೆ. ಯಾರಿವರು ಗೊತ್ತಾ? ಸದ್ಯ ತುಳಸಿ ಆಲ್ಬಂ ಹಾಡಿನ ಮೂಲಕ ಕನ್ನಡಿಗರು ತಲೆದೂಗುವಂತೆ ಮಾಡಿದ ಯುವಕ ಇವರೇ.

ತುಳಸಿ ಆಲ್ಬಂ ಹಾಡು
ಸದ್ಯ ಯಾವುದೇ ಸೋಶಿಯಲ್ ಮೀಡಿಯಾ ತೆರೆದರೆ ಸಾಕು ಕೇಳಿ ಬರುತ್ತಿರುವ ಹಾಡು ಅಂದ್ರೆ ಅದು ‘ತುಳಸಿ’ ಆಲ್ಬಂ ಸಾಂಗ್. ಆ ಗಾಯನ, ಆ ಮ್ಯೂಸಿಕ್ ಕಂಪೋಸಿಂಗ್, ಪಾತ್ರಧಾರಿಗಳು, ಅಭಿನಯ, ಸಿನಿಮಾಟೋಗ್ರಫಿ ಎಲ್ಲವೂ ಅದ್ಭುತವಾಗಿ ಬಂದಿದ್ದು, ಕನ್ನಡಿಗರು ಹಾಡಿಗೆ ತಲೆದೂಗುತ್ತಿದ್ದಾರೆ. ತಮ್ಮ ಹಾಡಿನ ಮೂಲಕ ಗಮನ ಸೆಳೆಯುತ್ತಿರುವ ಗಾಯಕ ಯಾರು ಗೊತ್ತಾ?
ಸುಮೇಧ್ ಕೆ
‘ತುಳಸಿ’ ಹಾಡನ್ನು ಅದ್ಭುತವಾಗಿ ಹಾಡಿ, ಅದಕ್ಕಿಂತಲೂ ಸುಂದರವಾಗಿ ಮ್ಯೂಸಿಕ್ ಕಂಪೋಸ್ ಮಾಡಿರುವ ಕಲಾವಿದ ಸುಮೇಧ್ ಕೆ. ಸುಮೇಧ್ ಕುರಿತು ಈಗಾಗಲೇ ನಿಮಗೆ ಗೊತ್ತೆ ಇರಬಹುದು. ಇವರು ಬೇರ್ಯಾರು ಅಲ್ಲ, ‘ಸು ಫ್ರಮ್ ಸೋ’ ಸಿನಿಮಾ ಸಂಗೀತದ ಮೂಲಕ ಮೋಡಿ ಮಾಡಿದ ಯುವಕ.
ಸಂಗೀತ ನಿರ್ದೇಶಕ ಸುಮೇಧ್
ಸುಮೇಧ್ ವಯಸ್ಸು 20ರ ಆಸುಪಾಸು ಅಷ್ಟೇ. ಆದರೆ ಬಾಲ್ಯದಲ್ಲಿಯೇ ಸಂಗೀತದೆಡೆ ಅಪಾರ ಒಲವು ಇವರಿಗೆ ಅದೇ ಒಲವು, ಸಂಗೀತದ ಪ್ರೀತಿ ಇದೀಗ 21ನೇ ವಯಸ್ಸಿನಲ್ಲೇ ಜನ ಹುಚ್ಚೆದ್ದು ಕುಣಿಯುವಂತಹ, ಜನರು ತಲೆದೂಗುವಂತಹ, ತಮ್ಮನ್ನೆ ತಾವು ಮರೆಯುವಂತಹ ಹಾಡಲು ನೀಡಲು ಸಾಧ್ಯವಾಗಿಸಿದೆ.
ಆಲ್ಬಂ ಹಾಡುಗಳ ಸರದಾರ ಸುಮೇಧ್
ಪುರಂದರ ದಾಸರ ಕೀರ್ತನೆಗಳಲ್ಲಿ ಒಂದಾದ ‘ತುಳಸಿ’ ಆಲ್ಬಂ ಹಾಡನ್ನು ಹಾಡಿರುವ ಸುಮೇಧ್ ಈವರೆಗೆ ಹಲವಾರು ಆಲ್ಬಂ ಹಾಡುಗಳನ್ನು ಹಾಡಿದ್ದಾರೆ. ಸುಮೇಧ್ ಅವರು ಈ ಮೊದಲು ‘ಮಾಯೆ’, ‘ತಾವರೆ’, ‘ಕರ್ಮ’ ಹಾಡುಗಳನ್ನು ಮಾಡಿದ್ದರು. ತುಳಸಿ ಹಾಡಿನ ಯಶಸ್ಸಿನಿಂದಾಗಿ ಉಳಿದ ಆಲ್ಬಂ ಹಾಡುಗಳು ಸಹ ಇದೀಗ ಜನಪ್ರಿಯತೆ ಪಡೆಯುತ್ತಿವೆ.
ಸು ಫ್ರಮ್ ಸೋ ಸಿನಿಮಾ ಹಾಡುಗಳು
ಸುಮೇಧ್ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿರುವ ಕನ್ನಡ ಸಿನಿಮಾ ಅಂದ್ರೆ ಜೆಪಿ ತುಮಿನಾಡು ಅವರ ‘ಸು ಫ್ರಮ್ ಸೋ’. ಈ ಸಿನಿಮಾದ ಡ್ಯಾನ್ಸ್ ಆಂಥೆಮ್ ಮತ್ತು ಹೂ ಅರಳುತಿದೆ ಹಾಡು, ಎರಡು ವಿಭಿನ್ನವಾಗಿದ್ದೂ, ಎರಡೂ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಕರಿಯರ್ ಬಗ್ಗೆ ಸುಮೇಧ್ ಹೇಳೋದೇನು?
ಸಂಗೀತ ಸಂಯೋಜಕನಾಗಿ ಮೊದಲ ಸಂಬಳವನ್ನು ಅವರು ತನ್ನ ಸಂಗೀತದ ಮೇಲೆ ಮರು ಹೂಡಿಕೆ ಮಾಡಲು ಹೆಚ್ಚಿನ ಹಣವನ್ನು ಬಳಸಿದ್ದರಂತೆ. ನಾನು ಈಗಾಗಲೇ ಸಾಧಿಸಿದ್ದನ್ನು ಸುಧಾರಿಸಬೇಕಾಗಿದೆ, ಆದ್ದರಿಂದ ಅದನ್ನು ಮಾಡಲು ನನಗೆ ಸಂಪನ್ಮೂಲಗಳು ಬೇಕಾಗುತ್ತವೆ. ಹಾಗಾಗಿ ಸಂಗೀತ ಉಪಕರಣಗಳಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಹೇಳುತ್ತಾರೆ ಸುಮೇಧ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

