- Home
- Entertainment
- TV Talk
- ಅತ್ಯಧಿಕ ಹಣದ ಆಫರ್ ಕೊಟ್ರೂ ಯುವತಿಯರ 'ಡ್ರೀಮ್ ಬಾಯ್' ಮುಕೇಶ್ ಗೌಡ Bigg Bossಗೆ ಹೋಗದ ಕಾರಣ ರಿವೀಲ್
ಅತ್ಯಧಿಕ ಹಣದ ಆಫರ್ ಕೊಟ್ರೂ ಯುವತಿಯರ 'ಡ್ರೀಮ್ ಬಾಯ್' ಮುಕೇಶ್ ಗೌಡ Bigg Bossಗೆ ಹೋಗದ ಕಾರಣ ರಿವೀಲ್
ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ನಟ ಮುಕೇಶ್ ಗೌಡ ಅವರಿಗೆ ಕನ್ನಡ ಮತ್ತು ತೆಲುಗು ಬಿಗ್‌ಬಾಸ್‌ನಿಂದ ಆಫರ್ ಬಂದಿತ್ತು. ಅಧಿಕ ಸಂಭಾವನೆ ನೀಡಿದರೂ, ಆಟದ ಪರಿಕಲ್ಪನೆ ಮತ್ತು ಗೆಲ್ಲುವ ತಂತ್ರ ಅರ್ಥವಾಗದ ಕಾರಣ ಅವರು ಈ ಆಫರ್‌ಗಳನ್ನು ತಿರಸ್ಕರಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಬಿಗ್ಬಾಸ್ ಕನಸು
ಬಿಗ್ಬಾಸ್ಗೆ (Bigg Boss) ಜೀವನದಲ್ಲಿ ಒಮ್ಮೆಯಾದರೂ ಹೋಗುವ ಹಂಬಲ ಇರುವ ಜನರು ಲಕ್ಷಾಂತರ ಮಂದಿ. ಆದರೆ ಇದಕ್ಕೆ ಛಾನ್ಸ್ ಸಿಗುವುದು ಸೆಲೆಬ್ರಿಟಿಗಳಿಗೆ ಮಾತ್ರ. ಹಾಗೆಂದು ಎಲ್ಲ ನಟ-ನಟಿಯರಿಗೂ ಈ ಛಾನ್ಸ್ ಸಿಗುವುದಿಲ್ಲ. ಅವರಲ್ಲಿಯೂ ಹಲವರು ಇದಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ.
ಯುವತಿಯರ ಡ್ರೀಮ್ ಬಾಯ್
ಆದರೆ ಅತ್ಯಧಿಕ ಸಂಭಾವನೆ ಕೊಟ್ಟರೂ, ಬಿಗ್ಬಾಸ್ಗೆ ಹೋಗುವುದಿಲ್ಲ ಎಂದು ಹೇಳಿರುವವರು ಕೆಲವೇ ಜನರಿದ್ದಾರೆ. ಅವರಲ್ಲಿ ಒಬ್ಬರು ಸ್ಯಾಂಡಲ್ವುಡ್ ಹಾಗೂ ಕಿರುತೆರೆ ನಟ ಮುಕೇಶ್ ಗೌಡ (Mukesh Gowda). ಯುವತಿಯರ ಡ್ರೀಮ್ ಬಾಯ್ ಎಂದೇ ಫೇಮಸ್ ಆಗಿರೋ ಮುಕೇಶ್ ಗೌಡ ಅವರು, ತೆಲಗು ಮತ್ತು ಕನ್ನಡದ ಕಿರುತೆರೆ ಮತ್ತು ಸಿನಿಮಾದಲ್ಲಿ ಸಕ್ರಿಯರಾಗಿರುವ ಮುಕೇಶ್ ಅವರಿಗೆ ಎರಡೂ ಭಾಷೆಗಳ ಬಿಗ್ಬಾಸ್ನಲ್ಲಿ ಆಫರ್ ಬಂದರೂ ರಿಜೆಕ್ಟ್ ಮಾಡಿದ್ದಾರೆ.
ಸಿನಿಮಾದಿಂದ ಫೇಮಸ್
ಅದಕ್ಕೆ ಈಗ ಅವರು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಚಾಕಲೇಟ್ ಬಾಯ್ ಎಂದೇ ಫೇಮಸ್ ಆಗಿರೋ ಮುಕೇಶ್ ಅವರು, 'ತೀರ್ಥರೂಪ ತಂದೆಯವರಿಗೆ ' ಚಿತ್ರದ ಮೂಲಕ ಫೇಮಸ್ ಆದವರು. ಇದಕ್ಕೂ ಮುನ್ನ ಅವರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಹೊಂಗನಸು ' ಎಂಬ ತೆಲುಗು ರಿಮೇಕ್ನಲ್ಲಿ ನಟಿಸಿದ್ದಾರೆ.
3 ಲಕ್ಷ ಫಾಲೋವರ್ಸ್
ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಇವರು, ಇನ್ಸ್ಟಾಗ್ರಾಂನಲ್ಲಿ ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಹುಡುಗರ ಡ್ರೀಮ್ ಬಾಯ್ ಕೂಡ ಇವರು. ಇದೇ ಕಾರಣಕ್ಕೆ ಇವರಿಗೆ ಬಿಗ್ಬಾಸ್ನಲ್ಲಿ ಆಫರ್ ನೀಡಲಾಗಿತ್ತು. ಅದರಲ್ಲಿಯೂ ತೆಲುಗುವಿನಲ್ಲಿ ಎಲ್ಲರಿಗಿಂತಲೂ ಹೆಚ್ಚು ಹಣ ಆಫರ್ ಮಾಡಲಾಗಿತ್ತಂತೆ. ಕನ್ನಡದ ಈ ಬಾರಿಯ Bigg Boss 12ನಲ್ಲಿಯೂ ಇವರಿಗೆ ಆಫರ್ ಬಂದಿತ್ತು.
ಹೋಗದ ಕಾರಣ
ನನಗೆ ಈ ಹಿಂದೆಯೂ ಆಫರ್ ಬಂದಿತ್ತು. ಆಗಲೂ ಬಿಜಿ ಇದ್ದೆ. ಬಿಗ್ಬಾಸ್ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟು ಇದೆ. ಅದನ್ನು ಹೇಗೆ ಆಡಬೇಕು, ಅದರ ಕಾನ್ಸೆಪ್ಟ್ ಏನು ಎನ್ನೋದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಗೆಲ್ಲುವುದು ಸುಲಭವಲ್ಲ. ಸುಮ್ಮನಿದ್ದರೂ ಗೆಲ್ಲುತ್ತಾರೆ, ಜಗಳವಾಡಿದರೂ ಗೆಲ್ಲುತ್ತಾರೆ... ಒಮ್ಮೊಮ್ಮೆ ಎಲ್ಲಾ ಮಾಡಿದ್ದರೂ ಗೆಲ್ಲುವುದಿಲ್ಲ. ಅದಕ್ಕಾಗಿ ನನಗೆ ಅದು ಸರಿಯಾಗಿ ಅರ್ಥವಾಗದ ಕಾರಣ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

