- Home
- Entertainment
- TV Talk
- ಲಕ್ಷಾಂತರ ಮಂದಿ ಹೃದಯ ಕದ್ದ ಸೀತಾರಾಮ 'ಸಿಹಿ' ಇವಳೇನಾ? ಫ್ಯಾನ್ಸ್ ಗರಂ- ತಿರುಗಿಬಿದ್ದದ್ದು ಯಾಕೆ?
ಲಕ್ಷಾಂತರ ಮಂದಿ ಹೃದಯ ಕದ್ದ ಸೀತಾರಾಮ 'ಸಿಹಿ' ಇವಳೇನಾ? ಫ್ಯಾನ್ಸ್ ಗರಂ- ತಿರುಗಿಬಿದ್ದದ್ದು ಯಾಕೆ?
ಸೀತಾರಾಮ ಸೀರಿಯಲ್ ಮೂಲಕ ಮನೆಮಾತಾದ ಬಾಲ ನಟಿ ರಿತು ಸಿಂಗ್ (ಸಿಹಿ), ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳಿಂದ ವಿವಾದಕ್ಕೆ ಕಾರಣವಾಗಿದ್ದಾಳೆ. ತನಗೆ ಸಿನಿಮಾ ನೋಡಲು ಸಮಯವಿಲ್ಲ ಎಂದು ಗತ್ತಿನಿಂದ ಉತ್ತರಿಸಿದ್ದು, ಆಕೆಯ ವರ್ತನೆ ಅತಿಯಾಯಿತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿಹಿ ಎಂದರೆ ಸಾಕು
ಸಿಹಿ ಎಂದರೆ ಸಾಕು, ಸೀರಿಯಲ್ ವೀಕ್ಷಕರ ಕಣ್ಮುಂದೆ ಬರುವುದು ಸೀತಾರಾಮ ಸೀರಿಯಲ್ನ ಪುಟಾಣಿ ರಿತು ಸಿಂಗ್ (Seeta Rama Serial Sihi). ಮೂರ್ನಾಲ್ಕು ವರ್ಷಗಳ ಈ ಪುಟಾಣಿ ತನ್ನ ವಯಸ್ಸಿಗೂ ಮೀರಿ ತೋರಿದ ಪ್ರತಿಭೆ, ಆಕೆಯ ನಟನೆಯ ಪರಿ ಲಕ್ಷಾಂತರ ಮಂದಿ ವೀಕ್ಷಕರ ಮನಸ್ಸನ್ನು ಗೆದ್ದಿದೆ.
ಎಲ್ಲಾ ಪಾತ್ರಕ್ಕೂ ಸೈ
ಅಳು, ನಗು, ಖುಷಿ, ದುಃಖ ಎಲ್ಲಾ ಪಾತ್ರಗಳನ್ನೂ ತನ್ನದೇ ಆದ ಶೈಲಿಯಲ್ಲಿ ಅದ್ಭುತವಾಗಿ ನಟಿಸಿ ಎಲ್ಲರಿಂದಲೂ ಭೇಷ್ ಎನ್ನಿಸಿಕೊಂಡ ನೇಪಾಳದ ಬಾಲೆ ಈಕೆ. ಕನ್ನಡವನ್ನು ಅಷ್ಟೇ ಸ್ವಚ್ಛವಾಗಿ ಕಲಿತು, ಅದರಿಂದಲೇ ಫೇಮಸ್ ಆಗಿ, ಹೋದಲ್ಲಿ ಬಂದಲ್ಲಿ ಈ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸೆಲೆಬ್ರಿಟಿ ಪಟ್ಟ ಕಟ್ಟಿಕೊಂಡಾಕೆ.
ಒಳ್ಳೆಯ ಲಕ್ಷಣವಲ್ಲ
ಆಗಲೇ ಕೆಲವರು ಈಕೆ ಸಂದರ್ಶನದಲ್ಲಿ ಆಡುವ ಮಾತುಗಳನ್ನು ಕೇಳಿಸಿಕೊಂಡು ಇದು ಒಳ್ಳೆಯ ಲಕ್ಷಣವಲ್ಲ ಎಂದೂ ಹೇಳಿದ್ದರು. ಏಕೆಂದ್ರೆ ಇವಳಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿಕ್ಕ ಪ್ರಚಾರ, ಪ್ರತಿಷ್ಠೆ, ಸನ್ಮಾನ ನೆತ್ತಿಗೇರಿದೆ. ಆಕೆಯಲ್ಲಿ ಮಕ್ಕಳ ಮುಗ್ಧತೆ ಎನ್ನೋದೇ ಮಾಯವಾಗಿದೆ. ಇದು ಅವಳ ಭವಿಷ್ಯಕ್ಕೆ ಭಾರಿ ಪೆಟ್ಟು ಕೊಡುತ್ತದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದುಂಟು.
ಮನೆಯ ಜವಾಬ್ದಾರಿ
ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ ಬಿಟ್ಟು ಹೋದ ಈಕೆನೇ ಈ ಪುಟಾಣಿ ವಯಸ್ಸಿನಲ್ಲಿಯೇ ನಟನೆಯ ಮೂಲಕ ಮನೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವುದಾಗಿ ಆಕೆ ತಾಯಿ ಕೂಡ ಹೇಳಿಕೊಂಡಿದ್ದರು. ಆದ್ದರಿಂದ ಸಹಜವಾಗಿ ರಿತು ಸಿಂಗ್ಗೆ ಅವಕಾಶಗಳ ಮಹಾಪೂರವೇ ಹರಿದುಬಂದಿತ್ತು. ಇದು ಆಕೆಯ ಮುಗ್ಧತೆಯನ್ನು ಕಳೆದುಕೊಳ್ಳುವಲ್ಲಿ ಬಹುದೊಡ್ಡ ಪಾತ್ರವನ್ನೂ ವಹಿಸಿದೆ!
ಅತಿಥಿಯಾಗಿ ಬಾಲಕಿ
ಇದೀಗ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಆಗಮಿಸಿರೋ ರಿತು ಸಿಂಗ್ಗೆ ಅಲ್ಲಿದ್ದವರು ಯಾವುದೇ ಸಿನಿಮಾ ನೋಡಿದ್ಯಾ ಎಂದು ಪ್ರಶ್ನಿಸಿದ್ದಾರೆ. ಆದರೆ, ರಿತು ಸಿಂಗ್ ಉತ್ತರಿಸಿರುವ ರೀತಿ ನೋಡಿ ಕಮೆಂಟ್ಗಳಲ್ಲಿ ಎಲ್ಲರೂ ಆಕೆಯ ವಿರುದ್ಧವೇ ಬರೆದಿದ್ದಾರೆ. ಇದು ತೀರಾ ಅತಿಯಾಯಿತು, ದೊಡ್ಡ ಸೆಲೆಬ್ರಿಟಿಗಿಂತಲೂ ಅತಿಯಾಗಿ ಅಧಿಕ ಪ್ರಸಂಗದ ಉತ್ತರ ಕೊಟ್ಟಿದ್ದಾಳೆ ಎಂದೆಲ್ಲಾ ಹೇಳುತ್ತಿದ್ದಾರೆ.
ರಿತು ಸಿಂಗ್ ಹೇಳಿದ್ದೇನು?
ಅಷ್ಟಕ್ಕೂ ರಿತು ಸಿಂಗ್ ಹೇಳಿದ್ದು ಏನೆಂದರೆ, ನಾನು ಸಿನಿಮಾ ನೋಡಿಲ್ಲ. ಅದೆಲ್ಲಾ ನೋಡಲು ನನಗೆ ಟೈಮ್ ಇಲ್ಲ. ನೋಡಿದ ಮೇಲೆ ರಿಯಾಕ್ಷನ್ ಹೇಳ್ತೇನೆ. ಸಿನಿಮಾ ನೋಡುವಾಗ ನನ್ನ ವ್ಲಾಗ್ನಲ್ಲಿ ಹಾಕುತ್ತೇನೆ, ಆಗ ನಾನು ಸಿನಿಮಾ ನೋಡ್ತಿರೋದು ನಿಮಗೆ ತಿಳಿಯತ್ತೆ ಎಂದು ಗತ್ತಿನಿಂದ ಕೂಡಿದ ದನಿಯಲ್ಲಿ ಮಾತನಾಡಿರುವುದು ನೆಟ್ಟಿಗರನ್ನು ಕೆರಳಿಸಿದೆ. ಶ್ರೀ ಹಷಾ ಫಿಲ್ಮ್ ಇನ್ಸ್ಟಾಗ್ರಾಮ್ನಲ್ಲಿ ಬಾಲಕಿಯ ವಿಡಿಯೋ ಶೇರ್ ಮಾಡಲಾಗಿದೆ.
ಯಾವ ಕಾಲಕ್ಕೆ ಏನಾಗಬೇಕೋ...
ತಾವೇ ಬೆಳೆಸಿದ ಪುಟ್ಟ ಬಾಲಕಿ, ತಾವೇ ಹೊಗಳಿ ಅಟ್ಟಕ್ಕೇರಿಸಿರೋ ಈ ಪುಟಾಣಿಯ ವಿರುದ್ಧವೇ ಈಗ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಈಕೆಯದ್ದು ಅತಿಯಾಯಿತು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ, ಯಾವ ವಯಸ್ಸಿಗೆ ಏನಾಗಬೇಕೋ ಅದಾಗಬೇಕು, ಚಿಕ್ಕ ಮಕ್ಕಳನ್ನು ಅತಿಯಾಗಿ ತೋರಿಸಿದರೇ ಇದೇ ಆಗುವುದು ಎನ್ನುವ ಪ್ರತಿಕ್ರಿಯೆಗಳು ಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

