ಮತ್ತೆ ರೌಡಿ ಬೇಬಿಯಾದ ಚಾರು… ಟ್ರೆಡಿಶನಲ್ -ಮಾಡರ್ನ್… ನಿಮಗೆ ಯಾವ ಚಾರು ಇಷ್ಟ?
ರಾಮಾಚಾರಿ ಧಾರಾವಾಹಿಯಲ್ಲಿ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಚಾರು ಮತ್ತೆ ಮೊದಲಿನ ರೌಡಿ ಬೇಬಿಯಾಗಿ ಬದಲಾಗಿದ್ದಾರೆ. ಅಷ್ಟೇ ಅಲ್ಲ ಈಗ ರುಕ್ಕು ಮತ್ತು ಚಾರುಗೆ ಇರುವ ಸಂಬಂಧ ಕೂಡ ರಿವೀಲ್ ಆಗಲಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಹೊಸ ಹೊಸ ತಿರುವುಗಳು ಪಡೆದುಕೊಳ್ಳುತ್ತಿದೆ. ಇಲ್ಲಿವರೆಗೆ ನಾರಾಯಣ ಆಚಾರ್ಯರ ಇನ್ನೊಂದು ಮದುವೆ ಮಕ್ಕಳ ಬಗ್ಗೆ ಸುದ್ದಿಯಾಗಿತ್ತಿದ್ರೆ, ಇದೀಗ ಚಾರು ನಿಜವಾಗಿಯೂ ಯಾರು ಅನ್ನೋದರ ಬಗ್ಗೆ ಕಥೆ ರಿವೀಲ್ ಆಗ್ತಿದೆ.
ಅಷ್ಟೇ ಅಲ್ಲ ಸೀರಿಯಲ್ ಗೆ ಸದ್ಯ ಕೃಷ್ಣನಿಗೆ ಜೋಡಿಯಾಗಿ ರುಕ್ಕು ಎಂಟ್ರಿಯಾಗಿದೆ. ಇದೀಗ ರುಕ್ಕು ಮತ್ತು ಚಾರು ನಡುವಿನ ನಂಟಿನ ಬಗ್ಗೆ ಕಥೆ ಬಿಚ್ಚಿಕೊಳ್ಳುತ್ತಾ ಸಾಗಿದೆ. ಇನ್ನೊಂದೆಡೆ, ಸದ್ಯ ಸಂಪ್ರದಾಯಸ್ತೆಯಾಗಿರುವ ಚಾರುವಿನ ಹಳೆಯ ರೂಪದ ದರ್ಶನವಾಗಿದೆ. ಸದ್ಯಕ್ಕಂತೂ ಜನ ಕನ್ಫ್ಯೂಷನ್ ಆಗಿ ಸೀರಿಯಲ್ ನೋಡ್ತಿದ್ದಾರೆ.
ಇದೆಲ್ಲದರ ಮಧ್ಯೆ ಹಳೆ ಚಾರುವಿನ ದರ್ಶನ ಕೂಡ ಆಗಿದೆ. ಚಾರು ಮೊದಲಿನಂತೆ ಶಾರ್ಟ್ ಡ್ರೆಸ್ ಹಾಕಿ, ಅವಾಜ್ ಕೊಡುತ್ತಾ, ತನಗೆ ಹೇಗೆ ಬೇಕು, ಅದೇ ರೀತಿ ಇರುವಂತಹ ಹಳೆಯ ಚಾರು ಆಗಿ ಬದಲಾಗ್ತಿದ್ದಾಳೆ ಚಾರು.
ಪ್ರೊಮೋ (Ramachari promo) ನೋಡಿದ ಜನರು ಚಾರು ಹಿಂದಿನ ದಿನಗಳಿಗೂ, ರುಕ್ಕುಗೂ ಏನೋ ಸಂಬಂಧ ಇರಬೇಕು. ಹಾಗಾಗಿಯೇ ಈ ರೀತಿ ತೋರಿಸ್ತಿದ್ದಾರೆ. ಇಲ್ಲೇನೋ ದೊಡ್ಡದಾಗಿ ಟ್ವಿಸ್ಟ್ ಸಿಗುತ್ತೆ ಅಂತಿದ್ದಾರೆ. ಅಂದ್ರೆ ಚಾರು ಮತ್ತು ರುಕ್ಕು ನಿಜವಾದ ಅಕ್ಕ-ತಂಗೀನಾ? ಮಾನ್ಯತಾ ಚಾರುನ ಸಾಕು ತಾಯಿನಾ ಅನ್ನೋದನ್ನ ಕಾದು ನೋಡಬೇಕು.
ಇನ್ನು ಯಾವಾಗ್ಲೂ ಸೀರೆಯಲ್ಲಿರೇ ಕಾಣಿಸಿಕೊಳ್ಳುವ ಚಾರು ಆಲಿಯಾಸ್ ಮೌನ ಗುಡ್ಡೆಮನೆ (Mouna Guddemane) ತನ್ನ ಹಳೆ ಸ್ಟೈಲ್ ಅಂದ್ರೆ ಮಾಡರ್ನ್ ಅವತಾರದಲ್ಲಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ನೀವು ಹಳೆಯ ರೌಡಿ ಬೇಬಿ ಚಾರು ನ ಮಿಸ್ ಮಾಡ್ತಿದ್ದೀರಾ? (Are you guys missing rowdy baby Charu ) ಎಂದು ಕೇಳಿದ್ದಾರೆ.
ಅಹಂ ತುಂಬಿದ ಹಳೆಯ ಚಾರುವನ್ನ ನೋಡಿ ವೀಕ್ಷಕರಂತೂ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. ಹಳೆ ಚಾರುನ ತುಂಬಾ ಮಿಸ್ ಮಾಡ್ಕೊಳ್ತಿದ್ವಿ, ಈವಾಗ ಖುಷಿಯಾಯ್ತು ಅಂತಿದ್ದಾರೆ ಅಷ್ಟೇ ಅಲ್ಲ, ಚಾರು ಮಾಡರ್ನ್ ಅವತಾರಕ್ಕೂ ಸೈ, ಟ್ರೆಡಿಷನಲ್ ಪಾತ್ರಕ್ಕೂ ಸೈ ಅದ್ಭುತ ಕಲಾವಿದೆ ಎಂದಿದ್ದಾರೆ.
ಅಷ್ಟೇ ಅಲ್ಲ ಹಳೆ ಚಾರು ನಮ್ಮ ಇಮೋಷನ್. ಯಾವ ಪಾತ್ರಗಳನ್ನ ಸಹ ಇಷ್ಟು ಇಷ್ಟಪಟ್ಟಿರಲಿಲ್ಲ. ಆ ರಗಡ್, ರಫ್ ಆಂಡ್ ಟಫ್, ಮಾತು, ಲುಕ್, ಬಬ್ಲಿ ಪಾತ್ರವನ್ನ ತುಂಬಾನೆ ಮಿಸ್ ಮಾಡ್ಕೊಂಡ್ವಿ ಎಂದಿದ್ದಾರೆ. ಅಷ್ಟೇ ಅಲ್ಲ ಇಷ್ಟು ಚೆಂದ ಇದ್ದರೆ ಹೇಗೆ ತಡೆಯೋದು ಜೀವ.. ನಮ್ ಮುದ್ದು ಮೌನ... ನಿಮ್ ಅಂದಕ್ಕೆ ನಾನು ಮೌನಿ ಅಂತಾ ಕವಿತೆ ಕೂಡ ಹಾಡಿದ್ದಾರೆ.