ಸೀರಿಯಲ್ಸ್‌ಗೆ ಬಯ್ತಿದ್ದೋರೆಲ್ಲ ಹೊಗಳೋ ತರ ಮಾಡಿದೆ ಗೌತಮ್-ಭೂಮಿಯ ಅಮೃತಧಾರೆ!
ಅಮೃತಧಾರೆ ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿದ್ದು, ಕಥೆ ಸಾಗುವ ರೀತಿಗೆ ಜನ ಅಪಾರ ಮೆಚ್ಚುಗೆ ಸೂಚಿಸಿದ್ದಾರೆ. ಸೀರಿಯಲ್ಸ್ ಸರಿಯಿಲ್ಲ ಸಮಾಜಕ್ಕೆ ಕೆಟ್ಟದ್ದನ್ನು ತೋರಿಸುತ್ತೆ, ಅನ್ನೋರೆಲ್ಲಾ ಅಮೃತಧಾರೆ ಸೀರಿಯಲ್ ಹೊಗಳುವಂತೆ ಆಗಿದೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಸೀರಿಯಲ್ ಪ್ರಬುದ್ಧ ಪ್ರೇಮಕಥೆಯನ್ನು ಹೊಂದಿದ್ದು, ಕಥೆ ಹೆಚ್ಚು ಎಳೆದುಕೊಂಡು ಹೋಗದೆ, ಒಂದೇ ದಿವಸದಲ್ಲಿ ಕಥೆಯನ್ನು ಹೇಳಿ ಬಿಡುವ ಶೈಲಿಯೇ ಜನರು ಈ ಸೀರಿಯಲ್ ನತ್ತ ವಾಲುವಂತೆ ಮಾಡಿದೆ.
ಭೂಮಿಕಾ ಮತ್ತು ಗೌತಮ್ ದಿವಾನ್ ಮದುವೆ, ಪ್ರೀತಿ, ಪ್ರೇಮ, ರೊಮ್ಯಾನ್ಸ್ (Romance). ಅತ್ತೆ ಶಾಕುಂತಲ ಮತ್ತು ಭೂಮಿ ನಡುವಿನ ಜಿದ್ದಾಜಿದ್ದಿ, ಎಲ್ಲಾ ಸೀರಿಯಲ್ ನಂತೆ ಅತ್ತೆಗೆ ಹೆದರಿ ಅಳುತ್ತ ಕೂರುವ ಸೊಸೆಯಾಗಿರದೆ, ತಪ್ಪಿದ್ದರೆ ಅದನ್ನು ಆವಾಗಲೇ ಸರಿಪಡಿಸುವ, ಕುತಂತ್ರ ಮಾಡಲು ಬಂದೊರಿಗೆ ನೀರಿಳಿಸುವ ಭೂಮಿ ಪಾತ್ರ, ಕಥೆ ಎಲ್ಲರಿಗೂ ಇಷ್ಟ. ಹಾಗಾಗಿ ಜನ ಈ ಸೀರಿಯಲ್ ಅನ್ನು ಇಷ್ಟಪಟ್ಟು ನೋಡ್ತಾರೆ.
ಅಮೃತಧಾರೆ ಸೀರಿಯಲ್ ನ್ನು ಹಾಡಿ ಹೊಗಳಿರುವ ಜನ, ಈ ಸೀರಿಯಲ್ ಯಾವ ಬ್ಲಾಕ್ ಬಸ್ಟರ್ ಸಿನೆಮಾಗೂ (Blockbuster film) ಕಮ್ಮಿ ಇಲ್ಲ ಬಿಡಿ. ಅಷ್ಟು ಸುಂದರ ವಾಗಿ ಅಭಿಮಾನಿಗಳ ಹೃದಯ ಮತ್ತು ಮನಸು ಗೆಲ್ಲುತ್ತಿದೆ. ಸೀರಿಯಲ್ ಗಳಲ್ಲಿ ಇದೇ ಬೆಸ್ಟ್ ಸೀರಿಯಲ್. ನಂಗೆ ಈ ಸೀರಿಯಲ್ ಸ್ಟ್ರೆಸ್ ಬೂಸ್ಟರ್ ಮತ್ತೇ ಟೆನ್ಶನ್ ಬೂಸ್ಟರ್ ತರ. ಇದನ್ನ ನೋಡಿದ್ರೆ ಮನಸ್ಸು ರಿಲ್ಯಾಕ್ಸ್ ಆಗುತ್ತೆ ಅಂದಿದ್ದಾರೆ.
ಮತ್ತೊಬ್ರು ಧಾರಾವಾಹಿ ಅಂದ್ರೆ ಕೆಲಸ ಇಲ್ಲದಿರೋರು ನೋಡೋದು, ಹಾಗೆ ಹೀಗೆ ಅಂತ ಬರೀ ನೆಗೆಟೀವ್ (negative)ಭಾವನೆ ಇತ್ತು. ಆದ್ರೆ ಅಮೃತಧಾರೆ ಇದೆಲ್ಲವನ್ನೂ ಸುಳ್ಳಾಗಿಸಿ ಒಳ್ಳೆ ಸಂದೇಶ, ಮನರಂಜನೆ ಕೊಡುವಲ್ಲಿ ಯಶಸ್ವಿಯಾಗಿದೆ. ಜನರಿಂದ ಅಪಾರ ಮೆಚ್ಚುಗೆ ಪಡೆದ ಧಾರಾವಾಹಿ ಇದು ಎಂದಿದ್ದಾರೆ.
ಅಮೃತಧಾರೆ ಅಮೃತವನ್ನೇ ಉಣಬಡಿಸುತ್ತಿದೆ. ಸೂಪರ್ ಸಿರಿಯಲ್ ಮುಗ್ಧ ಜನರಿಗೆ ಜ್ಞಾನ ತುಂಬುತ್ತಿದೆ. ಅದ್ಭುತವಾದ ಧಾರಾವಾಹಿ. ಪ್ರತಿಯೊಂದು ದೃಶ್ಯ ಅದ್ಭುತವಾಗಿದೆ. ನೋಡುಗರಿಗೆ ಆಕರ್ಷಕವಾಗಿ ಮುಜುಗರಕ್ಕೆ ದಾರಿ ಮಾಡಿಕೊಡದೆ, ಪ್ರತಿದೃಶ್ಯವನ್ನು ಕಟ್ಟಿಕೊಡುತ್ತಿರೋದು ಅದ್ಭುತವಾಗಿದೆ.
ಇತ್ತೀಚೆಗೆ ಪ್ರಸಾರವಾದಂತಹ ಫಸ್ಟ್ ನೈಟ್ ದೃಶ್ಯಗಳು ಸಹ ಅದ್ಭುತವಾಗಿ ಮೂಡಿಬಂದಿದ್ದು, ಅದಕ್ಕೂ ಜನ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೊಂದು ಕ್ಲಾಸಿ ಸೀನ್ (classy scenes) ಆಗಿದೆ. ನೋಡುವ ಜನರಿಗೆ ಮುಜುಗರವಾಗದಂತೆ, ಸುಂದರವಾಗಿ ದೃಶ್ಯೀಕರಿಸಲಾಗಿದೆ. ಈ ಕ್ಲಾಸಿ ದೃಶ್ಯ, ಇಬ್ಬರು ಮಹಾನಟ ಅದ್ಭುತ ನಟನೆಯನ್ನು ಹೊಗಳೋಕೆ ಮಾತೇ ಸಿಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಇತರೆ ಸೀರಿಯಲ್‌ಗಳಂತೆ, ಅತ್ತೆ ಸೊಸೆ, ಕಾಟ, ನಾಯಕಿ ಗೋಳು ಈ ಸೀರಿಯಲ್‌ನಲ್ಲಿಲ್ಲ, ಅದೇ ನೋಡೋಕೆ ಚೆಂದ, ಸೊಸೆಯಾದವಳು ಹೇಗಿರಬೇಕು, ಎಷ್ಟು ಸ್ಟ್ರಾಂಗ್ ಆಗಿರಬೇಕು, ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಅನ್ನೋದನ್ನು ಚೆನ್ನಾಗಿ ತೋರಿಸುತ್ತಿದೆ ಈ ಧಾರಾವಾಹಿ. ಹಲವು ಜನರ ಜೀವನಕ್ಕೆ ಇದು ಬೆಳಕಾಗಿದೆ ಎಂದಿದ್ದಾರೆ.
ಮತ್ತೊಬ್ಬರು ಈ ಧಾರಾವಾಹಿಯ ಅಲ್ಲೇ ಡ್ರಾ ಅಲ್ಲೇ ಬಹುಮಾನ, ಕಾನ್ಸೆಪ್ಟ್ ತುಂಬಾ ಇಷ್ಟವಾಯ್ತು. ಶಕುಂತಲ ಏನೇ ಮಾಡಿದ್ರೂ, ಭೂಮಿ ಅದಕ್ಕೆ ಠಕ್ಕರ್ ಕೊಟ್ಟು, ಸಮಸ್ಯೆ ದೊಡ್ಡದಾಗದಂತೆ ನೋಡಿಕೊಳ್ತಾಳೆ. ಅದುವೇ ನಮ್ಗೆ ಇಷ್ಟವಾಗೋದು, ಸೀರಿಯಲ್ ಹೀಗೆ ಮುಂದುವರೆಯಲಿ ಎಂದಿದ್ದಾರೆ.