MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ‘ಭಾಗ್ಯವಂತರು’ ಧಾರಾವಾಹಿಗೆ ನಾಯಕನಾಗಿ ಎಂಟ್ರಿ ಕೊಡ್ತಿದ್ದಾರೆ ಕಿರುತೆರೆ ವೀಕ್ಷಕರ ಮೆಚ್ಚಿನ ನಟ

‘ಭಾಗ್ಯವಂತರು’ ಧಾರಾವಾಹಿಗೆ ನಾಯಕನಾಗಿ ಎಂಟ್ರಿ ಕೊಡ್ತಿದ್ದಾರೆ ಕಿರುತೆರೆ ವೀಕ್ಷಕರ ಮೆಚ್ಚಿನ ನಟ

RK Chandan: ‘ಭಾಗ್ಯವಂತರು’ ಸೀರಿಯಲ್ ಶೀಘ್ರದಲ್ಲಿ ಉದಯ ವಾಹಿನಿಯಲ್ಲಿ ಶುರುವಾಗಲಿದೆ. ಅಪ್ಪ ಮಗಳ ಭಾಂದವ್ಯದ ಕಥೆ ಇದಾಗಿದೆ. ಇದೀಗ ಈ ಧಾರಾವಾಹಿಗೆ ಹಲವಾರು ವರ್ಷಗಳ ಬಳಿಕ ‘ಮಾಂಗಲ್ಯಂ ತಂತು ನಾನೇನಾ’ ಧಾರಾವಾಹಿ ನಟ ಚಂದನ್, ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. 

1 Min read
Author : Pavna Das
Published : Jun 30 2026, 03:42 PM IST
Share this Photo Gallery
  • FB
  • TW
  • Linkdin
  • Whatsapp
15
ಭಾಗ್ಯವಂತರು
Image Credit : Instagram

ಭಾಗ್ಯವಂತರು

ಉದಯ ಟಿವಿಯಲ್ಲಿ ಶೀಘ್ರದಲ್ಲಿ ಆರಂಭವಾಗಲಿರುವ ಧಾರಾವಾಹಿ ‘ಭಾಗ್ಯವಂತರು’. ಮಗಳನ್ನು ಚೆನ್ನಾಗಿ ಓದಿಸಿ, ಉನ್ನತ ಸ್ಥಾನಕ್ಕೆ ಏರಿಸಬೇಕೆಂಬ ಹಂಬಲ ಹೊಂದಿದ ತಂದೆ ಹಾಗೂ ತಂದೆಯ ಕನಸನ್ನು ನನಸಾಗಿಸಲು ಸಾಧನೆಯ ಮೆಟ್ಟಿಲೇರುವ ಮಗಳ ಕಥೆ ಇದಾಗಿದೆ. ಇದೀಗ ಈ ಧಾರಾವಾಹಿಯಲ್ಲಿ ನಾಯಕ ಎಂಟ್ರಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹಲವು ವರ್ಷಗಳ ಬಳಿಕ ಎಂಟ್ರಿ ಕೊಟ್ಟ ಚಂದನ್
Image Credit : Instagram

ಹಲವು ವರ್ಷಗಳ ಬಳಿಕ ಎಂಟ್ರಿ ಕೊಟ್ಟ ಚಂದನ್

‘ಭಾಗ್ಯವಂತರು’ ಧಾರಾವಾಹಿಯಲ್ಲಿ ತನ್ವಿ ರಾವ್ ಹಾಗೂ ಸುಚೇಂದ್ರ ಪ್ರಸಾದ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ನಾಯಕನಾಗಿ ‘ಮಾಂಗಲ್ಯಂ ತಂತು ನಾನೇನ’ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿದ್ದ ನಟ ಆರ್ ಕೆ ಚಂದನ್ ಎಂಟ್ರಿ ಕೊಟ್ಟಿದ್ದಾರೆ. ಗೌತಮ್ ಪಾತ್ರದಲ್ಲಿ ಚಂದನ್ ನಟಿಸುತ್ತಿದ್ದಾರೆ.

Related Articles

Related image1
Kannada Serial TRP 2026: ಧಾರಾವಾಹಿಗಳ ಮಧ್ಯೆ ಜಟಾಪಟಿ; ನಂ 1 ಸ್ಥಾನಕ್ಕೆ ಮತ್ತೆ ಬಂದು ಕುಳಿತ ಹಳೇ ಸೀರಿಯಲ್‌!
Related image2
Karna Serial: ಬರೋಬ್ಬರಿ 22 ಎಪಿಸೋಡ್‌ ಬಂದ್ರೂ ನಿತ್ಯಾ ಪಾತ್ರದ ಸುಳಿವೇ ಇಲ್ಲ; ಅಂಥದ್ದೇನಾಯ್ತು?
35
ಮಾಂಗಲ್ಯಂ ತಂತು ನಾನೇನ ನಟ
Image Credit : Instagram

ಮಾಂಗಲ್ಯಂ ತಂತು ನಾನೇನ ನಟ

ಕೆಲ ವರ್ಷಗಳ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೀರಿಯಲ್ ‘ಮಾಂಗಲ್ಯಂ ತಂತು ನಾನೇನ’ ಈ ಸೀರಿಯಲ್ ಜೋಡಿಯಾದ ತೇಜಸ್ವಿ -ಶ್ರಾವಣಿ ಭಾರಿ ಜನಪ್ರಿಯತೆ ಪಡೆದಿದ್ದರು. ಇಬ್ಬರ ಮುದ್ದಾದ ಜೋಡಿಗೆ ಜನ ಫಿದಾ ಆಗಿದ್ದರು. ಅದಾದ ಬಳಿಕ ಆರ್ ಕೆ ಚಂದನ್ ಮತ್ತೆ ಸೀರಿಯಲ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

45
ರಿಯಾಲಿಟಿ ಶೋದಲ್ಲಿ ಚಂದನ್
Image Credit : Instagram

ರಿಯಾಲಿಟಿ ಶೋದಲ್ಲಿ ಚಂದನ್

ಇನ್ನು ಚಂದನ್ ಕಲರ್ಸ್ ಕನ್ನಡದ ‘ಶ್ರೀಗೌರಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ‘ಕ್ವಾಟ್ಲೆ ಕಿಚನ್’ ನಲ್ಲಿ ಸ್ಪರ್ಧಿಯಾಗಿದ್ದರು. ಇವರನ್ನು ಮತ್ತೆ ತೆರೆಯ ಮೇಲೆ ಕಾಣಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ಆ ಆಸೆ ಈಡೇರಿದೆ.

55
ಸಿನಿಮಾಗಳಲ್ಲಿ ಚಂದನ್
Image Credit : Instagram

ಸಿನಿಮಾಗಳಲ್ಲಿ ಚಂದನ್

ಚಂದನ್ ‘ಮಾಂಗಲ್ಯಂ ತಂತು ನಾನೇನ ಸೀರಿಯಲ್’ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ‘ಬಿಂಗೋ’, ‘ಕಟ್ಟಾರ’, ಮೊದಲಾದ ಸಿನಿಮಾಗಳಲ್ಲಿ ಚಂದನ್ ಬಣ್ಣ ಹಚ್ಚಿದ್ದರು. ಇದೀಗ ‘ಭಾಗ್ಯವಂತರು’ ಧಾರಾವಾಹಿಯಲ್ಲಿ ಕಾಲೇಜ್ ಸ್ಟೂಡೆಂಟ್ ಗೌತಮ್ ಆಗಿ ನಟಿಸುತ್ತಿದ್ದಾರೆ. ಅಪ್ಪನ ಶಿಸ್ತಿನ ಮಗಳು ಜನನಿ ಮತ್ತು ಗೌತಮ್ ನಡುಗೆ ಹೇಗೆ ಪ್ರೀತಿಯಾಗುತ್ತೆ ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೀರಿಯಲ್ ಶೂಟಿಂಗ್
ಟಿವಿ ಶೋ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ

Latest Videos
Recommended Stories
Recommended image1
Muddu Sose Serial: ಅಮ್ಮಮ್ಮ ಸಾವಿನ ಎಪಿಸೋಡ್;‌ ತೆರೆ ಹಿಂದೆ ನಡೆದಿದ್ದೇ ಬೇರೆ! ವಿಡಿಯೋ ರಿಲೀಸ್!
Recommended image2
ಧಾರಾವಾಹಿಯಲ್ಲಿ ಆದರ್ಶ ಪತಿ; ರಿಯಲ್‌ ಆಗಿ ಮದುವೆಯಲ್ಲಿ ಮೋಸ ಮಾಡಿದ್ರೂ ಓಕೆ...! ಖ್ಯಾತ ನಟನ ಅಸಲಿ ಮುಖ ಬಯಲು
Recommended image3
Karna Serial: ಬರೋಬ್ಬರಿ 22 ಎಪಿಸೋಡ್‌ ಬಂದ್ರೂ ನಿತ್ಯಾ ಪಾತ್ರದ ಸುಳಿವೇ ಇಲ್ಲ; ಅಂಥದ್ದೇನಾಯ್ತು?
Related Stories
Recommended image1
Kannada Serial TRP 2026: ಧಾರಾವಾಹಿಗಳ ಮಧ್ಯೆ ಜಟಾಪಟಿ; ನಂ 1 ಸ್ಥಾನಕ್ಕೆ ಮತ್ತೆ ಬಂದು ಕುಳಿತ ಹಳೇ ಸೀರಿಯಲ್‌!
Recommended image2
Karna Serial: ಬರೋಬ್ಬರಿ 22 ಎಪಿಸೋಡ್‌ ಬಂದ್ರೂ ನಿತ್ಯಾ ಪಾತ್ರದ ಸುಳಿವೇ ಇಲ್ಲ; ಅಂಥದ್ದೇನಾಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved