- Home
- Entertainment
- TV Talk
- ಉಗುರು ತೆಗೆಯೋಕೆ ಇಷ್ಟು ರೇಟಾ? ಸಲೂನ್ನಲ್ಲಿ Bigg Boss ಮಲ್ಲಮ್ಮ ತಬ್ಬಿಬ್ಬು- ಮುಂದೇನಾಯ್ತು ನೋಡಿ
ಉಗುರು ತೆಗೆಯೋಕೆ ಇಷ್ಟು ರೇಟಾ? ಸಲೂನ್ನಲ್ಲಿ Bigg Boss ಮಲ್ಲಮ್ಮ ತಬ್ಬಿಬ್ಬು- ಮುಂದೇನಾಯ್ತು ನೋಡಿ
ಬಿಗ್ಬಾಸ್ ಮನೆಯಲ್ಲಿ ತಮ್ಮ ಮುಗ್ಧತೆಯಿಂದಲೇ ಎಲ್ಲರ ಮನಗೆದ್ದಿರುವ ಮಲ್ಲಮ್ಮ, ಶೋಗೆ ಬರುವ ಮುನ್ನ ಸಲೂನ್ಗೆ ಭೇಟಿ ನೀಡಿದಾಗ ನಡೆದ ಸ್ವಾರಸ್ಯಕರ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಅಲ್ಲಿನ ದುಬಾರಿ ರೇಟ್ ಕೇಳಿ ಹಾಗೂ ಸಿಬ್ಬಂದಿಯ ಸೇವೆಗೆ ಅವರ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಮಲ್ಲಮ್ಮನ ಹವಾ ಜೋರು
ಬಿಗ್ಬಾಸ್ ಮಲ್ಲಮ್ಮ (Bigg Boss Mallamma) ಹವಾ ಸದ್ಯ ಜೋರಾಗಿದೆ. ಇವರು ಬಿಗ್ಬಾಸ್ ವಿಜೇತರಾದರೂ ಅಚ್ಚರಿಯೇನಿಲ್ಲ ಎನ್ನುವ ಲೆಕ್ಕಾಚಾರ ಬಹುತೇಕ ಮಂದಿಯದ್ದು. ಇದಾಗಲೇ ಬಿಗ್ಬಾಸ್ ಮನೆಯೊಳಕ್ಕೆ ನಡೆದಿರುವ ಪ್ರೆಸ್ಮೀಟ್ನಲ್ಲಿ ಮಲ್ಲಮ್ಮ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಪತ್ರಕರ್ತರಾಗಿ ಕುಳಿತಿದ್ದ ಫೈನಲಿಸ್ಟ್ ಪ್ರಶ್ನೆಗಳಿಗೆ ಮಲ್ಲಮ್ಮ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಮಲ್ಲಮ್ಮ ಅವರ ಉತ್ತರಕ್ಕೆ ಬಿಗ್ಬಾಸ್ ಸ್ಪರ್ಧಿಗಳೂ ಅಚ್ಚರಿಯಾಗಿದ್ದಾರೆ.
ಸಲೂನ್ನಲ್ಲಿ ಮಲ್ಲಮ್ಮ
ಇಂತಿಪ್ಪ ಮಲ್ಲಮ್ಮ ಬಿಗ್ಬಾಸ್ಗೆ ಹೋಗುವ ಮುನ್ನ, ಅವರನ್ನು ಸಲೂನ್ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲೇನು ಮಾಡ್ತಾರೆ ಎಂದು ಮಲ್ಲಮ್ಮ ಕೇಳಿದಾಗ ಉಗುರು ಕಟ್ ಎಂದರು. ಅಯ್ಯಪ್ಪಾ ಬೇಡಪ್ಪಾ, ನನ್ನ ಉಗುರನ್ನು ನಾನೇ ಕಟ್ ಮಾಡ್ಕೋತೇನೆ, ಇದೆಲ್ಲಾ ಬೇಡ ಎಂದರೂ ರೂಲ್ಸ್ ಪ್ರಕಾರ ಅವರನ್ನು ಒಮ್ಮೆ ಸಲೂನ್ನಲ್ಲಿ ಕರೆದುಕೊಂಡು ಹೋಗಲಾಯಿತು.
ರೇಟ್ ಕೇಳಿ ತಬ್ಬಿಬ್ಬು
ಅಲ್ಲಿ ಉಗುರು ಕಟ್ಗೆ ಐದು ನೂರು ರೂಪಾಯಿ ಎಂದಾಗ, ಮಲ್ಲಮ್ಮನಿಗೆ ಮಹದಾಶ್ಚರ್ಯ. ಇಷ್ಟು ರೇಟಾ ಎಂದು ತಬ್ಬಿಬ್ಬಾದರು. ಕೊನೆಗೆ ಅವರನ್ನು ಕರೆದುಕೊಂಡು ಹೋಗಿ ಮಸಾಜ್ ಎಲ್ಲಾ ಮಾಡಲಾಯಿತು. ಕಾಲಿನ ಉಗುರು ತೆಗೆಯಲು ಅಲ್ಲಿಯ ಸಿಬ್ಬಂದಿ ಕಾಲು ಹಿಡಿದಾಗ ಮಲ್ಲಮ್ಮನಿಗೆ ಮುಜುಗರವಾಯ್ತು. ಬೇಡಮ್ಮಾ, ನನ್ನ ಕಾಲನ್ನು ಹಿಡಿಯಬೇಡ ಎಂದರು. ಅದಕ್ಕೆ ಆಕೆ ನಾನು ನಿಮ್ಮ ಮಗಳು ಇದ್ದ ಹಾಗೆ ಪರವಾಗಿಲ್ಲ, ಕೊಡಿಯಮ್ಮಾ ಎಂದು ಕಾಲಿನ ಉಗುರಿಗೆ ಶೇಪ್ ಕೊಟ್ಟು ಪಾದಗಳನ್ನೂ ಮಸಾಜ್ ಮಾಡಿದರು.
ಹೀಗೆಲ್ಲಾ ಇರತ್ತಾ?
ಇವೆಲ್ಲಾ ಮಲ್ಲಮ್ಮ ಅವರಿಗೆ ಹೊಸತಲ್ವಾ? ತುಂಬಾ ಅಚ್ಚರಿಯಿಂದಲೇ ಜೊತೆಗೆ ಖುಷಿಯಿಂದ ಎಲ್ಲವನ್ನೂ ಮಾಡಿಸಿಕೊಂಡರು. ಬಹುಶಃ ಇಂಥದ್ದೊಂದು ವ್ಯವಸ್ಥೆ ಇರುತ್ತದೆ ಎನ್ನುವುದೇ ಅವರಿಗೆ ಗೊತ್ತಿರಲಿಲ್ಲವೇನೋ, ಶ್ರೀಮಂತರ ಈ ವ್ಯವಸ್ಥೆಯ ಬಗ್ಗೆ ಅವರಿಗೆ ತಿಳಿಯುವುದಾದರೂ ಹೇಗೆ ಹೇಳಿ? ಒಟ್ಟಿನಲ್ಲಿ ಮಲ್ಲಮ್ಮನವರು ತಮ್ಮ ಮುಗ್ಧತೆಯಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ.
58 ವರ್ಷದ ಮಲ್ಲಮ್ಮ
ಇನ್ನು ಮಲ್ಲಮ್ಮನವರ ಕುರಿತು ಹೇಳುವುದಾದರೆ, ಅವರು ಉತ್ತರ ಕರ್ನಾಟಕದವರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮಾತುಗಳಿಂದ ಫೇಮಸ್ ಆಗಿದ್ದಾರೆ. 58 ವರ್ಷದ ಇವರು, 15ನೇ ವಯಸ್ಸಿಗೆ ಮದುವೆಯಾಗಿ ತಮ್ಮ ಗಂಡನ ಮರಣಾನಂತರ ತುಂಬಾ ಕಷ್ಟಗಳನ್ನು ಎದುರಿಸಿ ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ.
ಯುಟ್ಯೂಬ್ನಲ್ಲಿ 16 ಸಾವಿರ ಫಾಲೋವರ್ಸ್
ಬಿಗ್ ಬಾಸ್ ಮನೆಯಲ್ಲಿ ತಮ್ಮ ಮುಗ್ಧತೆ, ಸರಳತೆ ಮತ್ತು ಹಾಸ್ಯದಿಂದ ಅವರು ಗಮನ ಸೆಳೆದಿದ್ದಾರೆ ಮತ್ತು ಕೆಲವೊಂದು ಸನ್ನಿವೇಶಗಳಲ್ಲಿ ಬಿಗ್ ಬಾಸ್ ಅವರನ್ನೇ ತಬ್ಬಿಬ್ಬುಗೊಳಿಸಿದ್ದಾರೆ. ಅವರಿಗೆ Instagram ನಲ್ಲಿ 1.69 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಮತ್ತು YouTube ನಲ್ಲಿ 16 ಸಾವಿರ ಫಾಲೋವರ್ಸ್ ಇದ್ದಾರೆ.
ಎಲ್ಲರಿಗೂ ಇಷ್ಟ ಇವರ ಮುಗ್ಧತೆ
ಅವರ ಮುಗ್ಧತೆ ಮತ್ತು ಹಾಸ್ಯ ಪ್ರವೃತ್ತಿ ಅನೇಕ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸ್ಪರ್ಧಿಗಳು ಕೂಡ ಅನುಕಂಪದ ಆಧಾರದ ಮೇಲೆ ಅವರನ್ನು ಫಿನಾಲೆ ಸ್ಪರ್ಧಿ ಎಂದು ಆಯ್ಕೆ ಮಾಡಿದ್ದಾರೆ.