MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ಮಲ್ಲಮ್ಮನ ಜೊತೆ ದಿಢೀರ್​ ಕಾಣಿಸಿಕೊಂಡ Bhargavi LLB ಅರ್ಜುನ್​: ಇದೇನಿದು ಟ್ವಿಸ್ಟ್​?

Bigg Boss ಮಲ್ಲಮ್ಮನ ಜೊತೆ ದಿಢೀರ್​ ಕಾಣಿಸಿಕೊಂಡ Bhargavi LLB ಅರ್ಜುನ್​: ಇದೇನಿದು ಟ್ವಿಸ್ಟ್​?

ಬಿಗ್‌ಬಾಸ್‌ನ ಸ್ಟ್ರಾಂಗ್ ಸ್ಪರ್ಧಿ ಮಲ್ಲಮ್ಮ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿಯ ನಡುವೆಯೇ, 'ಭಾರ್ಗವಿ ಎಲ್‌ಎಲ್‌ಬಿ' ಖ್ಯಾತಿಯ ನಟ ಮನೋಜ್ ಕುಮಾರ್ ಜೊತೆಗಿನ ಅವರ ವಿಡಿಯೋ ವೈರಲ್ ಆಗಿದೆ. ಮನೋಜ್ ಕುಮಾರ್ ಅವರು ಮಲ್ಲಮ್ಮ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ  

1 Min read
Suchethana D
Published : Nov 02 2025, 12:09 PM IST
Share this Photo Gallery
  • FB
  • TW
  • Linkdin
  • Whatsapp
16
ಹೊರಗಡೆ ಬಂದಿದ್ರಾ ಮಲ್ಲಮ್ಮ?
Image Credit : Asianet News

ಹೊರಗಡೆ ಬಂದಿದ್ರಾ ಮಲ್ಲಮ್ಮ?

ಸದ್ಯ ಬಿಗ್​ಬಾಸ್​ (Bigg Boss)ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ ಮಲ್ಲಮ್ಮ. ಸ್ಟ್ರಾಂಗ್​ ಸ್ಪರ್ಧಿಯಾಗಿ ಮುನ್ನುಗ್ಗುತ್ತಿದ್ದಾರೆ. ಅವರು ಏಕಾಏಕಿ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದರು ಎಂದು ಸುದ್ದಿಯಾಗಿತ್ತು. ಕೊನೆಗೆ ಅದು ಸುಳ್ಳು ಎಂದು ಹೇಳಲಾಯಿತು.

26
ಕುಸಿದು ಬಿದ್ದಿದ್ದರು?
Image Credit : Instagram

ಕುಸಿದು ಬಿದ್ದಿದ್ದರು?

ಇದರ ಬೆನ್ನಲ್ಲೇ ಅವರು ಬಿಗ್​ಬಾಸ್​​ ಆಟವಾಡುವ ಸಮಯದಲ್ಲಿ ಕುಸಿದು ಬಿದ್ದರು ಎಂದು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್​ ಆಗಿತ್ತು. ಅದರಲ್ಲಿ ಅವರು ಸ್ಟ್ರೆಚರ್​ನಲ್ಲಿ ಹೋಗುವುದನ್ನು ತೋರಿಸಲಾಗಿತ್ತು. ಕೊನೆಗೆ ಅದು ಮನೆಯೊಳಗಿನ ನಾಟಕದ ಒಂದು ಭಾಗ ಎನ್ನುವ ಸ್ಪಷ್ಟನೆ ಬಂದಿತು.

Related Articles

Related image1
Colors Kananda ಇನ್​ಸ್ಟಾಗ್ರಾಮ್​, ಫೇಸ್​ಬುಕ್​ ಏಕಾಏಕಿ ಮಾಯ? ನೆಟ್ಟಿಗರು ಶಾಕ್​- ಏನಾಗಿದೆ?
Related image2
Bigg Boss 12 ಗ್ರ್ಯಾಂಡ್​ ಫಿನಾಲೆ ಫೋಟೋ ರಿವೀಲ್​ ಆಗೋಯ್ತು! ಗೆಲ್ಲೋರು, ರನ್ನರ್​ ಅಪ್​ ಇವರೇಯಂತೆ!
36
 ಭಾರ್ಗವಿ ಎಲ್​ಎಲ್​ಬಿಯ ನಾಯಕ
Image Credit : Instagram

ಭಾರ್ಗವಿ ಎಲ್​ಎಲ್​ಬಿಯ ನಾಯಕ

ಇವೆಲ್ಲವುಗಳ ನಡುವೆಯೇ ಇದೀಗ ಅವರು ನಟ ಮನೋಜ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದಾರೆ. ಮನೋಜ್​ ಕುಮಾರ್​ ಎಂದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಇವರೇ ಕಲರ್ಸ್​ ಕನ್ನಡದ ಪ್ರಸಿದ್ಧ ಸೀರಿಯಲ್​ ಭಾರ್ಗವಿ ಎಲ್​ಎಲ್​ಬಿಯ (Bhargavi LLB) ಅರ್ಜುನ್​ ಉರ್ಫ್​ ಪಾರ್ಥ.

46
ಮಲ್ಲಮ್ಮ ಟಾಕ್ಸ್​ನಲ್ಲಿ ಶೇರ್​
Image Credit : Instagram

ಮಲ್ಲಮ್ಮ ಟಾಕ್ಸ್​ನಲ್ಲಿ ಶೇರ್​

ಇವರಿಬ್ಬರೂ ಒಟ್ಟಿಗೇ ಇರುವ ವಿಡಿಯೋ ಅನ್ನು ಮಲ್ಲಮ್ಮ ಟಾಕ್ಸ್​ನಲ್ಲಿ ಶೇರ್​ ಮಾಡಲಾಗಿದೆ. ಅಂದ ಮಾತ್ರಕ್ಕೆ ಮಲ್ಲಮ್ಮನವರು ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದರು ಎನ್ನುವುದು ಅರ್ಥವಲ್ಲ. ಬದಲಿಗೆ ಇದನ್ನು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಪೂರ್ವದಲ್ಲಿಯೇ ಶೂಟ್​ ಮಾಡಲಾಗಿದೆ.

56
ಮಲ್ಲಮ್ಮ ಪರವಾಗಿ ಪ್ರಚಾರ
Image Credit : Instagram

ಮಲ್ಲಮ್ಮ ಪರವಾಗಿ ಪ್ರಚಾರ

ಬಿಗ್​ಬಾಸ್​ ಸ್ಪರ್ಧಿಗಳು ಮನೆಯೊಳಕ್ಕೆ ಹೋಗುವ ಪೂರ್ವದಲ್ಲಿ ತಮ್ಮ ಪರವಾಗಿ ಪ್ರಚಾರಮಾಡಲು ಯಾರನ್ನಾದರೂ ನೇಮಕ ಮಾಡಿರುತ್ತಾರೆ. ಸ್ಪರ್ಧಿಗಳ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಯಿಂದ ಅವರ ಪರವಾಗಿ ಪ್ರಚಾರ ನಡೆಯುತ್ತದೆ. ಅದೇ ರೀತಿ ಮಲ್ಲಮ್ಮ ಪರವಾಗಿ ಮನೋಜ್ ಕುಮಾರ್ ಪ್ರಚಾರ ಮಾಡುತ್ತಿದ್ದಾರೆ.

66
ನಟನ ಕುರಿತು...
Image Credit : Instagram

ನಟನ ಕುರಿತು...

ಇನ್ನು ನಟ ಮನೋಜ್​ ಕುಮಾರ್​ ಕುರಿತು ಹೇಳುವುದಾದರೆ, ಇವರು, ಮಂಗಳೂರಿನವರು. ಫಾರ್ಮಸಿ ವಿಜ್ಞಾನ ಪದವೀಧರರಾಗಿದ್ದಾರೆ. ನಟನೆಯತ್ತ ಆಸಕ್ತಿ ಹುಟ್ಟಿದ್ದರಿಂದ ನಟನೆಗೆ ವಾಲಿದ್ದಾರೆ. ಮಲ್ಲಮ್ಮ ಟಾಕ್ಸ್ ಎಂಬ ಪೇಜ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಮಲ್ಲಮ್ಮ
ಕಲರ್ಸ್ ಕನ್ನಡ
ರಿಯಾಲಿಟಿ ಶೋ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved