ಕನ್ನಡಿಗರ ನಿದ್ದೆ ಕೆಡಿಸಿದೆ ಮಲೈಕಾ ಎಂಬ ಮಸ್ತಾನಿಯ ಕಣ್ಣೋಟ
ಹಿಟ್ಲರ್ ಕಲ್ಯಾಣದ ಲೀಲಾ ಆಗಿ ರಂಜಿಸಿ ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ನಟಿ ಮಲೈಕಾ ವಸುಪಾಲ್ ಹೊಸ ಫೋಟೊ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ (HItler Kalyana) ಧಾರಾವಾಹಿಯಲ್ಲಿ, ಎಡವಟ್ಟು ರಾಣಿ ಲೀಲಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಮಲೈಕಾ ವಸುಪಾಲ್. ಮೊದಲ ಸೀರಿಯಲ್ ನಲ್ಲೇ ಸಾವಿರಾರು ಅಭಿಮಾನಿಗಳನ್ನು ಪಡೆದರು. ಜೊತೆಗೆ ಚಂದನವನಕ್ಕೆ ಎಂಟ್ರಿ ಕೊಡುವ ಚಾನ್ಸ್ ಕೂಡ ಸಿಕ್ಕಿತ್ತು.
ಹಿಟ್ಲರ್ ಕಲ್ಯಾಣದಲ್ಲಿ ನಟಿಸುತ್ತಿರುವಾಗಲೇ ಮಲೈಕಾ (Malaika Vasupal), ಉಪಾಧ್ಯಾಕ್ಷ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಆ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು ಮಲೈಕಾ, ಅದಾದ ನಂತರ ಮತ್ತೊಂದು ದೊಡ್ಡ ಬ್ಯಾನರ್ ನಲ್ಲಿ ಮಲೈಕಾ ನಟಿಸಿದ್ದಾರೆ.
ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಸಿನಿಮಾದಲ್ಲಿ ನಟ ನಾಗಭೂಷಣ್ ಗೆ (Nagabhushan) ನಾಯಕಿಯಾಗಿ ಮಲೈಕಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಲೈಕಾ ಸಿನಿಮಾ ಹೀರೋಯಿನ್ ಆಗಿ ನಟಿಸುತ್ತಿದ್ದರು, ಸಿನಿಮಾವು ರೊಮ್ಯಾಂಟಿಕ್ ಕಾಮಿಡಿಯಾಗಿದ್ದು, ಜನರನ್ನು ನಗೆಗಡಲಲ್ಲಿ ತೇಲಿಸಿತ್ತು.
ಸದ್ಯ ಬೇರೆ ಹೊಸ ಅವಕಾಶಕ್ಕಾಗಿ ಕಾಯುತ್ತಿರುವ ಮಲೈಕಾ ವಸುಪಾಲ್, ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೊಶೂಟ್ ಮೂಲಕ ಮಿಂಚುತ್ತಿದ್ದಾರೆ. ಇತ್ತೀಚೆಗೆ ಮಾಡಿಸಿದಂತಹ ಮರಾಠಿ ಸ್ಟೈಲ್ ಫೋಟೊ ಶೂಟ್ ಸದ್ಯ ವೈರಲ್ ಆಗ್ತಿದೆ.
ಪಿಂಕ್ ಬಾರ್ಡರ್ ಇರುವಂತಹ ಹಸಿರು ಬಣ್ಣದ ಮರಾಠಿ ಜನರು ಉಡುವಂತಹ ಸೀರೆಯನ್ನ ಉಟ್ಟಿದ್ದು, ಸೀರೆ ಜೊತೆಗೆ ಹಸಿರು ಬಣ್ಣದ ಗಾಜಿನ ಬಳೆ, ಹೆವಿ ಜ್ಯುವೆಲ್ಲರಿ, ಮೂಗಿನಲ್ಲಿ ನತ್ತು ಧರಿಸಿದ್ದು, ಈ ಲುಕ್ ಜೊತೆಗೆ ತಮ್ಮ ಕಣ್ಣೋಟದ ಮೂಲಕವೇ ಮಲೈಕಾ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ.
ಮಲೈಕಾ ಹೊಸ ಲುಕ್ ನೋಡಿ ಜನ ಕಾಮೆಂಟ್ ಮೂಲಕ ಹೊಗಳಿದ್ದಾರೆ. ಮಸ್ತಾನಿಯಂತೆ ಕಾಣಿಸುತ್ತಿದ್ದಾರೆ. ಮರಾಠಿ ಮುಲ್ಗಿ, ಸೀರೆಲಿ ತುಂಬಾನೆ ಚೆನ್ನಾಗಿ ಕಾಣಿಸ್ತೀರಿ, ಮರಾಠಿ ಕ್ವೀನ್, ಗಾರ್ಜಿಯಸ್, ಕಣ್ಮುಚ್ಚಲು ಬರೀ ನಿನ್ನದೇ ಛಾಯೆ,, ಕಣ್ಬಿಡಲು ಅದೊಂದು ಮಾಯೆ!. ಇದೇನು ನನ್ನೊಳಗಿನ ಪ್ರೇಮವೋ ಕಣೋಳಗಿನ ರೋಗವೋ ಕ್ಲಾರಿಟಿ ಸಿಗ್ತಿಲ್ಲ! ಎಂದು ಹೊಗಳಿದ್ದಾರೆ.