ಅವಸರದಲ್ಲಿ ನೈಟ್ ಡ್ರೆಸ್ ಬದಲಾಯಿಸದೇ, ಮೇಕ್ ಅಪ್ ಇಲ್ಲದೇ ಹೊರಬಂದ ಮಲೈಕಾ
ಮಲೈಕಾ ಅರೋರಾ ಅವಸರದಲ್ಲೇ ಎದ್ದಿದ್ದಾರೆ. ಹೀಗಾಗಿ ನೈಟ್ ಡ್ರೆಸ್ ಕೂಡ ಬದಲಿಸಿಲ್ಲ, ಮೇಕ್ಅಪ್ ಮಾಡಿಲ್ಲ. ಹಾಗೇ ಹೊರಬಂದ ನಟಿ ನೋಡಿ ಹಲವರು ಅಚ್ಚರಿ ಪಟ್ಟಿದ್ದಾರೆ.

ಮಲೈಕಾ ಅರೋರಾ ಜಿಮ್‌ಗೆ ತೆರಳುವ ವೇಳೆ, ಇತರ ಕಾರ್ಯಕ್ರಮಕ್ಕೆ ತೆರಳವು ವೇಳೆ, ಸ್ನೇಹಿತರ ಭೇಟಿ ವೇಳೆ ಪರಿಸ್ಥಿತಿಗೆ ತಕ್ಕಂತೆ ಡ್ರೆಸ್ ಧರಿಸುತ್ತಾರೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವಾಗ ಡ್ರೆಸ್ ವಿಚಾರದಲ್ಲಿ ಮಲೈಕಾ ಕಾಂಪ್ರಮೈಸ್ ಆಗಲ್ಲ. ಆದರೆ ಈ ಬಾರಿ ಮಲೈಕಾ ಅರೋರಾ ಅವಸರದಲ್ಲಿ ಎದ್ದು ಹೊರಬಂದಿದ್ದಾರೆ. ಈ ವೇಳೆ ತಾವು ಮಲಗುವ ವೇಳೆ ಧರಿಸಿದ್ದ ನೈಟ್ ಡ್ರೆಸ್ ಬದಲಾಯಿಸಲು ಸಯಮ ಸಿಕ್ಕಿಲ್ಲ, ಇಷ್ಟೇ ಅಲ್ಲ ಮೇಕ್ಅಪ್ ಮಾಡದೇ ಹೊರಗಡೆ ಕಾಣಿಸಿಕೊಂಡಿದ್ದಾರೆ.

ಭಾರಿ ಅವಸರದಲ್ಲಿದ್ದ ಮಲೈಕಾ ಅರೋರಾ ನೈಟ್ ಡ್ರೆಸ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಈ ವೇಳೆ ಹಲವರು ಫೋಟೋ ಕ್ಲಿಕಿಸ್ಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರ. ಮಲೈಕಾ ಅರೋರಾ ಮೇಕ್ ಅಪ್ ಇಲ್ಲದೆಯೂ ಅಷ್ಟೇ ಸುಂದರವಾಗಿ, ಆಕರ್ಷಕವಾಗಿ ಕಾಣುತ್ತಿದ್ದಾರ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಲೈಕಾ ಫೋಟೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ ಮೇಡಂ, ಕನಿಷ್ಠ ಬಟ್ಟೆಯನ್ನಾದರೂ ಬದಲಾಯಿಸಬೇಕಿತ್ತು' ಎಂದು ಕಮೆಂಟ್ ಮಾಡಿದ್ದಾರೆ.. ಇನ್ನೊಬ್ಬರು, 'ಅವಸರದಲ್ಲಿ ಇದ್ದಾರೆ, ಅದಕ್ಕೆ ಮೇಕಪ್ ಮಾಡಿಲ್ಲ ಎಂದಿದ್ದಾರೆ. ಸಿಂಪಲ್ ಆಗಿ ಕಾಣಿಸಿಕೊಂಡ ಮಲೈಕಾ ಫೋಟೋಗಳು ಭಾರಿ ವೈರಲ್ ಆಗುತ್ತಿದೆ.
50+ ಮಲೈಕಾ ಅರೋರಾ ಅವರ ಲುಕ್ ಮತ್ತು ಸ್ಟೈಲ್ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಮಲೈಕಾ ತುಂಬಾ ಗ್ಲಾಮರಸ್ ಆಗಿದ್ದಾರೆ ಮತ್ತು ಅವರ ಸ್ಟೈಲ್ ಕೂಡ ಅದ್ಭುತವಾಗಿದೆ. ಪ್ರತಿ ದಿನ ಜಿಮ್ ವರ್ಕೌಟ್ ಮಾಡುತ್ತಾರೆ. ಇದರ ಜೊತೆಗೆ ಯೋಗ ಮಾಡುತ್ತಾರೆ. ಈ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಜೊತೆಗೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
ಮಲೈಕಾ ಅರೋರಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಮಲೈಕಾ ಇತರ ಕೆಲ ಬ್ರ್ಯಾಂಡ್ ಪ್ರಮೋಶನ್‌ನಲ್ಲಿ ಸಕ್ರಿಯಯವಾಗಿದ್ದಾರೆ. ಅರ್ಬಾಜ್ ಖಾನ್ ಜೊತೆಗಿನ ವೈವಾಹಿಕ ಜೀವನಕ್ಕೆ ವಿಚ್ಚೇದ ನೀಡಿದ ಬಳಿಕ ಅರ್ಜುನ್ ಕಪೂರ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ ಇತ್ತೀಚೆಗೆ ಈ ಸಂಬಂಧವೂ ಬ್ರೇಕ್ ಅಪ್ ಆಗಿದೆ.
ಮಲೈಕಾ ಅರೋರಾ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಫೋಟೋಶೂಟ್ ಮತ್ತು ರಿಯಾಲಿಟಿ ಶೋಗಳನ್ನು ಜಡ್ಜ್ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಾರೆ. ವರದಿಗಳ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 98.98 ಕೋಟಿ ರೂಪಾಯಿ.
ಪತಿ ಅರ್ಬಾಜ್ ಖಾನ್‌ನಿಂದ ವಿಚ್ಛೇದನ ಪಡೆದ ನಂತರ, ಮಲೈಕಾ ಅರೋರಾ ತಮ್ಮ ಮಗನನ್ನು ಒಬ್ಬಂಟಿಯಾಗಿ ಬೆಳೆಸುತ್ತಿದ್ದಾರೆ. ಅವರ ಮಗ ಅರ್ಹಾನ್ ಖಾನ್ ಕೂಡ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.