ವಿಮಾನದಲ್ಲಿ ಸಿಗುವ ಫ್ರೀ ಸ್ಪೂನ್‌ಗಳನ್ನು ಬ್ಯಾಗಿನೊಳಗೆ ಹಾಕಿಕೊಂಡ ಸುಶ್ಮಿತಾ; ಜನ ಏನಂತಾರೆ ನೋಡಿ
ಪ್ಯಾಕು ಪ್ಯಾಕು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಸುಶ್ಮಿತಾ ಮಾಡುತ್ತಿರುವ ತುಂಟಾಟ ವೈರಲ್.....
ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿರುವ ಸುಶ್ಮಿತಾ ಈಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.
ಇನ್ನಿತ್ತರ ಹಾಸ್ಯ ಕಲಾವಿದರಾದ ಜಗ್ಗಪ್ಪ, ಪ್ಯಾಕು ಪ್ಯಾಕು ಹಿತೇಶ್ ಮತ್ತು ಸುಶ್ಮಿತಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.
ವಿಮಾನದಲ್ಲಿ ಕೊಡುವ ಆಹಾರಗಳನ್ನು ಸೇವಿಸಿದ ನಂತರ ಅವರು ಕೊಟ್ಟ ಫ್ರೀ ಫೋರ್ಕ್ ಮತ್ತು ಸ್ಪೂನ್‌ಗಳನ್ನು ಸುಶ್ಮಿತಾ ಬ್ಯಾಗಿನೊಳಗೆ ಹಾಕಿಕೊಳ್ಳುತ್ತಾರೆ.
ಸುಶ್ಮಿತಾ ಹೀಗೆ ಮಾಡುತ್ತಿರುವ ಕೆಲಸವನ್ನು ಪ್ಯಾಕು ಪ್ಯಾಕು ಹಿತೇಷ್ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ನಿಮ್ಮಲ್ಲೂ ಈ ತರ ಫ್ರೆಂಡ್ಸ್ ಇದ್ದಾರಾ? ಎಂದು ನೆಟ್ಟಿಗರಿಗೆ ಪ್ರಶ್ನೆ ಮಾಡಿದ್ದಾರೆ. ಹಿತೇಷ್ ವಿಡಿಯೋ ಮಾಡುತ್ತಿರುವುದನ್ನು ನೋಡಿ ಸುಶ್ಮಿತಾ ಶಾಕ್ ಆಗಿದ್ದಾರೆ.
ಸುಶ್ಮಿತಾ ಮತ್ತು ಜಗಪ್ಪ ಲವ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಸುಳ್ಳುವ ನಾವಿಬ್ಬರು ಸ್ನೇಹಿತರು ಎಂದಿದ್ದರು. ಈಗ ಒಟ್ಟಿಗೆ ಕುಳಿತಿರುವುದನ್ನು ನೋಡಿ ಶಾಕ್ ಆಗಿದ್ದಾರೆ ಫ್ಯಾನ್ಸ್.