ಲಕ್ಷ್ಮೀ ಬಾರಮ್ಮ ನಟಿ ಹರ್ಷಿತಾ ಸೀಮಂತದಲ್ಲಿ ಮಿಂಚಿದ ಮಜಾ ಭಾರತ ಕಲಾವಿದರು
ಲಕ್ಷ್ಮೀ ಬಾರಮ್ಮ, ಶ್ರಾವಣಿ ಸುಬ್ರಹ್ಮಣ್ಯ ಹಾಗೂ ರಾಧಿಕಾ ಸೀರಿಯಲ್ ನಟಿ ಹರ್ಷಿತಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ಮಜಾ ಭಾರತದ ಕಲಾವಿದರು ಆಗಮಿಸಿದ್ದರು.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ (Lakshmi Baramma serial) ಗಂಗಕ್ಕಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಹರ್ಷಿತಾ ತುಂಬು ಗರ್ಭಿಣಿಯಾಗಿದ್ದು ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಕೂಡ ನಡೆದಿತ್ತು.
ನಟಿ ಹರ್ಷಿತಾ (Harshitha) ಅವರು ಲಕ್ಷ್ಮಿ ಬಾರಮ್ಮ, ಶ್ರಾವಣಿ ಸುಬ್ರಹ್ಮಣ್ಯ ಹಾಗೂ ರಾಧಿಕಾ ಸೀರಿಯಲ್ ನಲ್ಲಿ ನಟಿಸಿದ್ದರು. ಎಲ್ಲಾ ಸೀರಿಯಲ್ ಗಳು ಹರ್ಷಿತಾ ಅವರು ತಮ್ಮ ಕಾಮಿಡಿ ಮೂಲಕ ಗಮನ ಸೆಳೆದಿದ್ದರು.
ಹರ್ಷೀತಾ ಅವರು ಸೀರಿಯಲ್ ಗಳಲ್ಲಿ ನಟಿಸುವ ಮೊದಲು ‘ಮಜಾಭಾರತ’ ಎನ್ನುವ ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಇದರ ನಂತರವೇ ಹರ್ಷಿತಾಗೆ ಸೀರಿಯಲ್ ಅವಕಾಶಗಳು ಒಂದಾದ ಮೇಲೆ ಒಂದು ಹುಡುಕಿಕೊಂಡು ಬಂತು.
ಹರ್ಷಿತಾ ಅವರ ಪತಿ ಸಂದೀಪ್ ಆಚಾರ್ (Sandeep Achar) ಅವರು ರೈಟರ್ ಆಗಿದ್ದು, ಅವರು ಮಜಾಭಾರತ ಸೇರಿ ಹಲವು ಕಾಮಿಡಿ ಶೋಗಳಲ್ಲಿ ನಾಟಕಗಳಿಗೆ ಸ್ಕ್ರೀಪ್ಟ್ ಬರೆಯುತ್ತಿದ್ದರು. ಹಾಗಾಗಿ ಸೀಮಂತ ಕಾರ್ಯಕ್ರಮಕ್ಕೆ ಮಜಾಭಾರತ ಕಲಾವಿದರೂ ಆಗಮಿಸಿದ್ದರು.
ಮಜಾ ಭಾರತದ ಕಾಮಿಡಿ ಕಲಾವಿದರಾದ ರಾಘವೇಂದ್ರ (Raghavendra), ಸುಷ್ಮಿತಾ ಜಗಪ್ಪ ಹಾಗೂ ಮಾನಸಾ ಮೊದಲಾದವರು ಆಗಮಿಸಿ, ಹರ್ಷಿತಾಗೆ ಶುಭ ಕೋರಿದ್ದಾರೆ.
ಹರ್ಷಿತಾ ಈ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಸ್ನೇಹಿತರ ಪ್ರೀತಿಗೆ ಮನಸೋತಿದ್ದಾರೆ. ಸುಷ್ಮಿತಾ (Sushmita Jaggappa)ಮತ್ತು ಮಾನಸಾ ಹರ್ಷಿತಾ ಕೈಗೆ ಬಳೆ ತೊಡಿಸಿ, ಉಡುಗೊರೆ ನೀಡಿ ಸಂಭ್ರಮಿಸಿದ್ದಾರೆ.
ಹರ್ಷಿತಾ ಅವರು ಮಧುಗಿರಿಯ ಹುಡುಗಿಯಾಗಿದ್ದು, ಅವರ ಪತಿ ಸಂದೀಪ್ ಮಂಗಳೂರಿನವರಾಗಿದ್ದಾರೆ. ಹಾಗಾಗಿ ಅವರ ಸೀಮಂತವನ್ನು ಮಂಗಳೂರಿನ ಸಂಪ್ರದಾಯದಲ್ಲಿ ಮಾಡಲಾಗಿತ್ತು.
ಪ್ರೆಗ್ನೆನ್ಸಿ ಕಾರಣದಿಂದ ಹರ್ಷಿತಾ ಶ್ರಾವಣಿ ಸುಬ್ರಹ್ಮಣ್ಯದ ಧನಲಕ್ಷ್ಮೀ ಪಾತ್ರದಿಂದ ಹೊರ ಬಂದಿದ್ದರು. ಸದ್ಯ ಪ್ರೆಗ್ನೆನ್ಸಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ ಹರ್ಷಿತಾ.