- Home
- Entertainment
- TV Talk
- Harshitha Baby Bump: ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ನಟಿ…. ಪತಿ ಜೊತೆ ಮುದ್ದಾದ ಫೋಟೊ ಶೂಟ್
Harshitha Baby Bump: ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ನಟಿ…. ಪತಿ ಜೊತೆ ಮುದ್ದಾದ ಫೋಟೊ ಶೂಟ್
ಕನ್ನಡ ಕಿರುತೆರೆಯಲ್ಲಿ ಹಲವು ಸೀರಿಯಲ್ ಗಳಲ್ಲಿ ನಟಿಸಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಗಂಗಕ್ಕ ಆಗಿ ಮಿಂಚಿದ ನಟಿ ಹರ್ಷಿತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗಂಗಕ್ಕ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ಹರ್ಷಿತಾ, ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ.
ಗರ್ಭಿಣಿಯಾದ ಬಳಿಕ ಇದೀಗ ಮೊದಲ ಬಾರಿ ಹರ್ಷಿತಾ (Actress Hasrshitha) ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ತಮ್ಮ ಇನ್;ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ. ತಮ್ಮ ಪತಿ ಜೊತೆ ತುಂಬಾನೆ ಮುದ್ದಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಅಭಿಮಾನಿಗಳು ನಟಿಗೆ ಶುಭಾಶಯ ತಿಳಿಸಿದ್ದಾರೆ.
ಹರ್ಷಿತಾ ಪ್ಲೋರಲ್ ಬಾರ್ಡರ್ ಇರುವ ಕೆಂಪು ಬಣ್ಣದ ಜರಿ ಸೀರೆಯುಟ್ಟು, ಅದರ ಜೊತೆಗೆ ಆಫ್ ವೈಟ್ ಬ್ಲೌಸ್ ಧರಿಸಿದ್ದು, ಸಿಂಪಲ್ ಆಗಿ, ಕರಿಮಣಿ, ಹವಳದ ಸರ ಧರಿಸಿ ಪೋಸ್ ಕೊಟ್ಟಿದ್ದಾರೆ. ಹರ್ಷಿತಾ ಮುಖದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿದೆ.
ಹರ್ಷಿತಾ ಲಕ್ಷ್ಮೀ ಬಾರಮ್ಮ ಸೀರಿಯಲ್ ನಿಂದ ಅರ್ಧದಿಂದಲೇ ಹೊರ ಬಂದಿದ್ದರು. ಆದರೂ ಇಂದಿಗೂ ಜನ ಅವರನ್ನು ಗಂಗಕ್ಕಾ ಎಂದೇ ಗುರುತಿಸುತ್ತಾರೆ. ಇದಾದ ಬಳಿಕ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಗರ್ಭಿಣಿಯಾದ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಹೊರ ನಡೆದಿದ್ದರು.
ಹರ್ಷಿತಾ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿಯವರು. ಇವರು ಮಜಾ ಭಾರತ ರಿಯಾಲಿಟಿ ಶೋ, ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ, ಝೀ ಕನ್ನಡದ ಶ್ರಾವಣಿ ಸುಬ್ರಮಣ್ಯ, ಉದಯ ಟಿವಿಯ ಸುಂದರಿ, ರಾಧಿಕಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲ ಹರ್ಷಿತಾ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆಗೆ ಗಜಾನನ ಅಂಡ್ ಗ್ಯಾಂಗ್' ಎನ್ನುವ ಕನ್ನಡ ಸಿನಿಮಾದಲ್ಲೂ ಹರ್ಷಿತಾ ನಟಿಸಿದ್ದರು.
ಹರ್ಷಿತಾ ಅವರ ಪತಿ ಸಂದೀಪ್ ವಿ ಆಚಾರ್ ಸಹ ಕಿರುತೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಕಾಮಿಡಿ ಶೋಗಳಲ್ಲಿ ಸ್ಕಿಟ್ ಗಳಿಗೆ ಸ್ಕ್ರಿಪ್ಟ್ ಬರೆದು, ಅತ್ಯುತ್ತಮವಾಗಿ ಮೂಡಿ ಬರುವಂತೆ ಮಾಡಿದ್ದಾರೆ.