ಒನಕೆ ಓಬವ್ವನಾ ಅನ್ನೋ ಬದ್ಲು ರೇಣುಕಾಸ್ವಾಮಿನಾ ಅಂತಾರೆ: 'ಮಹಾನಟಿ' ಗಗನಾ ಫುಲ್ ಗರಂ!
ಒನಕೆ ಓಬವ್ವನಾ ಅನ್ನೋ ಬದ್ಲು ರೇಣುಕಾಸ್ವಾಮಿನಾ ಅಂತಾರೆ ಎನ್ನುತ್ತಲೇ 'ಮಹಾನಟಿ' ಗಗನಾ ಫುಲ್ ಗರಂ ಆಗಿದ್ಯಾಕೆ? ಅವರು ಹೇಳಿದ್ದೇನು?

ಚಿತ್ರದುರ್ಗದ ಗಗನಾ
ಸದ್ಯ ಭರ್ಜರಿ ಬ್ಯಾಚುಲರ್ಸ್ನಲ್ಲಿ ಡ್ರೋನ್ ಪ್ರತಾಪ್ ಜೊತೆ ಉತ್ತಮ ಪರ್ಫಾಮೆನ್ಸ್ ಕೊಟ್ಟು ರನ್ನರ್ ಅಪ್ ಆಗಿ ಮಿಂಚಿದವರು ಚಿತ್ರದುರ್ಗದ ಗಗನಾ. ಮಹಾನಟಿಯ ಮೊದಲ ಸೀಸನ್ ಮೂಲಕ ಜನರಿಗೆ ಪರಿಚಯವಾಗಿದ್ದ ನಟಿ ಕೊನೆಗೆ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼನಲ್ಲಿಯೂ ಕಾಣಿಸಿಕೊಂಡಿದ್ದರು. ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದ್ದು, 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2'ನಲ್ಲಿ ಡ್ರೋನ್ ಪ್ರತಾಪ್ ಮತ್ತು ಗಗನಾ ಸಕತ್ ಹವಾ ಸೃಷ್ಟಿಸಿದ್ದರು.
ಮುಗ್ಧ ಮಾತುಗಳಿಂದಲೇ ಜನಪ್ರಿಯತೆ
ಅಷ್ಟಕ್ಕೂ ಗಗನಾ ಮಹಾನಟಿ ರಿಯಾಲಿಟಿ ಶೋನಲ್ಲಿ ( Mahanati reality show)ತಮ್ಮ ಮುಗ್ಧ ಮಾತುಗಳಿಂದಲೇ ಜನಪ್ರಿಯತೆ ಪಡೆದರು. ಆದಾದ ಬಳಿಕ ನಿರಂತರವಾಗಿ ಒಂದಲ್ಲ ಒಂದು ಶೋಗಳಲ್ಲಿ ಗಗನಾಗೆ ಅವಕಾಶಗಳು ದೊರೆಯುತ್ತಾ ಬಂದವು. ಝೀ ಕನ್ನಡದ ಅವಕಾಶಗಳಿಂದಾಗಿ ಗಗನಾ ತಾವು ಕೆಲಸ ಮಾಡುತ್ತಿದ್ದ ಐಟಿ ಕಂಪೆನಿಯ ಕೆಲಸವನ್ನೇ ಬಿಟ್ಟಿದ್ದರು.
ಜನರ ರಿಯಾಕ್ಷನ್ಗೆ ಬೇಸರ
ಇದೀಗ ಗಗನಾ ಅವರು ಸೆಲೆಬ್ರಿಟಿ ಆಗಿರೋ ಕಾರಣದಿಂದ ಅವರಿಗೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಇದೇ ಕಾರಣಕ್ಕೆ ಹೋದಲ್ಲಿ, ಬಂದಲ್ಲಿ ಅವರನ್ನು ಮಾತನಾಡಿಸಲಾಗುತ್ತಿದೆ. ಈ ಖುಷಿ ನಟಿಗೆ ಇದ್ದರೂ, ತಮ್ಮ ಊರು ಚಿತ್ರದುರ್ಗದ ಹೆಸರು ಹೇಳಿದಾಗ, ಜನರು ರಿಯಾಕ್ಟ್ ಮಾಡುವುದನ್ನು ನೋಡಿ ಗಗನಾ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿನ ಊರಾ ಕೇಳ್ತಾರೆ...
FDFS ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು, ನನ್ನ ಊರಿನ ಬಗ್ಗೆ ತುಂಬಾ ಹೆಮ್ಮೆ ಇದೆ. ಒನಕೆ ಓಬವ್ವನಂಥ ವೀರ ಮಹಿಳೆಯ ಊರದು. ಇಷ್ಟು ವರ್ಷ ಚಿತ್ರದುರ್ಗ ಎಂದರೆ ಸಾಕು ಒನಕೆ ಓಬವ್ವಾ ಎನ್ನುತ್ತಿದ್ದರು. ಆದರೆ ಈಗ ಒಹೊ ರೇಣುಕಾಸ್ವಾಮಿ ಊರಾ ಎಂದು ಕೇಳುತ್ತಾರೆ. ನನಗೆ ತುಂಬಾ ಬೇಸರವಾಗುತ್ತದೆ. ಈ ಚಿತ್ರ ನನ್ನನ್ನು ನೆಗೆಟಿವ್ ರೀತಿ ನೋಡ್ತಾ ಇರೋದು ತುಂಬಾ ನೋವು ಕೊಡುತ್ತಿದೆ ಎಂದಿದ್ದಾರೆ.
ರೇಣುಕಾಸ್ವಾಮಿ ಕುರಿತು ಗಗನಾ
ದರ್ಶನ್ ಅವರು ರೇಣುಕಾಸ್ವಾಮಿಗೆ ಏನು ಮಾಡಿದ್ದಾರೆ, ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಏಕೆಂದರೆ ನಾನು ಅಲ್ಲಿ ಇರಲಿಲ್ಲ. ಅದರ ಬಗ್ಗೆ ನಾನೇನೂ ಹೇಳುವುದಿಲ್ಲ. ಆ ವಿಷಯಕ್ಕೂ ನನಗೂ ಸಂಬಂಧವಿಲ್ಲ. ಆದರೆ, ನನ್ನನ್ನು ರೇಣುಕಾಸ್ವಾಮಿಯ ಊರಿನವರಾ ಎಂದು ಪ್ರಶ್ನಿಸುವುದನ್ನು ಮಾತ್ರ ನನ್ನಿಂದ ಕೇಳಲು ಆಗುತ್ತಿಲ್ಲ ಎಂದಿದ್ದಾರೆ.
ಹೊಸ ಧಾರಾವಾಹಿಯಲ್ಲಿ ನಾಯಕಿ
ಇನ್ನು ಗಗನಾ ಕುರಿತು ಹೇಳುವುದಾದರೆ, ಅವರು ಈಗ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ʻರಾಜಕುಮಾರಿʼ ಎಂಬ ಹೆಸರಿನಲ್ಲಿ ಸೀರಿಯಲ್ ಇದಾಗಿದ್ದು, ಇದಾಗಲೇ ಪ್ರೋಮೋ ರಿಲೀಸ್ ಆಗಿದೆ. ʻಈ ನಗುಮೊಗದ ಅರಸಿಗೆ ಸಿಹಿ ಹಂಚೋದೆ ಕನಸು ಬರ್ತಿದ್ದಾಳೆ ರಾಜಕುಮಾರಿ, ಶೀಘ್ರದಲ್ಲಿʼ ಎನ್ನುವ ಮೂಲಕ ʻಜೀ ಪಿಚ್ಚರ್ʼ ಪ್ರೊಮೋ ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಗಗನಾ, ಪಕ್ಕಾ ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈಕಲ್ ಸವಾರಿ ಮಾಡಿದ್ದಾರೆ.
ದರ್ಶನ್ ಬಗ್ಗೆ ಮಾತನಾಡಿದ ಗಗನಾ
ಈ ಹಿಂದೆಯೂ ಇವರು ದರ್ಶನ್ ಬಗ್ಗೆ ಮಾತನಾಡಿದ್ದರು. ದರ್ಶನ್ ಅವರನ್ನು ಹಾಡಿ ಹೊಗಳಿದ್ದರು. ಸದ್ಯ ಅವರಿಗೆ ಕೆಟ್ಟಕಾಲವಿದೆ ಅಷ್ಟೇ. ಆರುವ ಮೊದಲು ದೀಪಾ ಜೋರಾಗಿ ಉರಿಯುತ್ತದೆ, ಆರಿದ ಬಳಿಕ ಮತ್ತೆ ಚೆನ್ನಾಗಿ ಉರಿಯುತ್ತದೆ ಎಂದು ತಮ್ಮದೇ ಆದ ಗಾದೆಯನ್ನುಹೇಳುವ ಮೂಲಕ, ದರ್ಶನ್ ಅವರು ಮತ್ತೆ ಬಲಿಷ್ಠರಾಗಿ ಬರುತ್ತಾರೆ ಎಂದು ಹೇಳಿದ್ದರು.
ದರ್ಶನ್ ಚಿತ್ರದಲ್ಲಿ ನಟಿಸುವ ಅವಕಾಶ
ದರ್ಶನ್ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ, ನಾಯಕಿ, ತಂಗಿ... ಹೀಗೆ ಯಾವ ರೋಲ್ ಮಾಡುತ್ತೀರಿ ಎನ್ನುವ ಪ್ರಶ್ನೆಗೆ, ಅದು ತುಂಬಾ ದೊಡ್ಡ ಮಾತು. ಅವರ ಸೆಲ್ಫೀ ಸಿಕ್ಕರೆ ಸಾಕು, ಅದೇ ನನ್ನ ಪುಣ್ಯ. ಅವರ ಜೊತೆ ನಟಿಸುವುದು ನಾನು ಕನಸಿನಲ್ಲಿಯೂ ಊಹಿಸಿಕೊಳ್ಳಲು ಆಗದ್ದು ಎಂದಿದ್ದಾರೆ. ಇದೇ ವೇಳೆ ತಂಗಿಯ ಪಾತ್ರ ಮಾಡುವುದಿಲ್ಲ ಎನ್ನುವ ಮೂಲಕ ದರ್ಶನ್ ಅವರಿಗೆ ನಾಯಕಿಯಾಗಿ ಮಾಡಲು ಸಿದ್ಧ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.