ಯಜಮಾನ ಧಾರಾವಾಹಿಯಲ್ಲಿ ಗಂಡಸರನ್ನು ದ್ವೇಷಿಸಲು ಝಾನ್ಸಿ ಪಡೆಯುವ ಸಂಭಾವನೆ ಎಷ್ಟು?
ಕಲರ್ಸ್ ಕನ್ನಡದ 'ಯಜಮಾನ' ಧಾರಾವಾಹಿಯಲ್ಲಿ ಝಾನ್ಸಿ ಪಾತ್ರದ ಮೂಲಕ ಮಧುಶ್ರೀ ಬೈರಪ್ಪ ಜನಪ್ರಿಯತೆ ಗಳಿಸಿದ್ದಾರೆ. ಧಾರಾವಾಹಿಯಲ್ಲಿನ ಸಂಭಾವನೆ ಬಗ್ಗೆ ಮಧುಶ್ರೀ ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಬಹುಬೇಗನೇ ಅಭಿಮಾನಿಗಳನ್ನು ತನ್ನತ್ತ ಸೆಳೆದ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ 'ಯಜಮಾನ' ಕೂಡ ಒಂದು. ಇದರಲ್ಲಿ ಕೋಟ್ಯಾಧಿಪತಿ ಕುಟುಂಬದ ಏಕೈಕ ಮೊಮ್ಮಗಳು ಆಗಿರುವ ಝಾನ್ಸಿಯ ತುಂಡುಡುಗೆ ಹಾಗೂ ಬೋಲ್ಡ್ ನಟನೆಯಿಂದ ಸಾಕಷ್ಟು ಯುವಜನು ಆಕೆಯ ಅಭಿಮಾನಿ ಆಗಿದ್ದಾರೆ.
ಮಧುಶ್ರೀ ಕಿರುತೆರೆಗೆ ಬರುವುದಕ್ಕೂ ಮೊದಲೇ, ಇನ್ಫ್ಲ್ಯೂಎನ್ಸರ್ ಆಗಿ, ರೀಲ್ಸ್, ಯೂಟ್ಯೂಬ್ ಚಾನೆಲ್ ನಡೆಸುತ್ತಾ ಮತ್ತು ಬ್ರ್ಯಾಂಡ್ ಪ್ರಮೋಶನ್ ಮಾಡುತ್ತಿದ್ದರು. ಇದೀಗ ಧಾರಾವಾಹಿಯ ಜೊತೆಗೆ ಬ್ರ್ಯಾಂಡ್ ಶೂಟ್ಸ್ ಹಾಗೂ ಇನ್ಫ್ಲ್ಯೂಎನ್ಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಯಜಮಾನ ಧಾರಾವಾಹಿಯಲ್ಲಿ ಕೋಟ್ಯಧಿಪತಿ ಆಗಿರುವ ಝಾನ್ಸಿ ಧಾರಾವಾಹಿ ಪಾತ್ರಕ್ಕೆ ಪಡೆಯುವ ಸಂಭಾವನೆ ಇದೀಗ ಅವಳೇ ರಿವೀಲ್ ಮಾಡಿದ್ದಾಳೆ.
ಆದರೆ, ಈ ಝಾನ್ಸಿ ಪಾತ್ರ ಮಾಡುತ್ತಿರುವ ಹುಡುಗಿ ಮಧುಶ್ರೀ ಬೈರಪ್ಪ (Madhushree Byrappa) ಸೋಶಿಯಲ್ ಮಿಡಿಯಾ ಇನ್ಫ್ಲ್ಯೂಎನ್ಸರ್ ಆಗುವುದಕ್ಕೂ ಮುನ್ನವೇ ಡ್ಯಾನ್ಸರ್ ಆಗಿದ್ದಾಳೆ. ಎರಡು ವರ್ಷ ಸತತವಾಗಿ ಡ್ಯಾನ್ಸ್ ಕಲಿಯುವ ಮೂಲಕ ಉತ್ತಮ ಡ್ಯಾನ್ಸರ್ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ. ಹೀಗಾಗಿ, ಧಾರಾವಾಹಿಗೂ ಮುನ್ನ ಇನ್ಸ್ಟಾಗ್ರಾಮ್ ರೀಲ್ಸ್, ಮೇಕ್ ಓವರ್ ಮತ್ತು ಬ್ರ್ಯಾಂಡ್ ಪ್ರಮೋಶನ್‌ಗಳಿಂದ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದರು ಎಂಬುದನ್ನು ಸ್ವತಃ ಮಧುಶ್ರೀ ಹೇಳಿಕೊಂಡಿದ್ದಾರೆ.
ಹೀಗಾಗಿ, ಮಧುಶ್ರೀ ಸಂಪೂರ್ಣವಾಗಿ ಸೋಶಿಯಲ್ ಮೀಡಿಯಾ ಮೇಲೆ ಡಿಪೆಂಡೆಂಟ್ ಆಗಿದ್ದಾಳೆ ಎಂದರೂ ತಪ್ಪಾಗಲಾರದು. ರೀಲ್ಸ್ ಸ್ಟಾರ್ ಆಗಿದ್ದ ಮಧುಶ್ರೀ ಬೈರಪ್ಪ ಅವರು ಕೂಡ ಸೋಶಿಯಲ್ ಮೀಡಿಯಾದಿಂದ ಒಳ್ಳೆಯ ಸಂಪಾದನೆ ಮಾಡುತ್ತಿದ್ದು, ಆಕೆಯ ಸ್ಟೈಲಿಶ್ ಲುಕ್‌ನಿಂದಾಗಿ ಕಿರುತೆರೆಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾಳೆ.
ಇದನ್ನೂ ಓದಿ: 'ಯಜಮಾನ' ಸೀರಿಯಲ್ ಮೊದಲರಾತ್ರಿ ಶೂಟಿಂಗ್ನಲ್ಲಿ ತೆರೆಮರೆಯಲ್ಲಿ ನಡೆದದ್ದೇನು? ವಿಡಿಯೋ ವೈರಲ್
ಯಜಮಾನ ಧಾರಾವಾಹಿಯ ಝಾನ್ಸಿ ಪಾತ್ರಕ್ಕೆ ಎಷ್ಟು ಸಂಭಾವನೆ ಕೊಡಲಾಗುತ್ತದೆ ಎಂಬುದರ ಬಗ್ಗೆ ಖಾಸಗಿ ವಾಹಿನಿಯೊಂದರ ಜೊತೆಗೆ ಮಾತನಾಡಿದ ಮಧುಶ್ರೀ ಬೈರಪ್ಪ, ನನ್ನ ಮಾತ್ರ ನೋಡುಗರಿಗೆ ಇಷ್ಟವಾಗುತ್ತಿದೆ. ಅಲ್ಲದೇ ಬೋಲ್ಡ್ & ಖಡಕ್ ಆಗಿರುವ ʻಝಾನ್ಸಿʼ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ಝಾನ್ಸಿ ಪಾತ್ರವೇ ಯಜಮಾನ ಧಾರಾವಾಹಿಯಲ್ಲಿ ಈ ಪಾತ್ರವೇ ಲೀಡ್ ರೋಲ್ ಹೊಂದಿದೆ. ಆದರೆ, 'ಝಾನ್ಸಿ ಪಾತ್ರಕ್ಕೆ ನಾನು ಪಡೆಯುತ್ತಿರುವ ಸಂಭಾವನೆ ಬಗ್ಗೆ ಖುಷಿಯಿದೆ, ಆದರೆ ಎಷ್ಟು ಅಂತ ರಿವೀಲ್ ಮಾಡುವುದಕ್ಕೆ ಆಗಲ್ಲ' ಎಂದು ತಿಳಿಸಿದ್ದಾರೆ. ಆದರೆ, ವಾರಕ್ಕೆ ಲಕ್ಷಗಳಲ್ಲಿ ಸಂಭಾವನೆ ಪಡೆಯುತ್ತಿರುವುದನ್ನು ಮಾತ್ರ ಅಲ್ಲಗಳೆದಿಲ್ಲ.
ಇದನ್ನೂ ಓದಿ: ಮೇ 9 ರಿಂದ 'ಸೂತ್ರಧಾರಿ' ಆಗಲಿರುವ ಚಂದನ್ ಶೆಟ್ಟಿ.. ಅಪೂರ್ವ-ಸಂಜನಾ ಜೊತೆ ಮಸ್ತ್ ಡ್ಯೂಯೆಟ್!