- Home
- Entertainment
- TV Talk
- ‘ಇವರದ್ದೇ ದರ್ಬಾರು'...'ಲಕ್ಷ್ಮೀ ನಿವಾಸ'ದ ಈ ದೃಶ್ಯ ನೋಡಿ ಪಿತ್ತ ನೆತ್ತಿಗೇರಿಸಿಕೊಂಡ ಫ್ಯಾನ್ಸ್
‘ಇವರದ್ದೇ ದರ್ಬಾರು'...'ಲಕ್ಷ್ಮೀ ನಿವಾಸ'ದ ಈ ದೃಶ್ಯ ನೋಡಿ ಪಿತ್ತ ನೆತ್ತಿಗೇರಿಸಿಕೊಂಡ ಫ್ಯಾನ್ಸ್
Lakshmi Nivasa Serial: ಇತ್ತೀಚಿನ ದಿನಗಳಲ್ಲಿಯಂತೂ ಮನೆಯಲ್ಲಿ ಈಕೆಯದ್ದೇ ಮೇಲುಗೈ. ಇವಳ ಮಾತು ಕೇಳುತ್ತಾ ಬಂದಿರುವ ಅದೇ ಮನೆಯವರು ಸ್ವಲ್ಪವೂ ವಿವೇಚನೆಯಿಲ್ಲದೆ ಆಕೆ ಹೇಳಿದ ಮಾತು ಕೇಳುತ್ತಾ ಭಾವನಾಳಿಗೆ ವಿವಿಧ ರೀತಿ ಟಾರ್ಚರ್ ಮಾಡುತ್ತಿದ್ದಾರೆ.

ಬೇಸತ್ತ ವೀಕ್ಷಕರು
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸಿದ್ದೇಗೌಡರ ಮನೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಬೇಸತ್ತಿದ್ದಾರೆ. ಭಾವನಾ ನೋಡಿದ್ರೆ ಸಾಕು ಅತ್ತೆ, ಮಾವ, ಅಜ್ಜಿ ಎಲ್ಲರೂ ಸಿಡುಕುವುದು ಹೊಸತೇನಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಇದ್ಯಾಕೋ ಅತಿಯಾಗಿ ಹೋಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಭಾವನಾ ಗೋಳು ಹೊಯ್ದು ಕೊಳ್ಳುವುದೇ ಒಂದು ಉದ್ಯೋಗದಂತಾಗಿದೆ. ಇದನ್ನೆಲ್ಲಾ ನೋಡಿ ಬೇಸತ್ತ ವೀಕ್ಷಕರು ಯದ್ವಾ ತದ್ವಾ ಬಯ್ಯುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂತ ನೀವೇ ನೋಡಿ…
ವಿವಿಧ ರೀತಿ ಟಾರ್ಚರ್
ಮೊದಲಿನಿಂದಲೂ ಭಾವನಾ ಕಂಡರೇನೇ ಸಿದ್ದೇಗೌಡನ ಅತ್ತಿಗೆ ನೀಲುಗೆ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿಯಂತೂ ಮನೆಯಲ್ಲಿ ಈಕೆಯದ್ದೇ ಮೇಲುಗೈ. ಇವಳ ಮಾತು ಕೇಳುತ್ತಾ ಬಂದಿರುವ ಅದೇ ಮನೆಯವರು ಸ್ವಲ್ಪವೂ ವಿವೇಚನೆಯಿಲ್ಲದೆ ಆಕೆ ಹೇಳಿದ ಮಾತು ಕೇಳುತ್ತಾ ಭಾವನಾಳಿಗೆ ವಿವಿಧ ರೀತಿ ಟಾರ್ಚರ್ ಮಾಡುತ್ತಿದ್ದಾರೆ.
ಮನೆಯಿಂದ ಆಚೆ ಹಾಕುವ ಪ್ರಯತ್ನ
ನಿಮಗೆಲ್ಲರಿಗೂ ತಿಳಿದಿರುವಂತೆ ಸಿದ್ದೇಗೌಡನ ಅಪ್ಪ ರಾಜಕಾರಣಿ. ದೇವರ ಮೇಲೆ ನಂಬಿಕೆ ಜಾಸ್ತಿ. ಹಿತ್ತಾಳೆ ಕಿವಿ ಬೇರೆ. ಇದನ್ನೇ ಬಂಡವಾಳ ಮಾಡಿಕೊಂಡ ಮೊದಲನೇಯ ಸೊಸೆ ಮಾವನ ಕಿವಿಗೆ ಇಲ್ಲಸಲ್ಲದ್ದನ್ನು ಊದಿದ್ದೇ ಊದಿದ್ದು. ಅದನ್ನ ನಂಬಿ ಈಗ ಭಾವನಾ-ಸಿದ್ದೇಗೌಡರನ್ನು ದೂರ ಮಾಡಿ, ಭಾವನಾಳನ್ನು ಮನೆಯಿಂದ ಆಚೆ ಹಾಕುವ ಪ್ರಯತ್ನ ನಡೆಯುತ್ತಲೇ ಇದೆ.
ಮನೆಯಲ್ಲಿ ಪೂಜೆ
ಇಷ್ಟು ದಿನ ಭಾವನಾಗೆ ಒಂದು ವ್ರತ ಮಾಡುವಂತೆ ಹೇಳಲಾಗಿತ್ತು. ಅವಳ ಕಷ್ಟ ನೋಡಿದ ಸಿದ್ದೇಗೌಡರು ಭಾವನಾಳ ಜೊತೆಯಲ್ಲಿದ್ದುಕೊಂಡೇ ಹೆಲ್ಪ್ ಮಾಡಿದರು. ಈಗ ಮನೆಯಲ್ಲಿ ಪೂಜೆ ಇಟ್ಟುಕೊಳ್ಳಲಾಗಿದೆ. ಆದರೆ ಸಿದ್ದೇಗೌಡ ಬಿಟ್ಟು ಎಲ್ಲರೂ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಭಾವನಾಳಿಗೆ ಎಲ್ಲ ಕೆಲಸ ಹಚ್ಚಲಾಗುತ್ತಿದೆ. ಈ ಸಂದರ್ಭದಲ್ಲಿ ಅಚನಾಕ್ಕಾಗಿ ಭಾವನಾ ಅಕ್ಷತೆ ತಟ್ಟೆಯ ಸಮೇತ ನೆಲದ ಮೇಲೆ ಬೀಳುತ್ತಾಳೆ.
ಪಿತ್ತ ನೆತ್ತಿಗೇರಿಸಿಕೊಂಡ ವೀಕ್ಷಕರು
ಇದನ್ನೇ ಬಂಡವಾಳ ಮಾಡಿಕೊಂಡ ಅತ್ತೆ, ಮಾವ, ಅಜ್ಜಿ ಎಲ್ಲರೂ ಭಾವನಾಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ಸರತಿ ಸಾಲಿನಲ್ಲಿ ಬಯ್ಯುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ವೀಕ್ಷಕರ ಪಿತ್ತ ನೆತ್ತಿಗೇರಿದ್ದು, ನಿರ್ದೇಶಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ವೀಕ್ಷಕರ ಅನಿಸಿಕೆ ಹೀಗಿದೆ ನೋಡಿ..
ವೀಕ್ಷಕರ ಅನಿಸಿಕೆ
*ಇಂತ ಅತ್ತೆ ಇದ್ರೆ ಸೊಸೆ ಆದವಳ ಜೀವನ ಗೋವಿಂದ. ಭಾವನಾ ಸ್ಟ್ರಾಂಗ್ ಆಗಬೇಕು.
*ಅಯ್ಯೊ ನಿಮ್ಮನೆ ಕಾಯೋಗ ಸ್ಟೋರಿ ಮಾಡೋಕೆ ಆಗಲ್ಲ ಬಿಡಿ ಯಾಕೆ ಸಾಯ್ತಿರಾ.
*ಪುಟ್ಟಕ್ಕನ ಮಕ್ಕಳ ಧಾರಾವಾಹಿಯಲ್ಲಾದ್ರೂ ಸ್ವಲ್ಪ ಅದ್ರೂ ಕಥೆ ಇದೆ. ಜೊತೆಗೆ ಪ್ರಮುಖ ಪಾತ್ರಗಳಿಗೆ ವ್ಯಕ್ತಿತ್ವ, ಗೌರವ,ಘನತೆ ಇದೆ. ಇಲ್ಲಿರೋ ಯಾವ ಪಾತ್ರಕ್ಕೂ ವ್ಯಕ್ತಿತ್ವ ಇಲ್ಲ. ಸುಮ್ನೆ ಬರೆದು ಶಾಯಿ ಖರ್ಚು ಮಾಡಿಕೊಳ್ಳೋ ಬದಲು, ಆ ಸೀರಿಯಲ್‌ಗಿಂತ ಮುಂಚೆ ಇದನ್ನೇ ನಿಲ್ಸಿ.
*ಇಂಥದೇ ಹ*ಲ್ಕಾ ಕೆಲಸಗಳನ್ನೇ ಮಾಡಿ. ಈ ಸೀರಿಯಲ್ ಅಲ್ಲಿ. ದುಷ್ಟತನನ ಮೆರೆಸಿ. ಸಂತೋಷ್ ಹರೀಶ್ ಜಯಂತ್ ರೇಣುಕಾ ಜವರೆ ಗೌಡ ನೀಲು..ಇವರದ್ದೇ ದರ್ಬಾರು ಅಟ್ಟಹಾಸ..NONSENCE ಇದು. Entertainment ಗೋಸ್ಕರ ಫ್ಯಾಮಿಲಿ ಜೊತೆ ನೋಡೋಕೆ ಅಂಥ ತಾನೆ ಮಾಡೋದು ಸೀರಿಯಲ್ನ?, ಎಲ್ಲಿದೆ ಅದು? ಬರೀ ದುಷ್ಟತನನೇ.
*ನೀನು ಒಂದು ಅತ್ತೆನಾ, ನೀವು ಒಂದು ಹೆಣ್ಣು ಅಲ್ವಾ. ಅತ್ತೆ ಅಂದ್ರೆ ತಾಯಿ. ಸೊಸೆ ಆದವಳು ಮಗಳು ಆಗುತ್ತಾಳೆ.
*ಈ ಕಿತ್ತು ಹೋದ ಸೀರಿಯಲ್ ಮುಗಿಸಿದರೆ ಒಳ್ಳೇದು.