Amruthadhare Serial: ಅಷ್ಟು ವರ್ಷಗಳು ಕಳೆದ ಮೇಲೆ ಎಲ್ಲವೂ, ಎಲ್ಲರಲ್ಲೂ ಬದಲಾವಣೆಯಾಗಿದೆ. ಭೂಮಿ ಮಗ ದೊಡ್ಡವನಾಗಿದ್ದಾನೆ. ಭೂಮಿ ಸ್ಟೈಲ್ ಕೂಡ ಚೇಂಜ್ ಆಗಿದೆ. ಹೆಚ್ಚು ಕಡಿಮೆ ಗೌತಮ್ ಮುಖದಲ್ಲೂ ಬದಲಾವಣೆ ನೋಡಬಹುದು. ಆದರೆ…?  

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ನೆಲಕ್ಕೆ ಬಿದ್ದಾಗಲೆಲ್ಲಾ ಎಲ್ರಿಗೂ ಒಂಥರ ಖುಷಿ. ಭೂಮಿಕಾ-ಗೌತಮ್ ಬೇರೆಬೇರೆಯಾಗಲು, ಮನೆ ಬಿಟ್ಟು ಹೋಗಲು ಶಕುಂತಲಾಳೇ ನೇರ ಕಾರಣ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವುದೇ. ಭೂಮಿಕಾ ಮಗು ಹಸುಗೂಸು ಇರುವಾಗಲೇ, ಗೌತಮ್ ಕೆಲಸದ ಮೇಲೆ ವಿದೇಶಕ್ಕೆ ಹೊರಡುವ ವೇಳೆ ಶಕುಂತಲಾ ಟೀಂ ಚೆನ್ನಾಗಿ ಪ್ಲಾನ್ ಮಾಡಿಕೊಂಡು ಭೂಮಿಕಾಳನ್ನ ಉಪಾಯದಿಂದ ಮನೆಯಿಂದ ಆಚೆ ಹಾಕಿತು. ಭೂಮಿಕಾ ಅದೆಷ್ಟೇ ಗಟ್ಟಿಗಿತ್ತಿ ಆದ್ರೂ ಗೌತಮ್ ಹಾಗೂ ತನ್ನ ಮನೆಯವರಿಗೂ ಏನೂ ಆಗಬಾರದೆಂಬ ಒಂದೇ ಕಾರಣಕ್ಕೆ ಮನೆಯಿಂದ ಹೊರನಡೆದಳು.

ಧಾರಾವಾಹಿ ರೋಚಕ ತಿರುವು ಪಡೆದುಕೊಳ್ಳುವುದೇ ಇಲ್ಲಿ. ಗೌತಮ್ ಮನೆಗೆ ವಾಪಾಸ್ ಆಗುತ್ತಿದ್ದಂತೆ ಮನೆಯಲ್ಲಿ ಭೂಮಿಕಾ ಕಾಣಿಸುವುದಿಲ್ಲ. ಆರಂಭದಲ್ಲಿ ಭೂಮಿಕಾ ಮನೆ ಬಿಟ್ಟು ಹೋಗಿದ್ದೇಕೆ ಎಂದು ಸುಳಿವು ಸಿಗುವುದಿಲ್ಲವಾದರೂ, ಕೊನೆಗೆ ಸತ್ಯ ಗೊತ್ತಾಗಿ ಮನೆ, ಆಸ್ತಿ ಎಲ್ಲಾ ಬಿಟ್ಟು ಅವನೂ ಮನೆ ಬಿಟ್ಟು ಆಚೆ ಬರುತ್ತಾನೆ. ಹಾಗೆ ಗೌತಮ್ ಕೂಡ ಮನೆಯಿಂದ ಆಚೆ ಬಂದಾಗ ನೇರವಾಗಿ ನಮಗೆ ಐದು ವರ್ಷಗಳ ನಂತರ ಧಾರಾವಾಹಿಯಲ್ಲಿ ಏನಾಗುತ್ತಿದೆ ಎಂಬುದನ್ನ ತೋರಿಸುತ್ತಾರೆ. ಅಷ್ಟು ವರ್ಷಗಳು ಕಳೆದ ಮೇಲೆ ಎಲ್ಲವೂ, ಎಲ್ಲರಲ್ಲೂ ಬದಲಾವಣೆಯಾಗಿದೆ. ಭೂಮಿ ಮಗ ದೊಡ್ಡವನಾಗಿದ್ದಾನೆ. ಭೂಮಿ ಸ್ಟೈಲ್ ಕೂಡ ಚೇಂಜ್ ಆಗಿದೆ. ಇತ್ತ ಭೂಮಿಕಾ ಜೊತೆ ಮಲ್ಲಿ ಇದ್ದಾಳೆ. ಹೆಚ್ಚು ಕಡಿಮೆ ಗೌತಮ್ ಮುಖದಲ್ಲೂ ಬದಲಾವಣೆ ನೋಡಬಹುದು.

ವಯಸ್ಸೇ ಆಗುತ್ತಾ ಇಲ್ವಾ?

ಅಂತೂ ಗೌತಮ್ ಊರುರು ಅಲೆಯುತ್ತಾ ಭೂಮಿಕಾಳನ್ನು ಹುಡುಕಿದ್ದಾಯ್ತು. ಈಗ ಮಗಳು ಸಿಕ್ಕರೂ ಅವಳು ತನ್ನ ಮಗಳು ಎಂಬ ಅರಿವು ಗೌತಮ್‌ಗಿಲ್ಲ. ಮುಂದೇನಾಗುತ್ತದೆ ಎಂಬುದು ಕಾದು ನೋಡಬೇಕು. ಆದರೆ ಇನ್ನು ಆಸ್ತಿ ಹಕ್ಕು ಶಕುಂತಲಾ ಮತ್ತು ಮಗ ಜೈದೇವ್ ಕೈ ಸೇರಿಲ್ಲ. ಹಾಗಾಗಿ ಲಾಯರ್‌ ಹೇಳಿದಂತೆ ಇಬ್ಬರೂ ಈಗ ಭೂಮಿಕಾಳನ್ನು ಹುಡುಕಿ ಸಹಿ ತೆಗೆದುಕೊಳ್ಳಲು ಪ್ಲಾನ್ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿರುವ ವೀಕ್ಷಕರಿಗೆ ಆಸ್ತಿಗಾಗಿ ಶಕುಂತಲಾ ಪ್ಲಾನ್ ಮಾಡುವುದು ಒಂದು ಕಡೆ ಇರಲಿ, ಧಾರಾವಾಹಿಯಲ್ಲಿ ವರ್ಷಗಳೇ ಉರುಳಿದರೂ ಭೂಮಿಗೂ ವಯಸ್ಸಾಯ್ತು, ಗೌತಮಗೂ ವಯಸಾಯ್ತು, ಆದ್ರೆ ಶಕುಂತಲಾ ಮೇಡಂಗೆ ಇನ್ನು ವಯಸ್ಸಾಗಲಿಲ್ಲ, ಅವರಿಗಿನ್ನು ವಯಸ್ಸೇ ಆಗುತ್ತಾ ಇಲ್ವಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸದ್ಯ ವಾಹಿನಿಯು ರಿಲೀಸ್ ಮಾಡಿರುವ ಹೊಸ ಪ್ರೊಮೊದಲ್ಲಿ ಜಯ್‌ದೇವ್ ಮತ್ತು ಶಕುಂತಲಾ ಆಸ್ತಿಗಾಗಿ ಭರ್ಜರಿ ಪ್ಲಾನ್ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಎಂದಿನಂತೆ ಕೇಡಿ ಕೆಲಸಕ್ಕೆ ಅಮ್ಮನ ಸಾಥ್ ಕೇಳುತ್ತಿದ್ದಾನೆ ಜೈದೇವ್. ಆದರೆ ವೀಕ್ಷಕರ ಕಣ್ಣು ಮಾತ್ರ ನೇರವಾಗಿ ಶಕುಂತಲಾ ತಲೆಯ ಮೇಲೆ ನೆಟ್ಟಿದೆ. ಎಂದಿನಂತೆ ಶಕುಂತಲಾ ರೇಷ್ಮೆಸೀರೆಯುಟ್ಟು, ಆಭರಣಗಳನ್ನು ಧರಿಸಿ, ಹೆವಿ ಮೇಕಪ್ ಮಾಡಿಕೊಂಡು ಬಂದಿದ್ದಾಳೆ. ಆದರೆ ಕೂದಲು ಕಪ್ಪು ಮಾತ್ರ ಕಪ್ಪಾಗಿದೆ. ಎಲ್ಲೋ ಒಂದು ಮೂಲೆಯಲ್ಲಿ ಮಾತ್ರ ಚೂರು ಬಿಳಿ ಕೂದಲು ಕಾಣುತ್ತಿದೆ. ಹಾಗಾಗಿ ನೆಟ್ಟಿಗರು ಸಹಜವಾಗಿ ಮೊಮ್ಮಕ್ಕಳ ಕಾಲಕ್ಕೂ ಶಕುಂತಲಾ ಮಾತ್ರ ಇದ್ದ ಹಾಗೆ ಇದ್ದಾರೆ ಎಂದಿದ್ದಾರೆ. ಜೊತೆಗೆ ನೀವು ಈ ಬಾರಿ ಭೂಮಿಕಾ ವಿರುದ್ಧ ಏನೇ ಪ್ಲಾನ್ ಮಾಡಿದ್ರು ಅದು ಫ್ಲಾಪೇ ಅಂದಿದ್ದಾರೆ. ಹಾಗೇ ಮತ್ತೇನೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ ನೋಡೋಣ ಬನ್ನಿ..

ಹೀಗಿದೆ ವೀಕ್ಷಕರ ಕಾಮೆಂಟ್ಸ್ 

*ಭೂಮಿಗೂ ವಯಸ್ಸಾಯ್ತು, ಗೌತಮ್‌ಗೂ ವಯಸಾಯ್ತು. ಆದ್ರೆ ಶಕುಂತಲಾ ಮೇಡಂಗೆ ಇನ್ನು ವಯಸ್ಸಾಗಲಿಲ್ಲ.
*ನೆತ್ತಿ ಮೇಲೆ ಅಷ್ಟೇ ಯಾಕೆ ವೈಟ್ ಆಗಿದೆ ಯಾಕೆ ಹೇರ್ ಡೈ ಖಾಲಿ ಆಯ್ತಾ.
*ಶಕುಂತಲಾ ಮೇಡಂ ಹೊಸ ಸೀರೆ ಹಾಕೊಂಡಿದ್ದಾರೆ.
*ಬೀದಿಗೆ ಬರೋಹಾಗಿದೆ ಆದ್ರೂ ಮನಸ್ಥಿತಿ ಬದಲಾಗಿಲ್ಲ.
*ಆಸ್ತಿ ಕೊಡಲ್ಲ ನಿಮಿಗೆ. ತಾಟ್ ಹಿಡ್ಕೊಂಡು ಹೋಗಿ ನೀವು ಅಮ್ಮ ತಾಯೇ ಭಿಕ್ಷಾಂದೇಹಿ ಅಂತ.
*ಮತ್ತೆ ಈಗ ಶಕ್ಕು ಭೂಮಿಕಾ ಹಿಂದೆ ಬಿದ್ದಳು. ಈ ಸರಿ ತಲೆ ಹರಟೆ ಭೂಮಿಕಾ ಶಕ್ಕು ಇಂದ ತಪ್ಪಿಸಿಕೊಳ್ಳಲು ಭೂ ಗ್ರಹ ಬಿಟ್ಟು ಮಂಗಳ ಗ್ರಹಕ್ಕೆ ಪಲಾಯನ ಮಾಡದಿದ್ದರೆ ಸಾಕು.
*ಚಿಕ್ಕಮಗಳೂರಲ್ಲಿ ಇದ್ದಾಳೆ ನೋಡು ಹುಡುಕು.

View post on Instagram