ಜಾನು ಏನನ್ನು ಮರೆತಿಲ್ಲ ಗುರು! ಜಾಹ್ನವಿಯ ಬದುಕಿಗೆ ಸಿಕ್ತಿದೆ ಮಹಾತಿರುವು!
Lakshmi Nivasa Serial: ಶ್ರೀಲಂಕಾ ಸಮುದ್ರದಲ್ಲಿ ಬಿದ್ದ ಜಾನು ಚೆನ್ನೈ ಕಡಲತೀರದಲ್ಲಿ ಪತ್ತೆಯಾಗಿದ್ದಾಳೆ. ಭಯದಿಂದ ಓಡಿಹೋದ ಜಾನು ವಿಶ್ವನ ತಂದೆ ನರಸಿಂಹಯ್ಯ ಅವರ ಕಾರ್ ಡಿಕ್ಕಿಯಲ್ಲಿ ಅಡಗಿದ್ದಾಳೆ. ಜಾನು ಬದುಕಿನಲ್ಲಿ ಮಹಾತಿರುವು ಸಿಗಲಿದೆ.
15

ಶ್ರೀಲಂಕಾ ಸಮುದ್ರದಲ್ಲಿ ಬಿದ್ದಿದ್ದ ಜಾನು, ಚೆನ್ನೈನ ಕಡಲತೀರದಲ್ಲಿ ಪತ್ತೆಯಾಗಿದ್ದಳು. ಅಲ್ಲಿಯ ಮೀನುಗಾರರು ಜಾಹ್ನವಿಯನ್ನು ರಕ್ಷಣೆ ಮಾಡಿದ್ದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ವಿಶ್ವನ ತಂದೆ ನರಸಿಂಹಯ್ಯ ಪೊಲೀಸರಿಗೆ ಮಾಹಿತಿ ನೀಡಿ ಹೇಳಿ ಎಂದು ಅಲ್ಲಿಯ ಮೀನುಗಾರರಿಗೆ ಹೇಳುತ್ತಾರೆ.
25
Lakshmi Nivasa
ಪ್ರಜ್ಞೆ ಬಂದ ಕೂಡಲೇ, ನಾನಿನ್ನು ಬದುಕಿದ್ದೆನಾ? ಸತ್ತಿಲ್ಲವಾ? ಎಂದು ಜಾನು ಆಶ್ಚರ್ಯಕ್ಕೆ ಒಳಗಾಗುತ್ತಾಳೆ. ಪಕ್ಕದಲ್ಲಿ ಪೊಲೀಸರು ಬರುತ್ತಿರೋದನ್ನು ನೋಡಿದ ಜಾನು, ಮತ್ತೆ ನನ್ನನ್ನು ಗಂಡ ಜಯಂತ್ ಬಳಿ ಕಳುಹಿಸ್ತಾರಾ ಎಂದು ಭಯಗೊಂಡ ಜಾನು ಅಲ್ಲಿಂದ ಓಡಿ ಬಂದಿದ್ದಾಳೆ.
35
ಚಿಕ್ಕ ಬೋಟ್‌ನಲ್ಲಿ ಮಲಗಿದ್ದ ಜಾನು ದಿಡೀರ್ ಅಂತ ಕಾಣಿಸದಿದ್ದಾಗ ಮೀನುಗಾರರು ಮತ್ತು ಪೊಲೀಸರು ಹುಡುಕಲು ಆರಂಭಿಸುತ್ತಾರೆ. ಇತ್ತ ಎಲ್ಲರಿಂದ ತಪ್ಪಿಸಿಕೊಂಡ ಜಾನು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಿಶ್ವನ ತಂದೆ ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದಾಳೆ.
45
ಚೆನ್ನೈ ಬೀಚ್‌ನಿಂದ ನೇರವಾಗಿ ವಿಶ್ವನ ಮನೆ ತಲುಪೋದು ಪಕ್ಕಾ ಆಗಿದೆ. ಆದ್ರೆ ವಿಶ್ವನ ತಂದೆ ಮುಂದೆ ಜಾನು ಏನು ಹೇಳುತ್ತಾಳೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ. ತನ್ನ ಜೊತೆ ವ್ಯವಹಾರ ನಡೆಸುವ ಜಯಂತ್ ಪತ್ನಿಯೇ ಜಾನು ಎಂಬ ವಿಷಯ ವಿಶ್ವನ ತಂದೆಗೂ ಗೊತ್ತಿಲ್ಲ. ಇಲ್ಲಿಂದ ಜಾನು ಬದುಕಿನಲ್ಲಿ ಮಹಾತಿರುವು ಸಿಗಲಿದೆ ಎಂಬ ಸುಳಿವನ್ನು ನಿರ್ದೇಶಕರು ನೀಡಿದ್ದಾರೆ.
55
ಇತ್ತ ಲಕ್ಷ್ಮೀ ನಿವಾಸದಲ್ಲಿ ಜಾನು ಫೋಟೋಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮತ್ತೊಂದೆಡೆ ತನ್ಮೇಲೆ ಯಾವುದೇ ಅನುಮಾನ ಬಂದಿಲ್ಲ ಎಂದು ಜಯಂತ್ ನಿಟ್ಟುಸಿರು ಬಿಟ್ಟಿದ್ದಾನೆ. ಜಾನು ಸಾವನ್ನು ಶ್ರೀನಿವಾಸ್-ಲಕ್ಷ್ಮೀ ಕುಟುಂಬಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇತ್ತ ವೆಂಕಿ ಜೈಲುಪಾಲಾಗಿರುವ ವಿಷಯ ಯಾರ ಗಮನಕ್ಕೂ ಬಂದಿಲ್ಲ. ವೆಂಕಿ ಕಾಣದಿರೋದಕ್ಕೆ ಚೆಲುವಿ ಕಣ್ಣೀರು ಹಾಕುತ್ತಿದ್ದಾಳೆ.
Latest Videos