- Home
- Entertainment
- TV Talk
- Lakshmi Nivasa: ರೀ... ರೀ... ಅಂತಿದ್ದ ಚಿನ್ನುಮರಿ ಈಗ ರೆಬಲ್: ಜಾನು ಫೈಟಿಂಗ್ಗೆ ವೀಕ್ಷಕರು ಸುಸ್ತು
Lakshmi Nivasa: ರೀ... ರೀ... ಅಂತಿದ್ದ ಚಿನ್ನುಮರಿ ಈಗ ರೆಬಲ್: ಜಾನು ಫೈಟಿಂಗ್ಗೆ ವೀಕ್ಷಕರು ಸುಸ್ತು
ಪತಿಯ ಸೈಕೋ ಪ್ರೀತಿಗೆ ಬೇಸತ್ತು ತಿರುಗಿಬಿದ್ದಿರುವ ಜಾಹ್ನವಿ, ಇದೀಗ ಆತನ ಮತ್ತೊಂದು ಕ್ರೂರ ಮುಖವನ್ನು ಕಂಡಿದ್ದಾಳೆ. ತನ್ನ ಅಣ್ಣನ ಅಮ್ಮನನ್ನು ಪಾರು ಮಾಡಲು ಮಾರುವೇಷದಲ್ಲಿ ಹೋಗಿ, ಗಂಡನಿಗೆ ತಿಳಿಯದಂತೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.

ರೋಚಕ ಟ್ವಿಸ್ಟ್
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಗಂಡನ ಅತಿಯಾದ ಸೈಕೋ ಪ್ರೀತಿಯೇ ಮುಳುವಾಗಿ, ತಲೆಮರೆಸಿಕೊಂಡಿದ್ದ ಜಾಹ್ನವಿಗೆ ಈಗ ಗಂಡನ ಇನ್ನೊಂದು ರೂಪವೂ ಗೊತ್ತಾಗಿದೆ. ಆತ ಈ ಜೀವನದಲ್ಲಿ ಸುಧಾರಿಸುವವನಲ್ಲ ಎಂದು ತಿರುಗಿ ಬಿದ್ದಿದ್ದಾಳೆ ಜಾಹ್ನವಿ.
ಪ್ರೀತಿಯ ಹೆಸರಿನಲ್ಲಿ ಟಾರ್ಚರ್
ಪ್ರೀತಿಯ ಹೆಸರಿನಲ್ಲಿ ಹೇಗೆ ಜಯಂತ್ ಟಾರ್ಚರ್ ಕೊಡುತ್ತಿದ್ನೋ, ಅದೇ ರೀತಿ ಜಾಹ್ನವಿ ಈಗ ಆತನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದೀಗ ತನ್ನ ಅಣ್ಣನ ಅಮ್ಮನನ್ನು ಜಯಂತ್ ಕೂಡಿಹಾಕಿ ಚಿತ್ರಹಿಂಸೆ ಕೊಡುವುದು ಜಾಹ್ನವಿಗೆ ತಿಳಿದಿದೆ. ವಿಶ್ವನ ಸಹಾಯದಿಂದ ಆಕೆ ಅಮ್ಮ ಎಲ್ಲಿದ್ದಾಳೆ ಎನ್ನುವುದನ್ನು ಪತ್ತೆ ಹಚ್ಚಿದ್ದಾಳೆ.
ರೆಬಲ್ ಆದ ಜಾಹ್ನವಿ
ಇದೀಗ ಗಂಡನನ್ನೇ ಯಾಮಾರಿಸಿ ವಿಶ್ವನ ಸಹಾಯದಿಂದ ಅಮ್ಮ ಇರುವ ಕಡೆಗೆ ಹೋಗಿ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಈ ಸಂದರ್ಭದಲ್ಲಿ ಆಕೆ ರೆಬಲ್ ಆಗಿದ್ದಾಳೆ.
ಮಾರುವೇಷದಲ್ಲಿ ಚಿನ್ನುಮರಿ
ಮಾರುವೇಷದಲ್ಲಿ ಹೋಗಿರುವ ಚಿನ್ನುಮರಿ ರೌಡಿಗಳ ಜೊತೆ ಫೈಟಿಂಗ್ ಮಾಡಿದ್ದಾಳೆ. ಅಷ್ಟಕ್ಕೂ ಇದಾಗಲೇ ಹಲವಾರು ಸೀರಿಯಲ್ಗಳಲ್ಲಿ ನಾಯಕಿಯರು ರೌಡಿಗಳ ಜೊತೆ ಫೈಟಿಂಗ್ ಮಾಡಿರುವುದನ್ನು ನೀವು ನೋಡಿರುತ್ತೀರಿ. ವೀಕ್ಷಕರ ಪೈಕಿ ಹೆಚ್ಚಿನವರು ಮಹಿಳೆಯರೇ ಆಗಿರುವ ಕಾರಣದಿಂದ ಈ ರೋಚಕತೆಯನ್ನು ಧಾರಾವಾಹಿಗಳಲ್ಲಿ ತರಲಾಗುತ್ತದೆ. ಅದೇ ರೀತಿ ಈಗ ಲಕ್ಷ್ಮೀ ನಿವಾಸದಲ್ಲಿಯೂ ಫೈಟಿಂಗ್ ದೃಶ್ಯವನ್ನು ಸೇರಿಸಲಾಗಿದೆ.
ಸೇಡು ತೀರಿಸಿಕೊಳ್ಳಲು ಹವಣಿಕೆ
ಗಂಡನಿಗೆ ಡೌಟೇ ಬಾರದಂತೆ ರೀ ರೀ... ಎನ್ನುತ್ತಲೇ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಜಾಹ್ನವಿಯ ರೆಬಲ್ ರೂಪ ನೋಡಿ ವೀಕ್ಷಕರಂತೂ ಫುಲ್ ಖುಷ್ ಆಗಿದ್ದಾರೆ.
ಸಿಕ್ಕಿಬಿದ್ದ ಸಂತೋಷ್
ಅದೇ ಇನ್ನೊಂದೆಡೆ, ವಿಶ್ವನ ಅಮ್ಮನ ಸಾಯಿಸಿದ್ದು ವಿಡಿಯೋ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಸಂತೋಷ್ ಜಯಂತ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆದರೆ, ಜಾಹ್ನವಿಗೋಸ್ಕರ ಆತನನ್ನು ಕ್ಷಮಿಸಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

